ಕರ್ನಾಟಕ

karnataka

ETV Bharat / bharat

ವೈಷ್ಣವ ಜನತೋ ಮೂಲಕ ಮಹಾತ್ಮನಿಗೆ ಗೌರವ ನಮನ; ಈಟಿವಿ ಭಾರತಕ್ಕೆ ಮೋದಿ ಮೆಚ್ಚುಗೆ - ಈ ಟಿವಿ ಭಾರತ

ರಾಷ್ಟ್ರಪಿತನ 150ನೇ ಜನ್ಮ ಸ್ಮರಣೆ ಅಂಗವಾಗಿ ಈಟಿವಿ ಭಾರತನಿಂದ ಲೋಕಾರ್ಪಣೆಗೊಂಡಿರುವ ವೈಷ್ಣವ ಜನತೋ ಹಾಡಿಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ.

ಗಾಂಧಿ 150ನೇ ಜನ್ಮ ದಿನಾಚರಣೆ

By

Published : Oct 2, 2019, 7:33 PM IST

Updated : Oct 2, 2019, 7:58 PM IST

ನವದೆಹಲಿ:ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ಸಂಭ್ರಮಾಚರಣೆಯಲ್ಲಿ ಈಟಿವಿ ಭಾರತ ಅವರ ಮೆಚ್ಚಿನ ಗೀತೆ ವೈಷ್ಣವ ಜನತೋ ಹಾಡನ್ನು ದೇಶದ ಮಹಾನ್​ ಗಾಯಕರಿಂದ ಹಾಡಿಸಿ, ನಿನ್ನೆ ಲೋಕಾರ್ಪಣೆಗೊಳಿಸಿತ್ತು. ಇದೀಗ ಈಟಿವಿ ಭಾರತಕ್ಕೆ ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈಟಿವಿ ಭಾರತ ಈ ಕಾರ್ಯಕ್ಕೆ ಈಗಾಗಲೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ರೈಲ್ವೆ ಸಚಿವ ಪಿಯೂಷ್​ ಗೋಯಲ್​, ಖ್ಯಾತ ಗಾಯಕ ವಿಜಯಪ್ರಕಾಶ್​ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಇದೇ ವಿಡಿಯೋ ರಿಟ್ವಿಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪೂಜ್ಯ ಬಾಪು ಅವರ ನೆಚ್ಚಿನ ಗೀತೆಯನ್ನು ಅದ್ಭುತವಾಗಿ ಪ್ರಸ್ತುತ ಪಡಿಸಿದ್ದಕ್ಕೆ ನಿಮಗೆ ಹಾರ್ದಿಕ ಧನ್ಯವಾದಗಳು. ಮಹಾತ್ಮ ಗಾಂಧಿಯವರ ಸ್ವಚ್ಛ ಭಾರತ ಕನಸು ಅಭಿಯಾನ ಯಶಸ್ವಿಗೊಳಿಸುವಲ್ಲಿ ಮಾಧ್ಯಮದ ಪಾತ್ರ ಹಾಗೂ ನಡೆದುಕೊಂಡ ರೀತಿ ಬಹಳ ಮುಖ್ಯವಾಗಿದ್ದು, ಇನ್ಮುಂದೆ ಏಕ ಬಳಕೆ ಪ್ಲಾಸ್ಟಿಕ್​ ಬಳಕೆ ನಿರ್ಮೂಲನೆ​ ಯೋಜನೆ ಯಶಸ್ವಿಗೊಳಿಸಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ.

ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ನಡೆದ ಗಾಂಧಿಯವರ 150ನೇ ಜನ್ಮ ಸಂಭ್ರಮಾಚರಣೆ ವೇಳೆ ಸಹ ಈ ಹಾಡು ಪ್ರಸಾರಗೊಂಡಿದ್ದು, ವಿಶೇಷವಾಗಿದೆ.

ಈ ಮಧ್ಯೆ ಕೇಂದ್ರ ಸಚಿವ ಡಿವಿ ಸದಾನಂದಗೌಡ ಸಹ ತಮ್ಮ ಟ್ವೀಟರ್​ನಲ್ಲಿ ಈಟಿವಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮದಿನಾಚರಣೆ ಪ್ರಯುಕ್ತ " ಈಟಿವಿ ಭಾರತ " ಸಮಯೋಚಿತವಾಗಿ ಬಾಪೂಜಿಗೆ ವಿಶೇಷ ಗೀತ ನಮನ ಸಲ್ಲಿಸಿದೆ. ದೇಶದ ಹೆಸರಾಂತ ಗಾಯಕರು ಗಾಂಧೀಜಿಗೆ ಬಹುಪ್ರಿಯವಾದ " ವೈಷ್ಣವ ಜನತೋ..ತೆನೆ ರೆ ಕಹಿಯೇ..."ಹಾಡನ್ನು ಮಧುರವಾಗಿ ಹಾಡಿದ್ದು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

Last Updated : Oct 2, 2019, 7:58 PM IST

ABOUT THE AUTHOR

...view details