ಭುಜ್ (ಗುಜರಾತ್ ):ಮೇ 12 ರಂದು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದಲ್ಲಿ ಭುಜ್ ಭೂಕಂಪದ ಬಗ್ಗೆ ಪ್ರಸ್ತಾಪಿಸಿದ್ದರು, ಆ ಬಳಿಕ ಪ್ರಧಾನಿಯವರ ಹಳೆಯ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಭುಜ್ ಭೂಕಂಪದ ಸಂದರ್ಭದಲ್ಲಿ ಪ್ರಧಾನಿ ಮೋದಿ ಗುಜರಾತ್ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆ ವೇಳೆ ಅವರನ್ನು ಬೈಕ್ನಲ್ಲಿ ಕುಳ್ಳಿರಿಸಿಕೊಂಡು ಭೂಕಂಪದಿಂದ ಹಾನಿಗೊಳಗಾಗಿದ್ದ ಭುಜ್‌ನ ಪಡೇಶ್ವರ ಚೌಕ್ ಬಳಿಯ ಮಹಾಳೇಶ್ವರ ಪ್ರದೇಶದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದ ಫೋಟೋವನ್ನು ಮೋದಿಯವರ ಆಗಿನ ಸಹವರ್ತಿ ಪಂಕಜ್ ಲಾಲ್ ಎಂಬವರು ಬಿಡುಗಡೆ ಮಾಡಿದ್ದು, ಆ ಪೋಟೋ ಈಗ ಎಲ್ಲೆಡೆ ಹರಿದಾಡುತ್ತಿದೆ.