ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೆಹಲಿಯ ರಾಜಪಥದಲ್ಲಿರುವ ಹುನಾರ್ ಹಾತ್ಗೆ ಧಿಡೀರ್ ಭೇಟಿ ನೀಡಿ ಅಚ್ಚರಿ ಸೃಷ್ಟಿಸಿದ್ದಾರೆ. ಕೇಂದ್ರ ಸಚಿವ ಸಂಪುಟ ಸಭೆ ನಂತರ ಹುನಾರ್ ಹಾತ್ಗೆ ಭೇಟಿ ನೀಡಿದ ಅವರು, ಅಲ್ಲಿನ ಕುಶಲಕರ್ಮಿಗಳ ಜೊತೆಗೆ ಸಂವಾದ ನಡೆಸಿ ಖುಷಿ ಪಟ್ಟಿದ್ದಾರೆ. ಈ ಕಾರ್ಯಕ್ರಮಕ್ಕೆ ಮೋದಿ ಧಿಡೀರ್ ಭೇಟಿ ನೀಡಿದ್ದರಿಂದ ಅಲ್ಲಿ ನೆರೆದಿದ್ದವರು ಆಶ್ಚರ್ಯ ಚಕಿತರಾದರು.
ನವದೆಹಲಿಯ ಹುನಾರ್ ಹಾತ್ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಈ ವೇಳೆ, ಪ್ರಧಾನಿ ಮೋದಿ ಗೋದಿ ಹಿಟ್ಟಿನಿಂದ ಮಾಡಿದ ಲಿಟ್ಟಿ ಚೋಖಾ ಎಂಬ ತಿಂಡಿ ಸೇವಿಸಿ ಕುಲ್ಹಾದ್ ಟೀ ಸೇವಿಸಿ ಖುಷಿ ಪಟ್ಟರು. ಸುಮಾರು 50 ನಿಮಿಷಗಳ ಕಾಲ ಅಲ್ಲಿನ ಜನರೊಂದಿಗೆ ಬೆರತು ಪ್ರಧಾನಿ ಸಂತಸಪಟ್ಟರು. ಪ್ರಧಾನಿಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಸಾಥ್ ನೀಡಿದರು.
ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯವು ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಹುನಾರ್ ಹಾತ್ ಆಯೋಜಿಸಿತ್ತದೆ. ವಿವಿಧ ರೀತಿಯ ಕುಶಲ ಕರ್ಮಿಗಳು ಇಲ್ಲಿ ಪಾಲ್ಗೊಳ್ಳುತ್ತಾರೆ. ಚಿತ್ರಕಲೆ, ವಾಸ್ತುಶಿಲ್ಪ, ಪಾಕ ಶಾಲೆ , ಸಂಗೀತಕ್ಕೆ ಸಂಬಂಧಿಸಿದ ಕುಶಲ ಕರ್ಮಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಕೌಶಲ್ ಕೋ ಕಾಮ್ ಎಂಬ ಹೆಸರಲ್ಲಿ ಆಯೋಜಿಸಿದ್ದ ಹುನಾರ್ ಹಾತ್ನಲ್ಲಿ ದೇಶಾದ್ಯಂತ ನೂರಾರು ಪ್ರಮುಖ ಕುಶಲಕರ್ಮಿಗಳು ಭಾಗವಹಿಸಿದ್ದರು.
ಪಾಕ ಪ್ರವೀಣರಿಗಾಗಿಯೇ ಹಲವರು ರಾಜ್ಯಗಳ ಸಾಂಪ್ರದಾಯಿಕ ಭಕ್ಷ್ಯಗಳನ್ನು ಪರಿಚಯಿಸುವ ಬಾವರ್ಚಿಖಾನಾ ಅನ್ನು ಸ್ಥಾಪಿಸಲಾಗಿತ್ತು. ಫೆಬ್ರವರಿ 22ರವರೆಗೆ ನಡೆಯಲಿರುವ ಈ ಹುನಾರ್ ಹಾತ್ ಕಾರ್ಯಕ್ರಮದಲ್ಲಿ ಅಪಾರ ಜನಸಂದಣಿ ಇತ್ತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ.