ನವದೆಹಲಿ:ತೆರಿಗೆ ವ್ಯವಸ್ಥೆಯಲ್ಲಿ ಮತ್ತಷ್ಟು ಪಾರದರ್ಶಕತೆಯನ್ನು ತರುವ ಸಲುವಾಗಿ ಪ್ರಧಾನಿ ಮೋದಿ ಮೂಲಕ ''ಪಾರದರ್ಶಕ ತೆರಿಗೆ ಮತ್ತು ಪ್ರಾಮಾಣಿಕತೆಗೆ ಗೌರವ'' ಎಂಬ ಹೊಸ ಪರಿಕಲ್ಪನೆಗೆ ಚಾಲನೆ ನೀಡಿದರು.
ದೇಶದಲ್ಲಿ ರಚನಾತ್ಮಕ ಬದಲಾವಣೆ ನಡೆಯುತ್ತಿದ್ದು, ತೆರಿಗೆ ವಿಧಾನದಲ್ಲೂ ಕೂಡಾ ಅಪಾರ ಬದಲಾವಣೆಗಳಾಗುತ್ತಿದೆ. ದೇಶದಲ್ಲಿ ತೆರಿಗೆ ಸುಧಾರಣೆ ಹೊಸ ಹಂತ ತಲುಪುತ್ತಿದೆ ಎಂದ ಅವರು ತೆರಿಗೆದಾರರದಿಂದ ದೇಶ ಮುಂದುವರೆಯುತ್ತಿದೆ. ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ನಮ್ಮ ನೀತಿಯಾಗಿದ್ದು, ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸುವ ದಿನಗಳು ಆರಂಭವಾಗಿವೆ ಎಂದು ಹೇಳಿದರು.
ಕಾನೂನುಗಳನ್ನು ಸಾರ್ವಜನಿಕ ಸ್ನೇಹಿಯಾಗಿ ಮಾಡಲು ಒತ್ತು ನೀಡಲಾಗುತ್ತದೆ. ತೆರಿಗೆ ಪಾವತಿ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ತೆರಿಗೆ ವಂಚಿಸಿದರೆ ನಿಮಗೆ ನೀವೇ ವಂಚಿಸಿಕೊಂಡಂತಾಗುತ್ತದೆ. ತೆರಿಗೆ ವಂಚನೆ ಕೆಲಸಕ್ಕೆ ನೀವು ಕೈ ಹಾಕಬೇಡಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
ಕೆಲವೊಮ್ಮೆ ನಿರ್ಧಾರಗಳನ್ನು ಒತ್ತಡದಿಂದ ತೆಗೆದುಕೊಳ್ಳಲಾಗುತ್ತದೆ. ಇದರಿಂದಾಗಿ ಕೆಲವು ನಿರೀಕ್ಷಿತ ಫಲಿತಾಂಶಗಳನ್ನು ಸಾಧಿಸಲಾಗಲಿಲ್ಲ. ಈಗ ಆಲೋಚನೆ ಮತ್ತು ವಿಧಾನ ಎರಡೂ ಬದಲಾಗಿದೆ. ತೆರಿಗೆ ಸುಧಾರಣೆಗಾಗಿ ಹೊಸ ಈ ವೇದಿಕೆ ಕಲ್ಪಿಸಲಾಗಿದ್ದು, ದೇಶದಲ್ಲಿ ಅತಿ ಮುಖ್ಯ ಹೆಜ್ಜೆಯಾಗಲಿದೆ. ನಮ್ಮ ಆತ್ಮ ಚಿಂತನೆಗೆ ಆತ್ಮ ನಿರ್ಭರ ಭಾರತ ಅವಶ್ಯಕ ಎಂದು ಈ ವೇಳೆ ಪ್ರಧಾನಿ ಮೋದಿ ಉಲ್ಲೇಖಿಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳು ನಡೆಯಲಿದ್ದು, ಸೆಪ್ಟೆಂಬರ್ 25ರಿಂದ ವಿವಿಧ ಲಕ್ಷಣಗಳನ್ನು ಒಳಗೊಳ್ಳಲಿರುವ ಹೊಸ ತೆರಿಗೆ ನೀತಿ ವೇದಿಕೆ ಕಲ್ಪಿಸಲಾಗಿದ್ದು, ಅದು ಇಂದಿನಿಂದ ಆರಂಭವಾಗಲಿದೆ ಎಂದು ಸ್ಪಷ್ಟನೆ ನೀಡಿದರು.
''ಪಾರದರ್ಶಕ ತೆರಿಗೆ ಮತ್ತು ಪ್ರಾಮಾಣಿಕತೆಗೆ ಗೌರವ'' ವೇದಿಕೆಗೆ ಚಾಲನೆ ನೀಡುವ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ದರು.