ಕರ್ನಾಟಕ

karnataka

ETV Bharat / bharat

ಗರೀಬ್​ ಕಲ್ಯಾಣ್​ ರೋಜ್​​​​ಗಾರ್​ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ: ಹಳ್ಳಿಗರಿಗೆ ಶಬ್ಬಾಸ್​​​ಗಿರಿ - Garib Kalyan Rojgar Abhiyaan

ವರ್ಷಕ್ಕೆ 125 ದಿನಗಳ ಕಾಲ ಕಾರ್ಮಿಕರಿಗೆ ಉದ್ಯೋಗ ಒದಗಿಸುವ ಗರೀಬ್​ ಕಲ್ಯಾಣ್​ ರೋಜ್​ಗಾರ್​ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ಬಿಹಾರದ ಖಗೇರಿಯಾದಲ್ಲಿ ಆರಂಭವಾಗಿರುವ ಈ ಯೋಜನೆ, ಶೀಘ್ರದ್ಲಲೇ ಆರು ರಾಜ್ಯಗಳ 116 ಗ್ರಾಮಗಳಲ್ಲಿ ಜಾರಿಗೆ ಬರಲಿದೆ.

PM Narendra Modi
ಗರೀಬ್​ ಕಲ್ಯಾಣ್​ ರೋಜ್​ಗಾರ್​ ಅಭಿಯಾನ

By

Published : Jun 20, 2020, 1:13 PM IST

ನವದೆಹಲಿ: ಗರೀಬ್​ ಕಲ್ಯಾಣ್​ ರೋಜ್​ಗಾರ್​ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ನೀಡಿದರು.

ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪಿಎಂ ಮೋದಿ, ಇಂದು ಐತಿಹಾಸಿಕ ದಿನ, ಬಡವರ ಕಲ್ಯಾಣ ಮತ್ತು ಜೀವನೋಪಾಯಕ್ಕಾಗಿ ಗರೀಬ್​ ಕಲ್ಯಾಣ್​ ರೋಜ್​ಗಾರ್ ಯೋಜನೆ ಪ್ರಾರಂಭಿಸಲಾಗಿದೆ. ಇದು ಕಾರ್ಮಿಕರಿಗೆ, ಗ್ರಾಮಗಳಲ್ಲಿ ವಾಸಿಸುವ ಯುವಕರಿಗೆ ಮತ್ತು ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ. ಅದರಲ್ಲೂ ಲಾಕ್‌ಡೌನ್ ಸಮಯದಲ್ಲಿ ತಮ್ಮ ಗ್ರಾಮಗಳಿಗೆ ಮರಳಿದ ವಲಸೆ ಕಾರ್ಮಿಕರಿಗೆ ಇದರ ಹೆಚ್ಚಿನ ಪ್ರಯೋಜನವಾಗಲಿದೆ. ಈ ಮೂಲಕ ವಲಸೆ ಕಾರ್ಮಿಕರು ತಮ್ಮ ಪ್ರಯತ್ನ ಮತ್ತು ಕೌಶಲ್ಯದ ಮೂಲಕ ಅವರವರ ಗ್ರಾಮವನ್ನು ಅಭಿವೃದ್ಧಿಪಡಿಸುತ್ತಾರೆ ಎಂದು ಹೇಳಿದರು.

"ನನ್ನ ಕಾರ್ಮಿಕ ಸ್ನೇಹಿತರೇ, ದೇಶವು ನಿಮ್ಮ ಭಾವನೆ ಮತ್ತು ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುತ್ತದೆ. ಬಿಹಾರದ ಖಗೇರಿಯಾದಲ್ಲಿ ಪ್ರಾರಂಭಿಸಲಾಗುತ್ತಿರುವ ಈ ಕಾರ್ಯಕ್ರಮ ಶೀಘ್ರದ್ಲಲೇ ಆರು ರಾಜ್ಯಗಳ 116 ಗ್ರಾಮಗಳಲ್ಲಿ ಜಾರಿಯಾಗಲಿದೆ" ಎಂದು ಮೋದಿ ಭರವಸೆ ನೀಡಿದರು.

50,000 ಕೋಟಿ ರೂ. ಅನುದಾನದ ಗರೀಬ್​ ಕಲ್ಯಾಣ್​ ರೋಜ್​ಗಾರ್​ ಅಭಿಯಾನದಡಿ ವರ್ಷಕ್ಕೆ 125 ದಿನಗಳ ಕಾಲ ಕಾರ್ಮಿಕರಿಗೆ ಉದ್ಯೋಗ ನೀಡಲಾಗುವುದು. ಬಿಹಾರ, ಉತ್ತರ ಪ್ರದೇಶ, ಒಡಿಶಾ, ಜಾರ್ಖಂಡ್, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಚಟುವಟಿಕೆಗಳನ್ನು 25 ವರ್ಗವಾಗಿ ವಿಂಗಡಿಸಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

ಭಾಷಣದ ಆರಂಭದಲ್ಲಿ ಜೂನ್ 15-16 ರಂದು ಪೂರ್ವ ಲಡಾಖ್​ನಲ್ಲಿ ಬಿಹಾರ್​ದ ಯೋಧರು ಪ್ರದರ್ಶಿಸಿದ ಶೌರ್ಯಕ್ಕೆ, ಅವರ ಬಲಿದಾನಕ್ಕೆ ಪ್ರತಿ ಬಿಹಾರಿ, ಇಡೀ ದೇಶದ ಜನತೆ ಹೆಮ್ಮೆಪಡುತ್ತಾರೆ ಎಂದು ಹೇಳಿದ ಮೋದಿ, ರಾಷ್ಟ್ರಕ್ಕಾಗಿ ಪ್ರಾಣತೆತ್ತ ಯೋಧರಿಗೆ ಗೌರವ ಸಲ್ಲಿಸಿದರು.

ಮಹಾಮಾರಿ ಕೊರೊನಾಗೆ ಜಗತ್ತೇ ಬೆಚ್ಚಿ ಬಿದ್ದಿರುವ ವೇಳೆಯಲ್ಲಿ ನೀವೆಲ್ಲರೂ ಧೈರ್ಯದಿಂದ ದೃಢವಾಗಿ ನಿಂತಿದ್ದೀರಿ. ಕೋವಿಡ್​ ವಿರುದ್ಧ ಭಾರತದ ಹಳ್ಳಿಗಳು ಹೋರಾಡಿದ ರೀತಿ ದೊಡ್ಡ ದೊಡ್ಡ ನಗರಗಳಿಗೆ ಪಾಠ ಕಲಿಸಿದೆ ಎಂದು ಇದೇ ವೇಳೆ ಮೋದಿ ಗ್ರಾಮಗಳನ್ನ ಹೊಗಳಿಸಿದರು.

ಇನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಹಾರ ಸಿಎಂ ನಿತೀಶ್ ಕುಮಾರ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್​, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ರೈಲ್ವೆ ಮಂಡಳಿಯ ಅಧ್ಯಕ್ಷರು ಸೇರಿದಂತೆ ಇತರರು ಭಾಗವಹಿಸಿದ್ದರು.

ABOUT THE AUTHOR

...view details