ನವದೆಹಲಿ: ಭಾರತ್ ಮಾತಾ ಕೀ ಜೈ ಘೋಷಣೆ ಇದೀಗ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದು, ಅವರ ಹೆಸರು ಬಳಕೆ ಮಾಡದೇ ಈ ಟಾಂಗ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
'ಭಾರತ್ ಮಾತಾ ಕೀ ಜೈ' ವಿಷಯವಾಗಿ ಮಾಜಿ ಪಿಎಂ ಸಿಂಗ್ ಕಾಲೆಳೆದ ಪ್ರಧಾನಿ ಮೋದಿ!? - ಡಾ.ಮನಮೋಹನ್ ಸಿಂಗ್
ಭಾರತ್ ಮಾತಾ ಕೀ ಘೋಷಣೆ ಇದೀಗ ದುರ್ಬಳಕೆಯಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ಡಾ. ಸಿಂಗ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಸಂಸದೀಯ ಸಭೆಯಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೆಲವರು ಭಾರತ್ ಮಾತಾ ಕೀ ಜೈ ಘೋಷಣೆ ಕೂಗಲು ಹಿಂದೆ ಮುಂದೆ ನೋಡುತ್ತಾರೆಂದು ಅವರ ಹೆಸರು ಉಲ್ಲೇಖ ಮಾಡದೇ ತಿರುಗೇಟು ನೀಡಿದ್ದಾರೆ. ದೇಶಭಕ್ತಿ ಹೆಚ್ಚಿಸುವ ಈ ಘೋಷಣೆ ಕೂಗಲು ಯಾಕೆ ಹಿಂದೇಟು ಹಾಕಬೇಕು ಎಂದು ಅವರು ಹೇಳಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಜವಾಹರಲಾಲ್ ನೆಹರೂ ಭಾಷಣ, ಬರಹ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಡಾ. ಮನಮೋಹನ್ ಸಿಂಗ್ ಕೆಲವೊಂದು ಸಂಘಟನೆಗಳು ಹಾಗೂ ಮುಖಂಡರು ತಮ್ಮ ಬೆಳೆ ಬೇಯಿಸಿಕೊಳ್ಳಲು ಈ ಘೋಷಣೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.