ಕರ್ನಾಟಕ

karnataka

ETV Bharat / bharat

"ಮನ್​ ಕಿ ಬಾತ್"​ನಲ್ಲಿ ಸಾರ್ವಜನಿಕರ ಅಭಿಪ್ರಾಯ ದಾಖಲಿಸಲು ಅವಕಾಶ - ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 68ನೇ ಆವೃತ್ತಿಗೆ ಜನರು ತಮ್ಮ ಮೌಲ್ಯಯುತವಾದ ಯೋಚನೆ ಮತ್ತು ಯೋಜನೆಗಳನ್ನು ಹಂಚಿಕೊಳ್ಳುವಂತೆ ದೇಶದ ಜನರಲ್ಲಿ ಕೇಳಿಕೊಂಡಿದ್ದಾರೆ. ದೇಶದ ಪ್ರಧಾನಿಗೆ ತಮ್ಮ ಆಲೋಚನೆ, ಯೋಜನೆ ಹೊಸ ವಿಚಾರ ತಿಳಿಸಲು, ಆಗಸ್ಟ್​ 10 ರಿಂದಲೇ ದೂರವಾಣಿ ಮಾರ್ಗಗಳು ತೆರೆಯಲಿದ್ದು, ದೂರವಾಣಿ ಕರೆ ಮಾಡಿ ಜನ ತಮ್ಮ ಅಭಿಪ್ರಾಯ ತಿಳಿಸಬಹುದು.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

By

Published : Aug 18, 2020, 12:39 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕಿ ಬಾತ್'ನ 68ನೇ ಆವೃತ್ತಿಗೆ ಜನರು ತಮ್ಮ ಮೌಲ್ಯಯುತವಾದ ಸಲಹೆ, ಯೋಚನೆ ಮತ್ತು ಯೋಜನೆಗಳನ್ನ ಪ್ರಧಾನಿ ಜತೆ ಹಂಚಿಕೊಳ್ಳಬಹುದು. ಜನ ಸಾಮಾನ್ಯರು ತಮ್ಮ ಯೋಚನೆಗಳನ್ನ ಹಂಚಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವಕಾಶ ಮಾಡಿಕೊಟ್ಟಿದ್ದಾರೆ.

ಪ್ರತಿ ತಿಂಗಳ ಕೊನೆಯ ಭಾನುವಾರದಂದು ನಡೆಯುವ ಕಾರ್ಯಕ್ರಮವು ಈ ತಿಂಗಳು ಆಗಸ್ಟ್ 30 ರಂದು ನಡೆಯಲಿದೆ.

ನಮೋ ಅಥವಾ ಮೈ-ಗವರ್ನ್​ಮೆಂಟ್​​ ಆ್ಯಪ್‌ನಲ್ಲಿ ತಮ್ಮ ಯೋಜನೆ - ಯೋಚನೆ ಹಾಗೂ ಸಲಹೆಗಳನ್ನ ಬರೆಯುವ ಮೂಲಕ ಅಥವಾ 1800-11-7800 ಗೆ ಕರೆ ಮಾಡಿ ತಮ್ಮ ಸಂದೇಶಗಳನ್ನು ರೆಕಾರ್ಡ್ ಮಾಡುವ ಮೂಲಕ, ಜನರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಲಹೆ - ಸೂಚನೆ - ಹೊಸ ಆಲೋಚನೆಗಳನ್ನ ಹಂಚಿಕೊಳ್ಳುವುದಕ್ಕಾಗಿ ಇದೇ ಆಗಸ್ಟ್​ 10 ರಿಂದಲೇ ದೂರವಾಣಿ ಮಾರ್ಗಗಳು ತೆರದಿರುತ್ತವೆ ಎಂದೂ ಅವರು ಹೇಳಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಪ್ರಧಾನಿ "ಆಗಸ್ಟ್​ 30ರಂದು ನಡೆಯಲಿರುವ ಈ ತಿಂಗಳ # ‌ಮನ್ ​​​ಕಿ ಬಾತ್‌ನಲ್ಲಿ ಏನು ಚರ್ಚಿಸಬೇಕು ಎಂದು ನೀವು ಭಾವಿಸುತ್ತೀರಿ? ಅದನ್ನ 1800-11-7800 ನಂಬರ್​ಗೆ ಡಯಲ್ ಮಾಡಿ ನಿಮ್ಮ ಸಂದೇಶ ರೆಕಾರ್ಡ್ ಮಾಡಿ. ಇಲ್ಲವೇ ನೀವು ನಮೋ ಅಪ್ಲಿಕೇಶನ್ ಅಥವಾ ಮೈ -ಗವರ್ನಮೆಂಟ್​ನಲ್ಲಿಯೂ ನಿಮ್ಮ ಅಭಿಪ್ರಾಯಗಳನ್ನ ದಾಖಲಿಸಬಹುದು ಎಂದಿರುವ ಪ್ರಧಾನಿ ನಿಮ್ಮ ಆಲೋಚನೆಗಳನ್ನು ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ.

ABOUT THE AUTHOR

...view details