ಕರ್ನಾಟಕ

karnataka

By

Published : Aug 8, 2020, 7:25 PM IST

ETV Bharat / bharat

ಕೊರೊನಾ ಹೋರಾಟದಲ್ಲಿ 'ಸ್ವಚ್ಛ ಭಾರತ ಅಭಿಯಾನ' ಮಹತ್ವದ ಪಾತ್ರ: ಮೋದಿ

ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಸ್ವಚ್ಛ ಭಾರತ ಅಭಿಯಾನ ಮಹತ್ವದ ಪಾತ್ರ ನಿರ್ವಹಿಸಿದ್ದು, ಒಂದು ವೇಳೆ ಈ ಸಾಂಕ್ರಾಮಿಕ 2014ರ ಮೊದಲೇ ಬಂದಿದ್ದರೆ, ಜನರು ಹೆಚ್ಚು ತೊಂದರೆಗೊಳಗಾಗುತ್ತಿದ್ದರು ಎಂದಿದ್ದಾರೆ.

Rashtriya Swachhata Kendra At Raj Ghat
Rashtriya Swachhata Kendra At Raj Ghat

ನವದೆಹಲಿ:ಸ್ವಚ್ಛ ಭಾರತ್​ ಮಿಷನ್​​ನ ಸಂವಾದಾತ್ಮಕ ಅನುಭವ ಕೇಂದ್ರವಾದ ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ಉದ್ಘಾಟನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇದೇ ವೇಳೆ ಶಾಲಾ ಮಕ್ಕಳೊಂದಿಗೆ ಮಾತುಕತೆ ನಡೆಸಿದರು.

ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ಉದ್ಘಾಟಿಸಿದ ನಮೋ

ಮಹಾತ್ಮ ಗಾಂಧೀಜಿಯವರ ಚಂಪಾರಣ್​ ಸತ್ಯಾಗ್ರಹದ ಶತಮಾನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಸ್ವಚ್ಛತ್ತಾ ಕೇಂದ್ರ ಉದ್ಘಾಟನೆ ಮಾಡಿದರು. ರಾಜ್​ಘಾಟ್​ ಬಳಿಯ ಆರ್​​ಎಸ್​ಕೆ ವೀಕ್ಷಣೆ ಮಾಡಿದ ಬಳಿಕ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ನಮೋ ಸಂವಾದ ನಡೆಸಿದರು.

ಇದಾದ ಬಳಿಕ ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳಿಂದ ಗಾಂಧೀಜಿಯವರಿಂದ ಪ್ರೇರಿತರಾದ ದೇಶದ ಲಕ್ಷಾಂತರ ಜನರು ಸ್ವಚ್ಛ ಭಾರತ್​ ಮಿಷನ್​ ಅನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದು, ಇದರಿಂದಲೇ ಕೇವಲ 60 ತಿಂಗಳಲ್ಲಿ 60 ಕೋಟಿ ಜನರಿಗೆ ಶೌಚಾಲಯ ಒದಗಿಸಲು ಸಾಧ್ಯವಾಗಿದೆ ಎಂದಿದ್ದಾರೆ.

ಕೊರೊನಾ ವೈರಸ್​​ನಂತಹ ಸಾಂಕ್ರಾಮಿಕ ರೋಗ 2014ಕ್ಕಿಂತಲೂ ಮೊದಲು ದೇಶದಲ್ಲಿ ಭುಗಿಲೆದ್ದಿದ್ದರೆ ಏನಾಗಬಹುದೆಂದು ನೀವೇ ಊಹಿಸಿ. ಆ ವೇಳೆ ಜನರು ಮಲ,ವಿಸರ್ಜನೆ ಮಾಡಲು ಹೊರ ಹೋಗುವ ಅನಿವಾರ್ಯವಿತ್ತು. ಆ ಸಮಯದಲ್ಲಿ ಲಾಕ್​ಡೌನ್​ ವಿಧಿಸಬಹುದಿತ್ತೇ? ಎಂದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸ್ವಚ್ಛ ಭಾರತ ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ ಎಂದರು.

ABOUT THE AUTHOR

...view details