ನವದೆಹಲಿ: ರಾಜಧಾನಿಯ ಡಾ.ಬಿ.ಡಿ ಮಾರ್ಗ್ದಲ್ಲಿರುವ ಸಂಸದರಿಗೆಂದೇ ನಿರ್ಮಿಸಲಾಗಿರುವ ಬಹು ಅಂತಸ್ತಿನ ಫ್ಲ್ಯಾಟ್ಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಇಂದು ಉದ್ಘಾಟಿಸಿದರು. ಈ ಸಂದರ್ಭ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತರಿದ್ದರು.
ಸಂಸದರಿಗಾಗಿ ನಿರ್ಮಾಣಗೊಂಡ ಬಹುಮಹಡಿ ಫ್ಲ್ಯಾಟ್ ಉದ್ಘಾಟಿಸಿದ ಪಿಎಂ
ಸಂಸತ್ ಸದಸ್ಯರಿಗಾಗಿ ನವದೆಹಲಿಯ ಡಾ. ಬಿಡಿ ಮಾರ್ಗ್ನಲ್ಲಿ ಕಟ್ಟಲಾಗಿರುವ ಬಹುಮಹಡಿ ಫ್ಲ್ಯಾಟ್ಗಳನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಉದ್ಘಾಟಿಸಿದರು.
80 ವರ್ಷಕ್ಕಿಂತಲೂ ಹಳೆಯದಾದ ಎಂಟು ಬಂಗಲೆಗಳನ್ನು 76 ಫ್ಲ್ಯಾಟ್ಗಳಾಗಿ ಪುನರ್ ಅಭಿವೃದ್ಧಿ ಮಾಡಲಾಗಿದೆ. ಹಾರೋಬೂದಿಯಿಂದ ತಯಾರಿಸಿದ ಇಟ್ಟಿಗೆ ಬಳಸಿ ಈ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಕಡಿಮೆ ವಿದ್ಯುತ್ ಬಳಕೆಗಾಗಿ ವಿಆರ್ವಿ ವ್ಯವಸ್ಥೆ, ನೀರಿನ ಸಂರಕ್ಷಣೆಗಾಗಿ ಕಡಿಮೆ ಹರಿವಿನ ವಸ್ತುಗಳು, ಮಳೆ ನೀರು ಕೊಯ್ಲು ವ್ಯವಸ್ಥೆ ಮತ್ತು ಛಾವಣಿ ಮೇಲೆ ಸೌರ ಸ್ಥಾವರ ಸೇರಿದಂತೆ ಪರಿಸರ ಸ್ನೇಹಿಯಾಗಿ ಈ ಫ್ಲ್ಯಾಟ್ಗಳನ್ನು ನಿರ್ಮಿಸಲಾಗಿದೆ.
ಮಂಜೂರಾದ ಹಣದಲ್ಲಿ ಶೇ. 14 ರಷ್ಟು ಹಣ ಉಳಿತಾಯದೊಂದಿಗೆ ಈ ಫ್ಲ್ಯಾಟ್ಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಮತ್ತು ಕೊರೊನಾ ಬಿಕ್ಕಟ್ಟಿನ ನಡುವೆಯೂ ನಿಗದಿತ ವೇಳೆಯೊಳಗೆ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ಪಿಎಂಒ ಪ್ರಕಟಣೆಯಲ್ಲಿ ತಿಳಿಸಿದೆ.