ಕೊಯಮತ್ತೂರು: ತಮಿಳುನಾಡಿನ ಸಂಸ್ಕೃತಿ, ಭಾಷೆ ಮತ್ತು ಜನರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಗೌರವವಿಲ್ಲ ಎಂದು ಕೊಯಮತ್ತೂರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪಾದಿಸಿದರು.
ಇಂದಿನಿಂದ ಜ.25ರ ವರೆಗೆ ತಮಿಳುನಾಡಿಗೆ ಮೂರು ದಿನಗಳ ಭೇಟಿಯಲ್ಲಿರುವ ರಾಹುಲ್ ಗಾಂಧಿ, ಮೊದಲ ದಿನ ಕೊಯಮತ್ತೂರಿಗೆ ಆಗಮಿಸಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ತಮಿಳು ಜನರು, ಭಾಷೆ ಮತ್ತು ಸಂಸ್ಕೃತಿಯು ತಮ್ಮ ಆಲೋಚನೆಗಳು ಮತ್ತು ಸಂಸ್ಕೃತಿಯ ಅಧೀನದಲ್ಲಿರಬೇಕೆಂದು ಪಿಎಂ ಮೋದಿ ಭಾವಿಸುತ್ತಾರೆ ಎಂದರು.