- ಅಹಮದಾಬಾದ್ನಿಂದ ಟ್ರಂಪ್ ದಂಪತಿ ನಿರ್ಗಮನ
- ಉತ್ತರ ಪ್ರದೇಶದ ಆಗ್ರಾದತ್ತ ಪ್ರಯಾಣ ಬೆಳೆಸಿದ ಡೊನಾಲ್ಡ್ ಟ್ರಂಪ್, ಮೆಲಾನಿಯಾ ಟ್ರಂಪ್
- ತಾಜ್ ಮಹಾಲ್ಗೆ ಭೇಟಿ ನೀಡಲಿರುವ ಟ್ರಂಪ್ ದಂಪತಿ
ಅಹಮದಾಬಾದ್ನಿಂದ ಆಗ್ರಾಕ್ಕೆ ಹೊರಟ ಟ್ರಂಪ್ ದಂಪತಿ
15:01 February 24
ಆಗ್ರಾಕ್ಕೆ ಪ್ರಯಾಣ ಬೆಳೆಸಿದ ಟ್ರಂಪ್ ದಂಪತಿ
14:30 February 24
ಡೊನಾಲ್ಡ್ ಟ್ರಂಪ್ಗೆ ಮೋದಿ ಧನ್ಯವಾದ
- ಭಾರತ-ಅಮೆರಿಕ ನಡುವಿನ ವಿಶ್ವಾಸ ಮತ್ತಷ್ಟು ಹೆಚ್ಚಿದೆ
- ಟ್ರಂಪ್ ತಮ್ಮ ಭಾಷಣದ ಮೂಲಕ ಭಾರತದ ಗೌರವವನ್ನ ಹೆಚ್ಚಿಸಿದ್ದಾರೆ
- ಡೊನಾಲ್ಡ್ ಟ್ರಂಪ್ಗೆ ಮೋದಿ ಧನ್ಯವಾದ
14:24 February 24
- ಅಮೆರಿಕ-ಭಾರತ ನಡುವೆ ವ್ಯಾಪಾರ ವಹಿವಾಟಿಗೆ ಇದ್ದ ತಡೆಗೋಡೆ ತೆಗೆದುಹಾಕಿದ್ದೇವೆ
- ಭಾರತ-ಅಮೆರಿಕ ನಡುವಿನ ವಹಿವಾಟು ಶೇ. 40ರಷ್ಟು ಹೆಚ್ಚಾಗಿದೆ
- ಅಮೆರಿಕದ ವ್ಯಾಪಾರ ವಹಿವಾಟು ಬಹುಪಾಲು ಭಾರತ ಸೇರಿದಂತೆ ದಕ್ಷಿಣ ಏಷ್ಯಾ ದೇಶಗಳ ಮೇಲೆ ನಿಂತಿದೆ
- ನನ್ನ ಜೊತೆ ಭಾರತಕ್ಕೆ ಬಂದಿರುವ ಇವಾಂಕಾಳಿಗೂ ಧನ್ಯವಾದ
- ಚಂದ್ರಯಾನ ಕಾರ್ಯಕ್ರಮದ ಮೂಲಕ ಭಾರತ ನಮಗೆ ಸ್ಫೂರ್ತಿಯಾಗಿದೆ
- ಬರುವ ದಿನಗಳಲ್ಲಿ ಮಾನವ ಸಹಿತ ರಾಕೆಟ್ ಉಡಾವಣೆಗೆ ಭಾರತ ಯತ್ನಿಸುತ್ತಿದೆ, ಅದಕ್ಕೂ ನಮ್ಮ ಸಹಕಾರ ಇರಲಿದೆ
- ಗೋಲ್ಡನ್ ಟೆಂಪಲ್, ಜಾಮಾ ಮಸೀದಿ, ಹಿಮಾಲಯಾ, ಗೋವಾ ಸೇರಿ ಹಲವು ಸ್ಥಳಗಳಿಗೆ ಭಾರತ ಪ್ರಸಿದ್ಧ
- ಭಾರತದ ನಿಜವಾದ ಶಕ್ತಿ ಏನೆಂಬುದು ಈ ಜನಸ್ತೋಮ ನೋಡಿ ಅರ್ಥವಾಗುತ್ತಿದೆ
- ಇಂಥ ಅದ್ಭುತ ಸ್ವಾಗತ ನೀಡಿದ ಮೋದಿ ಅವರಿಗೆ ಧನ್ಯವಾದ
- ಗಾಡ್ ಬ್ಲೆಸ್ ಇಂಡಿಯಾ, ಗಾಡ್ ಬ್ಲೆಸ್ ಅಮೆರಿಕ ಎಂದ ಟ್ರಂಪ್
14:21 February 24
ಚಂದ್ರಯಾನ ಕಾರ್ಯಕ್ರಮದ ಮೂಲಕ ಭಾರತ ನಮಗೆ ಸ್ಫೂರ್ತಿಯಾಗಿದೆ: ಟ್ರಂಪ್
- ಅಮೆರಿಕ-ಭಾರತ ನಡುವೆ ವ್ಯಾಪಾರ ವಹಿವಾಟಿಗೆ ಇದ್ದ ತಡೆಗೋಡೆ ತೆಗೆದುಹಾಕಿದ್ದೇವೆ
- ಭಾರತ-ಅಮೆರಿಕ ನಡುವಿನ ವಹಿವಾಟು ಶೇ. 40ರಷ್ಟು ಹೆಚ್ಚಾಗಿದೆ
- ಅಮೆರಿಕದ ವ್ಯಾಪಾರ ವಹಿವಾಟು ಬಹುಪಾಲು ಭಾರತ ಸೇರಿದಂತೆ ದಕ್ಷಿಣ ಏಷ್ಯಾ ದೇಶಗಳ ಮೇಲೆ ನಿಂತಿದೆ
- ನನ್ನ ಜೊತೆ ಭಾರತಕ್ಕೆ ಬಂದಿರುವ ಇವಾಂಕಾಳಿಗೂ ಧನ್ಯವಾದ
- ಚಂದ್ರಯಾನ ಕಾರ್ಯಕ್ರಮದ ಮೂಲಕ ಭಾರತ ನಮಗೆ ಸ್ಫೂರ್ತಿಯಾಗಿದೆ
- ಬರುವ ದಿನಗಳಲ್ಲಿ ಮಾನವ ಸಹಿತ ರಾಕೆಟ್ ಉಡಾವಣೆಗೆ ಭಾರತ ಯತ್ನಿಸುತ್ತಿದೆ, ಅದಕ್ಕೂ ನಮ್ಮ ಸಹಕಾರ ಇರಲಿದೆ
- ಗೋಲ್ಡನ್ ಟೆಂಪಲ್, ಜಾಮಾ ಮಸೀದಿ, ಹಿಮಾಲಯಾ, ಗೋವಾ ಸೇರಿ ಹಲವು ಸ್ಥಳಗಳಿಗೆ ಭಾರತ ಪ್ರಸಿದ್ಧ
14:17 February 24
ದಕ್ಷಿಣ ಏಷ್ಯಾದ ಏಳಿಗೆಗೆ ಒತ್ತು ಕೊಡುತ್ತೇವೆ: ಟ್ರಂಪ್
- ಇಡೀ ವಿಶ್ವವನ್ನೇ ಕಾಡಿದ್ದ ಐಸಿಸ್ ನಾಯಕನನ್ನು ನಾವು ಅಟ್ಟಾಡಿಸಿ ಕೊಂದಿದ್ದೇವೆ
- ಭಯೋತ್ಪಾದನೆಯನ್ನು ಹತ್ತಿಕ್ಕಲು ಅಮೆರಿಕವು ಭಾರತಕ್ಕೆ ಸಹಾಯ ಮಾಡುತ್ತದೆ
- ಎಲ್ಲ ದೇಶಗಳೂ ತಮ್ಮ ಗಡಿ ರಕ್ಷಣಗೆ ಹೆಚ್ಚು ಗಮನ ಕೊಡುತ್ತವೆ.
- ಭಾರತ, ಪಾಕ್ ಜೊತೆ ನಮಗೆ ಒಳ್ಳೆಯ ಸಂಬಂಧ ಇದೆ, ದಕ್ಷಿಣ ಏಷ್ಯಾದ ಏಳಿಗೆಗೆ ಒತ್ತು ಕೊಡುತ್ತೇವೆ
- ಅಮೆರಿಕ-ಭಾರತ ನಡುವೆ ವ್ಯಾಪಾರ ವಹಿವಾಟಿಗೆ ಇದ್ದ ತಡೆಗೋಡೆ ತೆಗೆದುಹಾಕಿದ್ದೇವೆ
14:14 February 24
'ಅಮೆರಿಕವು ಭಾರತದೊಟ್ಟಿಗೆ ದ್ವಿಪಕ್ಷೀಯ ವ್ಯವಹಾರ ಹೊಂದಲು ಉತ್ಸುಕಾವಾಗಿದೆ'
- ಭಾರತದ ಎಲ್ಲೇ ಹೋದರೂ ಕೇಳಿಬರುವ ಊರಿನ ಹೆಸರು ಗುಜರಾತ್
- ಅಮೆರಿಕವು ಭಾರತದೊಟ್ಟಿಗೆ ದ್ವಿಪಕ್ಷೀಯ ವ್ಯವಹಾರ ಹೊಂದಲು ಉತ್ಸುಕಾವಾಗಿದೆ
- ಭಾರತೀಯ ಸೇನೆಯು ಅಮೆರಿಕದ ನೆರವಿನೊಂದಿಗೆ ಹಿಂದಿಗಿಂತಲೂ ಶಕ್ತಿಯುತವಾಗಿದೆ
- ನಾನು ಮತ್ತು ನನ್ನ ಪತ್ನಿ, ಮಹಾತ್ಮ ಗಾಂಧಿ ಅವರ ಆಶ್ರಮಕ್ಕೆ ಭೇಟಿ ನೀಡಿ ಖುಷಿಪಟ್ಟೆವು
- ಈ ಸಂಜೆ ನಾವು ತಾಜ್ ಮಹಲ್ ನೋಡಲು ಬಹಳ ಕಾತುರರಾಗಿದ್ದೇವೆ
- ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಭಾರತ ಬೆಳೆಯಲು ಅಮೆರಿಕ ಸದಾ ಸಹಾಯ ಮಾಡುತ್ತದೆ
- ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆಗೆ ನೆರವಾಗುವ ಒಪ್ಪಂದಕ್ಕೂ ನಾವು ಸಹಿಮಾಡಲಿದ್ದೇವೆ
14:05 February 24
'ಇಡೀ ವಿಶ್ವಕ್ಕೇ ಭಾರತ ಒಂದು ಕನಸಿನಂತೆ ಕಾಣುತ್ತಿದೆ'
- ಇಡೀ ವಿಶ್ವಕ್ಕೇ ಭಾರತ ಒಂದು ಕನಸಿನಂತೆ ಕಾಣುತ್ತಿದೆ, ಇದಕ್ಕೆ ಕಾರಣ ಮೋದಿ ಎಂದರೆ ತಪ್ಪಲ್ಲ
- ಸ್ವಾಮಿ ವೀವೇಕಾನಂದರ ಹೆಸರನ್ನು ತಪ್ಪಾಗಿ ಉಚ್ಛರಿಸಿದರೂ ಅವರಿಂದ ಸ್ಫೂರ್ತಿ ಪಡೆದಿರುವೆ ಎಂದ ಟ್ರಂಪ್
- ಬಾಲಿವುಡ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ದೊಡ್ಡಣ್ಣ
- ಡಿಡಿಎಲ್ಜೆ ಸಿನಿಮಾ ಬಗ್ಗೆಯೂ ಟ್ರಂಪ್ ಮಾತು
- ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಹೆಸರು ಉಲ್ಲೇಖ
- ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಹೆಸರಲ್ಲಿ ಸ್ಟೇಡಿಯಂ ಕಟ್ಟಿದ್ದು ಗಮನಾರ್ಹ
- ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭಾರತ ಹೆಸರುವಾಸಿ
- ಸರ್ವಧರ್ಮೀಯರೂ ಇಲ್ಲಿ ಸುಖ, ಶಾಂತಿಯಿಂದ ಬದುಕಿದ್ದಾರೆ ಇದು ವಿಶ್ವಕ್ಕೇ ಒಂದು ಪಾಠ
- ನಿಮ್ಮ ಒಗ್ಗಟ್ಟಿನಿಂದ ವಿಶ್ವ ಹಾಗೂ ಅಮೆರಿಕನ್ನರು ಕಲಿಯಬೇಕಾದದ್ದು ಬಹಳಷ್ಟಿದೆ ಎಂದ ಟ್ರಂಪ್
13:58 February 24
'ನಮಸ್ತೆ ಟ್ರಂಪ್'
- ನಮಸ್ತೆ ಎಂದು ಭಾಷಣ ಆರಂಭಿಸಿದ ಟ್ರಂಪ್
- ಭಾರತೀಯರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ
- ಪ್ರಧಾನಿ ಮೋದಿ ಬರೀ ಗುಜರಾತ್ ಅಲ್ಲ, ಇಡೀ ದೇಶಕ್ಕೇ ನೀವು ಹೆಮ್ಮೆಯ ಮಗ
- ಭಾರತದ ಬಗ್ಗೆ ನನಗೆ ಹೆಮ್ಮೆ ಇದೆ
- ಭಾರತದ ಪ್ರಜಾಪ್ರಭುತ್ವ, ವಿವಿಧತೆಯಲ್ಲಿ ಏಕತೆ ನಮಗೆ ಸ್ಫೂರ್ತಿ
- ಮುಂದಿನ ದಿನಗಳಲ್ಲಿ ಭಾರತ-ಅಮೆರಿಕ ನಡುವೆ ಗಮನಾರ್ಹ ದ್ವಿಪಕ್ಷೀಯ ಒಪ್ಪಂದ
- 320 ಮಿಲಿಯನ್ ಜನಗಳು ಇಂಟರ್ನೆಟ್ ಪಡೆದಿದ್ದಾರೆ
- ಮೋದಿ ಅವರ ಆಡಳಿತದಲ್ಲಿ ಬಡತನ ನಿವಾರಣೆಯಾಗುವುದರಲ್ಲಿ ಅನುಮಾನವಿಲ್ಲ
13:44 February 24
'ನಮಸ್ತೆ ಟ್ರಂಪ್' ಕಾರ್ಯಕ್ರಮಕ್ಕೆ ಚಾಲನೆ
- ಭಾರತ ಮತ್ತು ಅಮೆರಿಕ ರಾಷ್ಟ್ರಗೀತೆ ಮೂಲಕ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಚಾಲನೆ
- ಮೊಟೆರಾ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿ ಭಾಷಣ
- ನಮಸ್ತೆ ಟ್ರಂಪ್ ಎಂದು ಭಾಷಣ ಆರಂಭಿಸಿದ ಮೋದಿ
- 5 ತಿಂಗಳ ಹಿಂದೆ ನಾನು 'ಹೌಡಿ ಮೋದಿ'ಯೊಂದಿಗೆ ಅಮೆರಿಕ ಪ್ರವಾಸ ಆರಂಭಿಸಿದೆ
- 'ನಮಸ್ತೆ ಟ್ರಂಪ್' ಕಾರ್ಯಕ್ರಮದೊಂದಿಗೆ ಟ್ರಂಪ್ ತಮ್ಮ ಭಾರತೀಯ ಪ್ರವಾಸ ಆರಂಭಿಸಿದ್ದಾರೆ
- ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಹೃತ್ಪೂರ್ವಕ ಸ್ವಾಗತ
- ಇದು ಗುಜರಾತ್. ಆದರೆ, ನಿಮ್ಮನ್ನು ಸ್ವಾಗತಿಸಲು ಇಡೀ ದೇಶ ಉತ್ಸುಕವಾಗಿದೆ
- ಈ ಕಾರ್ಯಕ್ರಮದ 'ನಮಸ್ತೆ' ಎಂಬ ಪದದ ಅರ್ಥಬಹಳ ಆಳವಾಗಿದೆ.
- ಇದು ವಿಶ್ವದ ಅತ್ಯಂತ ಹಳೆಯ ಭಾಷೆಯಾದ ಸಂಸ್ಕೃತದಿಂದ ಬಂದಿದೆ
- ಇದರ ಅರ್ಥ ನಾವು ವ್ಯಕ್ತಿಗೆ ಮಾತ್ರವಲ್ಲದೆ ಅವನೊಳಗಿನ ದೈವತ್ವಕ್ಕೂ ಗೌರವ ನೀಡುತ್ತೇವೆ ಎಂದ ಮೋದಿ
13:41 February 24
ಮೊಟೆರಾ ಮೈದಾನದಲ್ಲಿ ಗಂಗೂಲಿ
- ಮೊಟೆರಾ ಕ್ರೀಡಾಂಗಣದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
- ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಜರು
13:18 February 24
ಮೊಟೆರಾ ಸ್ಟೇಡಿಯಂ ತಲುಪಿದ ಮೋದಿ-ಟ್ರಂಪ್
- ಮೊಟೆರಾ ಸ್ಟೇಡಿಯಂ ತಲುಪಿದ ಪ್ರಧಾನಿ ಮೋದಿ-ಡೊನಾಲ್ಡ್ ಟ್ರಂಪ್
- ಕ್ರೀಡಾಂಣ ಉದ್ಘಾಟನೆ, ಕೆಲಹೊತ್ತಲ್ಲೇ 'ನಮಸ್ತೆ ಟ್ರಂಪ್' ಕಾರ್ಯಕ್ರಮ
- ಸ್ಟೇಡಿಯಂನಲ್ಲಿ ಅಮೆರಿಕ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ
13:11 February 24
ವಿಸಿಟರ್ಸ್ ಬುಕ್ಗೆ ಡೊನಾಲ್ಡ್ ಟ್ರಂಪ್ ಸಹಿ
- ಅದ್ಭುತ ಭೇಟಿಗೆ ಧನ್ಯವಾದಗಳು ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
- ವಿಸಿಟರ್ಸ್ ಬುಕ್ನಲ್ಲಿ ಮೋದಿಗೆ ಧನ್ಯವಾದ ತಿಳಿಸಿ ಸಹಿ ಮಾಡಿದ ಟ್ರಂಪ್
- ಸಬರಮತಿ ಆಶ್ರಮದ ವಿಸಿಟರ್ಸ್ ಬುಕ್ಗೆ ಡೊನಾಲ್ಡ್ ಟ್ರಂಪ್ ಸಹಿ
12:45 February 24
ಮೊಟೆರಾ ಕ್ರೀಡಾಂಗಣದತ್ತ ಮೋದಿ-ಟ್ರಂಪ್
- ಮೊಟೆರಾ ಕ್ರೀಡಾಂಗಣದತ್ತ ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಪ್ರಯಾಣ
- ವಿಶ್ವದ ದೊಡ್ಡ ಕ್ರಿಕೆಟ್ ಸ್ಟೇಡಿಯಂನತ್ತ ತೆರಳುತ್ತಿರುವ ಮೋದಿ-ಟ್ರಂಪ್
12:26 February 24
ಸಬರಮತಿ ಆಶ್ರಮಕ್ಕೆ ಟ್ರಂಪ್ ಆಗಮನ
- ಸಬರಮತಿ ಆಶ್ರಮಕ್ಕೆ ಆಗಮಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
- ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಸಬರಮತಿ ಆಶ್ರಮಕ್ಕೆ ಆಗಮನ
- ಡೊನಾಲ್ಡ್ ಟ್ರಂಪ್ಗೆ ಪತ್ನಿ ಮೆಲಾನಿಯಾ ಟ್ರಂಪ್ ಸಾಥ್
- ಪ್ರಧಾನಿ ಮೋದಿಯಿಂದ ಆಶ್ರಮದ ಬಗ್ಗೆ ಟ್ರಂಪ್ಗೆ ಮಾಹಿತಿ
12:18 February 24
ಮೋದಿ-ಟ್ರಂಪ್ ಸ್ವಾಗತಕ್ಕೆ ಮೊಟೆರಾ ಸಜ್ಜು
- ಮೋದಿ-ಟ್ರಂಪ್ ಸ್ವಾಗತಕ್ಕೆ ಸಜ್ಜಾಗಿದೆ ಮೊಟೆರಾ ಮೈದಾನ
- ಸಾರ್ವಜನಿಕರಿಂದ ಕಿಕ್ಕಿರಿದು ತುಂಬಿದೆ ಮೊಟೆರಾ ಮೈದಾನ
12:01 February 24
ಸಬರಮತಿ ಆಶ್ರಮದತ್ತ ಮೋದಿ- ಟ್ರಂಪ್ ಪ್ರಯಾಣ
- ಸಬರಮತಿ ಆಶ್ರಮದತ್ತ ಪ್ರಧಾನಿ ಮೋದಿ-ಡೊನಾಲ್ಡ್ ಟ್ರಂಪ್ ಪ್ರಯಾಣ
- ವಿಮಾನ ನಿಲ್ದಾಣದಿಂದ ಆಶ್ರಮದತ್ತ ಹೊರಟ ಮೋದಿ-ಟ್ರಂಪ್
11:48 February 24
ಅಮೆರಿಕ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ
- ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಡೊನಾಲ್ಡ್ ಟ್ರಂಪ್ ಆಗಮನ
- ಅಮೆರಿಕ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ ಮೋದಿ
- ವಿವಿಧ ಕಲಾ ತಂಡಗಳಿಂದ ಟ್ರಂಪ್ಗೆ ವಿಶೇಷ ಸ್ವಾಗತ
11:39 February 24
ಅಹಮದಾಬಾದ್ಗೆ ಟ್ರಂಪ್ ಆಗಮನ
ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಡೊನಾಲ್ಡ್ ಟ್ರಂಪ್ ಆಗಮನ
11:34 February 24
ಅತಿಥಿ ದೇವೋಭವ ಎಂದು ಟ್ವೀಟ್ ಮಾಡಿದ ಮೋದಿ
- ಅತಿಥಿ ದೇವೋಭವ ಎಂದು ಟ್ವೀಟ್ ಮಾಡಿದ ಪ್ರಧಾನಿ ಮೋದಿ
- ಟ್ರಂಪ್ ಮಾಡಿದ್ದ ಹಿಂದಿ ಟ್ವೀಟ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ
10:53 February 24
ಮೊಟೆರಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
- ಮೊಟೆರಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭ
- ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
10:29 February 24
ಅಹಮದಾಬಾದ್ಗೆ ಮೋದಿ ಆಗಮನ
- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನದ ಹಿನ್ನೆಲೆ
- ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ
10:22 February 24
ನಾವು ಭಾರತಕ್ಕೆ ಬರಲು ಉತ್ಸುಕರಾಗಿದ್ದೇವೆ: ಹಿಂದಿಯಲ್ಲಿ ಟ್ವೀಟ್ ಮಾಡಿದ ಟ್ರಂಪ್
'ನಾವು ಭಾರತಕ್ಕೆ ಬರಲು ತುಂಬಾ ಉತ್ಸುಕರಾಗಿದ್ದು, ಈಗಾಗಲೆ ಹೊರಟಿದ್ದೇವೆ. ಕೆಲ ಗಂಟೆಗಳಲ್ಲಿ ನಿಮ್ಮೆಲ್ಲರನ್ನ ಭೇಟಿ ಮಾಡುತ್ತೇನೆ' ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
09:58 February 24
ಮೊಟೆರಾ ಮೈದಾನದತ್ತ ಸಾರ್ವಜನಿಕರು
ನಮಸ್ತೆ ಟ್ರಂಪ್ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮೊಟೆರಾ ಮೈದಾನದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದು, ಈಗಾಗಲೆ ಸಾವಿರಾರು ಜನರು ಮೈದಾನವನ್ನು ಪ್ರವೇಶಿಸಿದ್ದಾರೆ.
09:47 February 24
ಮೋದಿ-ಟ್ರಂಪ್ ಸ್ವಾಗತಕ್ಕೆ ಸಾಲುಗಟ್ಟಿ ನಿಂತ ವಿದ್ಯಾರ್ಥಿಗಳು
ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮತ್ತು ಇತರ ಗಣ್ಯರನ್ನು ಸ್ವಾಗತಿಸಲು ಗುಜರಾತ್ನ ಸೋಲಾ ಭಾಗವತ್ ಶಾಲೆಯ 400 ವಿದ್ಯಾರ್ಥಿಗಳು ಭಾರತ ಮತ್ತು ಅಮೆರಿಕದ ರಾಷ್ಟ್ರ ಧ್ವಜಗಳೊಂದಿಗೆ ಅಹಮದಾಬಾದ್ನ ಸಬರಮತಿ ಆಶ್ರಮ ಬಳಿ ನಿಂತಿದ್ದಾರೆ.
09:44 February 24
ನಿಮ್ಮ ಭೇಟಿ ನಮ್ಮ ಸ್ನೇಹವನ್ನು ಇನ್ನಷ್ಟು ಬಲಪಡಿಸುತ್ತದೆ: ಮೋದಿ ಟ್ವೀಟ್
ಡೊನಾಲ್ಡ್ ಟ್ರಂಪ್ ಆಗಮ ಹಿನ್ನೆಲೆಯಲ್ಲಿ 'ನಿಮ್ಮ ಭೇಟಿ ಖಂಡಿತವಾಗಿಯೂ ನಮ್ಮ ರಾಷ್ಟ್ರಗಳ ನಡುವಿನ ಸ್ನೇಹವನ್ನು ಇನ್ನಷ್ಟು ಬಲಪಡಿಸುತ್ತದೆ, ಆದಷ್ಟು ಬೇಗ ಅಹಮದಾಬಾದ್ನಲ್ಲಿ ಭೇಟಿಯಾಗೋಣ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
09:30 February 24
ಟ್ರಂಪ್ ಸ್ವಾಗತಕ್ಕೆ ಸಕಲ ಸಿದ್ಧತೆ
ಭಾರತಕ್ಕೆ ಆಗಮಿಸಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಲು ಸಕಲ ಸಿದ್ದತೆಗಳು ನಡೆದಿದ್ದು, ರೋಡ್ ಶೋನಲ್ಲಿ ಭಾಗವಹಿಸಲಿರುವ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಜೊತೆಗೂಡಿ ದೇಶದ ಮತ್ತು ಗುಜರಾತ್ ರಾಜ್ಯದ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಗುಜರಾತಿನ ಸಾಂಪ್ರದಾಯಿಕ 'ಗರ್ಬಾ ನೃತ್ಯ' ಪ್ರದರ್ಶನವೂ ಇರಲಿದೆ.
09:18 February 24
ಅಹಮದಾಬಾದ್ನತ್ತ ಹೊರಟ ಪ್ರಧಾನಿ ಮೋದಿ
ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನದ ಹಿನ್ನೆಲೆ ಪ್ರಧಾನಿ ಮೋದಿ ನವದೆಹಲಿಯಿಂದ ಅಹಮದಾಬಾದ್ಗೆ ಪ್ರಯಾಣ ಬೆಳೆಸಿದ್ದು, ಮೊಟೇರಾ ಸ್ಟೇಡಿಯಂನಲ್ಲಿ ಭದ್ರತಾ ಪರಿಶೀಲನೆ ನಡೆಸಲಾಗುತ್ತಿದೆ.