ನವದೆಹಲಿ:ದೇಶವನ್ನು ಭದ್ರಗೊಳಿಸುವಲ್ಲಿ ಮಹಿಳೆಯ ಪಾತ್ರ ಪ್ರಧಾನವಾಗಿದೆ. ಅಸಾಧಾರಣ ಮಹಿಳಾ ಸಾಧಕರ ಕಥೆಗಳು ನಮಗೆ ಸ್ಫೂರ್ತಿದಾಯಕವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಮಹಿಳಾ ಉದ್ಯಮಿಗಳು ಸ್ಫೂರ್ತಿಯಾಗುತ್ತಿದ್ದಾರೆ. ನಾರಿ ಶಕ್ತಿಯು ಭಾರತವನ್ನು ಭದ್ರಪಡಿಸುತ್ತಿದೆ. ಕ್ರೀಡೆ ಮತ್ತು ನಾಯಕತ್ವದಲ್ಲಿ ಮಹಿಳೆಯರು ಶ್ರೇಷ್ಠ ಸಾಧನೆ ಮಾಡಿದ್ದಾರೆ ಎಂಬುದಾಗಿ ಗುಣಗಾನ ಮಾಡಿದ್ದಾರೆ.
ಕಳೆದ ಸೋಮವಾರ ಟ್ವೀಟ್ ಮಾಡಿರುವ ಪ್ರಧಾನಿ, ಈ ಭಾನುವಾರ ನನ್ನ ಸಾಮಾಜಿಕ ಜಾಲಾತಾಣದ ಖಾತೆಗಳಾದ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಬಿಟ್ಟುಕೊಡುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ತಿಳಿಸಿದ್ದರು. ಈ ಪೋಸ್ಟ್ ನಂತರ ಈ ಕುರಿತು ನಿರ್ಧಾರವನ್ನು ಬದಲಿಸುವಂತೆ ಅನೇಕ ಜನರು ಒತ್ತಾಯಿಸಿದ್ದರು.
ಮತ್ತೆ ಪುನಃ ಮಂಗಳವಾರ ಟ್ವೀಟ್ ಮಾಡಿದ್ದ ಪ್ರಧಾನಿ, ಮಾರ್ಚ್ 8ರಂದು ಮಹಿಳಾ ದಿನದ ಅಂಗವಾಗಿ ತಮ್ಮ ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಅಧಿಕಾರವನ್ನು ಸಾಧಕ ಮಹಿಳೆಯೊಬ್ಬರಿಗೆ ನೀಡುತ್ತೇನೆ ಎಂದು ಅವರು ಘೋಷಿಸಿದ್ದರು.