ನವದೆಹಲಿ:ಶಿಕ್ಷಣವು ವಿದ್ಯಾರ್ಥಿಗಳ ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಸಕಾರಾತ್ಮಕವಾಗಿ ಸಂಪರ್ಕ ಹೊಂದಿದಾಗ ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, "ಹೊಸ ಯುಗದ ಕಲಿಕೆ"ಗಾಗಿ ಐದು ತತ್ವಗಳನ್ನು ಕೂಡಾ ಅವರು ನೀಡಿದ್ದಾರೆ.
ತೊಡಗುವಿಕೆ, ಅನ್ವೇಷಣೆ, ಅನುಭವ, ಅಭಿವ್ಯಕ್ತಿ ಹಾಗೂ ಶ್ರೇಷ್ಠತೆ ಎಂಬ 5 ತತ್ವಗಳನ್ನು ಪ್ರಧಾನಿ ನೀಡಿದ್ದು, ಈ ಸಂದರ್ಭದಲ್ಲಿ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) - 2020ರ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ನೀಡಿದರು.
ಪ್ರಧಾನಿ ಮೋದಿ, ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್, ರಾಜ್ಯ ಸಚಿವ (ಎಂಒಎಸ್) ಸಂಜಯ್ ಧೋತ್ರೆ ಸೇರಿದಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳು ರಾಷ್ಟ್ರೀಯ ಶಿಕ್ಷಣ ನೀತಿ -2020ರ (21 ನೇ ಶತಮಾನದಲ್ಲಿ ಶಾಲಾ ಶಿಕ್ಷಣ) ಕುರಿತು ನಡೆದ ಸಮಾವೇಶದಲ್ಲಿ ಭಾಗವಹಿಸಿದರು.