ಕರ್ನಾಟಕ

karnataka

ETV Bharat / bharat

ದೇಶಾದ್ಯಂತ ನೂತನ ವರ್ಷದ ಸಂಭ್ರಮ: ಜನತೆಗೆ ಪ್ರಧಾನಿ ಮೋದಿ ಸಂದೇಶ ಏನು? - ಹೊಸ ವರ್ಷದ ಶುಭಾಶಯ ತಿಳಿಸಿದ ಮೋದಿ

ದೇಶದ ವಿವಿಧೆಡೆ ಹೊಸ ವರ್ಷವನ್ನ ಜನರು ಅದ್ಧೂರಿಯಾಗಿ ಆಚರಿಸುತ್ತಿದ್ದು, ಜನತೆಗೆ ಪ್ರಧಾನಿ ಮೋದಿ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.

ಮೋದಿಯಿಂದ ಹೊಸ ವರ್ಷದ ಶುಭಾಶಯ,PM Modi extend New Year greetings to Indians
ಮೋದಿಯಿಂದ ಹೊಸ ವರ್ಷದ ಶುಭಾಶಯ

By

Published : Jan 1, 2020, 7:59 AM IST

ನವದೆಹಲಿ:ದೇಶಾದ್ಯಂತ ಹೊಸ ವರ್ಷವನ್ನ ಸಂಭ್ರಮದಿಂದ ಬರಮಾಡಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಜನತೆಗೆ ನೂತನ ಸಂವತ್ಸರದ ಶುಭಾಶಯ ತಿಳಿಸಿದ್ದಾರೆ.

ಟ್ವಿಟ್ಟರ್​ ಮೂಲಕ ಶುಭ ಕೋರಿರುವ ಪ್ರಧಾನಿ ಮೋದಿ, 2020 ಅದ್ಭುತವಾಗಿರಲಿ, ಈ ವರ್ಷ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ. ಪ್ರತಿಯೊಬ್ಬರೂ ಆರೋಗ್ಯವಾಗಿರಲಿ ಮತ್ತು ಎಲ್ಲರ ಆಕಾಂಕ್ಷೆಗಳೂ ಈಡೇರಲಿ ಎಂದು ಶುಭ ಕೋರಿದ್ದಾರೆ.

ಭಾರತವನ್ನು ಬದಲಾಯಿಸಲು ಮತ್ತು 130 ಕೋಟಿ ಭಾರತೀಯರ ಜೀವನವನ್ನು ಸಶಕ್ತಗೊಳಿಸಲು ಜನರಿಗಾಗಿ ನಡೆಸುವ ಪ್ರಯತ್ನಗಳನ್ನ 2020ರಲ್ಲೂ ಮುಂದುವರಿಸಲಾಗುವುದು ಎಂದು ಮೊದಿ ನಿನ್ನೆ ರಾತ್ರಿ ಟ್ವೀಟ್​ ಮಾಡಿದ್ದರು.

ABOUT THE AUTHOR

...view details