ಶಿವಸಾಗರ (ಅಸ್ಸೋಂ): ಮುಂಬರುವ ಅಸ್ಸೋಂ ವಿಧಾನಸಭೆ ಚುನಾವಣೆ ಹಿನ್ನೆಲೆ ಇಲ್ಲಿನ ಶಿವಸಾಗರದಲ್ಲಿ ಆಯೋಜನೆಯಾಗಿದ್ದ 'ವಿಜಯ ಸಂಕಲ್ಪ ಯಾತ್ರೆ'ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಶಿವಸಾಗರದ 1.06 ಲಕ್ಷ ಜನರಿಗೆ ಭೂ ಹಂಚಿಕೆ ಪ್ರಮಾಣಪತ್ರವನ್ನು ಪಿಎಂ ಮೋದಿ ವಿತರಿಸಿದರು.
ಬಳಿಕ ಮಾತನಾಡಿದ ಪ್ರಧಾನಿ, ಜನರಲ್ಲಿನ ಆತ್ಮ ವಿಶ್ವಾಸವೊಂದೇ 'ಆತ್ಮನಿರ್ಭರ ಅಸ್ಸೋಂ'ಗೆ ದಾರಿಯಾಗಲಿದೆ. ರಾಜ್ಯದ ಜನಸಂಖ್ಯೆಯ ಶೇ. 40 ರಷ್ಟು ಜನರು ಕೇಂದ್ರ ಸರ್ಕಾರದ 'ಆಯುಷ್ಮಾನ್ ಭಾರತ' ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಅಸ್ಸೋಂ ಭಾಷೆ, ಸಾಹಿತ್ಯ, ಸಂಸ್ಕೃತಿದ ಸಂರಕ್ಷಣೆಯ ಉದ್ದೇಶವನ್ನು ಮೊದಲಿನಿಂದಲೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇಟ್ಟುಕೊಂಡಿದೆ ಎಂದು ಹೇಳಿದರು.