ನವದೆಹಲಿ: ಪ್ರಧಾನಿ ಮೋದಿ ಗುಜರಾತ್ನ ಕಾಕ್ರಾಪರ್ ಪರಮಾಣು ಸ್ಥಾವರದ ಮೂರನೇ ಘಟಕವನ್ನ ದೇಶೀಯವಾಗಿ ನಿರ್ಮಾಣ ಮಾಡಿದ್ದಕ್ಕೆ ಅಣು ವಿಜ್ಞಾನಿಗಳನ್ನ ಮೋದಿ ಹೊಗಳಿದ್ದಾರೆ. ಈ ಪರಮಾಣು ಸ್ಥಾವರದಲ್ಲಿ ಅತ್ಯಂತ ಸಂಕೀರ್ಣವಾದ 700 ಮೆಗಾವ್ಯಾಟ್ ಸಾಮರ್ಥ್ಯದ ಕೆಎಪಿಪಿ-3 ಅನ್ನು ನಿರ್ಮಿಸಿದ್ದಕ್ಕೆ ಮೋದಿ ಶ್ಲಾಘಿಸಿದ್ದಾರೆ.
ಅಣುಸ್ಥಾವರಗಳ ದೇಶೀ ನಿರ್ಮಾಣ: ನ್ಯೂಕ್ಲಿಯರ್ ವಿಜ್ಞಾನಿಗಳ ಹೊಗಳಿದ ಮೋದಿ - ಕಾಕ್ರಾಪಾರ ಪರಮಾಣು ಸ್ಥಾವರ
ಗುಜರಾತ್ನ ಕಾಕ್ರಾಪಾರ ಪರಮಾಣು ಸ್ಥಾವರದಲ್ಲಿ 700 ಮೆಗಾವ್ಯಾಟ್ನ ಘಟಕವನ್ನು ದೇಶೀಯವಾಗಿ ನಿರ್ಮಿಸಿದ್ದಕ್ಕೆ ಪ್ರಧಾನಿ ಮೋದಿ ವಿಜ್ಞಾನಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಇದು ದೇಶಿಯವಾಗಿ ನಿರ್ಮಿತವಾದ ಸ್ಥಾವರವಾಗಿದ್ದು, ಮೇಕ್ ಇನ್ ಇಂಡಿಯಾಗೆ ಉತ್ತಮವಾದ ಉದಾಹರಣೆಯಾಗಿದೆ. ಜೊತೆಗೆ ಭವಿಷ್ಯದಲ್ಲಿ ದೇಶ ಮಾಡಲಿರುವ ಸಾಧನೆಗಳಿಗೆ ಇದು ಬುನಾದಿ ಆಗಲಿದೆ ಎಂದು ಕೊಂಡಾಡಿದ್ದಾರೆ.