ಕರ್ನಾಟಕ

karnataka

ETV Bharat / bharat

5ನೇ ಬಾರಿಗೆ ಇಸ್ರೇಲ್ ಪ್ರಧಾನಿಯಾದ ಬೆಂಜಮಿನ್ ನೆತಾನ್ಯಹು: ಪಿಎಂ ನಮೋ ಅಭಿನಂದನೆ - ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು

ಇಸ್ರೇಲ್ ಪ್ರಧಾನಿಯಾಗಿ 5ನೇ ಬಾರಿಗೆ ಬೆಂಜಮಿನ್ ನೆತಾನ್ಯಹು ಅಧಿಕಾರ ವಹಿಸಿಕೊಂಡಿದ್ದಾರೆ. ಬೆಂಜಮಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

PM Modi congratulates Israel counterpart for assuming office the 5th time
5ನೇ ಬಾರಿಗೆ ಇಸ್ರೇಲ್ ಪ್ರಧಾನಿಯಾದ ಬೆಂಜಮಿನ್ ನೆತಾನ್ಯಹು: ಪಿಎಂ ನಮೋ ಅಭಿನಂದನೆ

By

Published : Jun 11, 2020, 5:35 AM IST

ನವದೆಹಲಿ: ಐದನೇ ಬಾರಿಗೆ ಅಧಿಕಾರಕ್ಕೇರಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಮೋದಿ, 'ವಿಶ್ವವು ಕೋವಿಡ್​​ ಮುಕ್ತವಾದ ಬಳಿಕ ಭಾರತ ಹಾಗೂ ಇಸ್ರೇಲ್ ಸಹಯೋಗ ಮುಂದುವರಿಸುವ ಕುರಿತಂತೆ ಚರ್ಚೆ ನಡೆಸಿದ್ದೇನೆ. ಹಾಗೆಯೇ ದಾಖಲೆಯ ಐದನೇ ಬಾರಿಗೆ ಪ್ರಧಾನಿಯಾಗಿರುವುದಕ್ಕೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಭಾರತ-ಇಸ್ರೇಲ್ ಸಹಭಾಗಿತ್ವವು ಮತ್ತಷ್ಟು ಸದೃಢವಾಗಲಿದೆ' ಎಂದು ಟ್ವೀಟ್​ ಮಾಡಿದೆ.

ಇನ್ನು ಫೋನ್​ ಸಂಭಾಷಣೆ ಮೂಲಕ ಉಭಯ ನಾಯಕರು ಕೋವಿಡ್​-19 ಸಂಬಂಧ ಲಸಿಕೆಗಳು, ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳ ಸಂಬಂಧ ಪರಸ್ಪರ ಭಾರತ ಮತ್ತು ಇಸ್ರೇಲ್ ನಡುವಿನ ಸಹಕಾರ ವಿಸ್ತರಣೆ ಬಗ್ಗೆ ಚರ್ಚಿಸಿದರು ಎಂದು ಪ್ರಧಾನಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೆ, ಆರೋಗ್ಯ ತಂತ್ರಜ್ಞಾನ, ಕೃಷಿ ನಾವೀನ್ಯತೆ, ರಕ್ಷಣಾ-ಸಹಕಾರ ಮತ್ತು ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಭಾರತ-ಇಸ್ರೇಲ್ ಸಹಯೋಗವನ್ನು ವಿಸ್ತರಿಸುವುದು. ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಉದಯೋನ್ಮುಖ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಪರಸ್ಪರ ಸಮಾಲೋಚಿಸಲು ಸದಾ ಸಂಪರ್ಕದಲ್ಲಿರಲು ಉಭಯ ನಾಯಕರು ಸಹಮತ ಸೂಚಿಸಿದರು.

ABOUT THE AUTHOR

...view details