ಮನಾಮಾ:ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರು ಪ್ರಧಾನಿ ನರೇಂದ್ರ ಮೋದಿಗೆ 'ದಿ ಕಿಂಗ್ ಹಮದ್ ಆರ್ಡರ್ ಆಫ್ ರೆನೈಸನ್ಸ್' ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋದಿ, ದಿ ಕಿಂಗ್ ಹಮದ್ ಆರ್ಡರ್ ಆಫ್ ದಿ ರೆನೈಸನ್ಸ್ ಪ್ರಶಸ್ತಿ ಪಡೆದಿರುವುದು ನನಗೆ ತುಂಬಾ ಗೌರವ ಮತ್ತು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. 1.3 ಬಿಲಿಯನ್ ಭಾರತೀಯರ ಪರವಾಗಿ ನಾನು ಈ ಪ್ರತಿಷ್ಠಿತ ಗೌರವವನ್ನು ಸ್ವೀಕರಿಸುತ್ತೇನೆ ಎಂದಿದ್ದಾರೆ.
ಅಲ್ಲದೆ ಇದು ಇಡೀ ಭಾರತಕ್ಕೆ ನೀಡಲಾದ ಗೌರವವಾಗಿದೆ. ಇದು ಬಹ್ರೇನ್ ಮತ್ತು ಭಾರತದ ನಡುವಿನ ಸ್ನೇಹ ಸಂಬಂಧದ ಸಂಕೇತವಾಗಿದೆ ಎಂದಿದ್ದಾರೆ.ಇದಕ್ಕೂ ಮೊದಲು ಪ್ರಧಾನಿ ಮೋದಿಗೆ ಯುಎಇ ಸರ್ಕಾರ ಇಸ್ಲಾಮಿಕ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ದಿ ಆರ್ಡರ್ ಆಫ್ ಜಾಯೆದ್ ನೀಡಿ ಗೌರವಿಸಿತ್ತು.
'ದಿ ಆರ್ಡರ್ ಆಫ್ ಜಾಯೆದ್' ಪ್ರಶಸ್ತಿಯನ್ನು ಯುಎಇ ಪಿತಾಮಹ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಹೆಸರಿನಲ್ಲಿ ನೀಡಲಾಗುತ್ತದೆ. ಈ ಪ್ರಶಸ್ತಿಯು ನಮ್ಮ ದೇಶದಿಂದ ಕೊಡಮಾಡುವ ಭಾರತ ರತ್ನ ಪ್ರಶಸ್ತಿಗೆ ಸಮಾನವಾಗಿದೆ.