ದೆಹಲಿ:ಸುಷ್ಮಾ ಸ್ವರಾಜ್ ಒಬ್ಬ ಒತ್ತಮ ಆಡಳಿತಗಾರ್ತಿ. ಅನಾರೋಗ್ಯದ ನಡುವೆಯು ಸತತ 5 ವರ್ಷಗಳ ಕಾಲ ವಿದೇಶಾಂಗ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಅವರ ಚೈತನ್ಯ ಮತ್ತು ಕೆಲಸದ ಬದ್ಧತೆಗೆ ಯಾರೂ ಸಾಟಿಯಿಲ್ಲ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಸುಷ್ಮಾ ಸ್ವರಾಜ್ ಒಬ್ಬ ಪ್ರಖರ ವಾಗ್ಮಿ ಹಾಗೂ ಅತ್ಯುತ್ತಮ ಸಂಸದರಾಗಿದ್ದರು. ಪಕ್ಷದ ವ್ಯಾಪ್ತಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಿಜೆಪಿ ಸಿದ್ಧಾಂತ ಮತ್ತು ಹಿತಾಸಕ್ತಿಗಳ ವಿಷಯಕ್ಕೆ ಬಂದಾಗ ಅವರು ಯಾವುದೇ ಕಾರಣಕ್ಕೂ ರಾಜಿಯಾಗಲಿಲ್ಲ. ಪಕ್ಷದ ಬೆಳವಣಿಗೆಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಸುಷ್ಮಾ ಒಬ್ಬ ಒತ್ತಮ ಆಡಳಿತಗಾರ್ತಿ. ಅವರು ನಿರ್ವಹಿಸಿದ ಎಲ್ಲಾ ಇಲಾಖೆಗಳನ್ನೂ ಸಮರ್ಥವಾಗಿ ನಿರ್ವಹಿಸಿದರು. ವಿದೇಶಗಳೊಂದಿಗೆ ಭಾರತದ ಸಂಬಂಧ ವೃದ್ಧಿಸುವಲ್ಲಿ ಸುಷ್ಮಾ ಅವರ ಅವರ ಪಾತ್ರ ಬಹಳ ಮುಖ್ಯವಾಗಿತ್ತು. ಒಬ್ಬ ರಾಜಕೀಯ ನಾಯಕಿಯಾಗಿ ಹೊರತುಪಡಿಸಿ, ಅವರು ಸಹಾನುಭೂತಿಯ ಮನಸ್ಥಿತಿಯವರು. ಜಗತ್ತಿನ ಯಾವುದೇ ಮೂಲೆಗಳಿಂದಲೂ ಸಹಾಯ ಕೋರಿದ ಭಾರತೀಯರಿಗೆ ಸಹಾಯ ಮಾಡಿದ್ದಾರೆ ಎಂದು ಮೋದಿ ಬಣ್ಣಿಸಿದ್ದಾರೆ.
ಸುಷ್ಮಾ ಅವರ ನಿಧನವು ನನಗೆ ವೈಯಕ್ತಿಕ ನಷ್ಟವಾಗಿದೆ. ಭಾರತಕ್ಕಾಗಿ ಅವರು ಮಾಡಿದ ಎಲ್ಲವನ್ನೂ ಪ್ರೀತಿಯಿಂದ ನೆನಪಿಸಿಕೊಳ್ಳಲಾಗುತ್ತದೆ. ಈ ದುರದೃಷ್ಟಕರ ಸಂದರ್ಭದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ, ಬೆಂಬಲಿಗರು ಮತ್ತು ಅಭಿಮಾನಿಗಳೊಂದಿಗೆ ಇವೆ. ಅವರಿಗೆ ಈ ದುಃಖವನ್ನು ಭರಿಸುವಂತಹ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಟ್ವೀಟ್ ಮಾಡಿದ್ದಾರೆ.