ಕರ್ನಾಟಕ

karnataka

ETV Bharat / bharat

ಪ್ರಧಾನಿ ಅಧ್ಯಕ್ಷತೆಯಲ್ಲಿ 'ನೀತಿ' ಸಭೆ: 3 ವರ್ಷಗಳಲ್ಲಿ ರೈತರ ಆದಾಯ ದುಪ್ಪಟ್ಟು ಗುರಿ - undefined

ನೀತಿ ಆಯೋಗದ ಆಡಳಿತ ಮಂಡಳಿಯು, ಮೀನುಗಾರಿಕೆ, ಪ್ರಾಣಿ ಸಾಕಾಣಿಕೆ, ತೋಟಗಾರಿಕೆ, ತರಕಾರಿ ಹಾಗೂ ಹಣ್ಣುಗಳ ಬೇಸಾಯದ ಮೂಲಕ 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡಲು ಕೇಂದ್ರ ಸರ್ಕಾರ ಬದ್ಧವಿದೆ ಎಂದು ಹೇಳಿದೆ.

NITI

By

Published : Jun 15, 2019, 4:54 PM IST

Updated : Jun 15, 2019, 5:01 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಆಡಳಿತ ಮಂಡಳಿಯ 5ನೇ ಸಭೆಯಲ್ಲಿ ರೈತರ ಆದಾಯ ದುಪ್ಪಟ್ಟು ಮಾಡುವ ಸಂಬಂಧ ಚರ್ಚೆ ನಡೆದಿದೆ.

ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಬಹುಪಾಲು ರಾಜ್ಯಗಳ ಸಿಎಂಗಳು ಸೇರಿ, ನೂತನ ಕೇಂದ್ರ ಸಚಿವರು ಸಭೆಯಲ್ಲಿ ಭಾಗವಹಿಸಿದ್ದಾರೆ. ಆಡಳಿತ ಮಂಡಳಿಯು, ಮೀನುಗಾರಿಕೆ, ಪ್ರಾಣಿ ಸಾಕಾಣಿಕೆ, ತೋಟಗಾರಿಕೆ, ತರಕಾರಿ ಹಾಗೂ ಹಣ್ಣುಗಳ ಬೇಸಾಯದ ಮೂಲಕ 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡಲು ಕೇಂದ್ರ ಸರ್ಕಾರ ಬದ್ಧವಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಸೇರಿ ಮತ್ತಿತರ ಯೋಜನೆಗಳ ಮೂಲಕ ಇದನ್ನು ಸಾಧಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ

ಉದ್ಯೋಗ ಹಾಗೂ ಆದಾಯ ಹೆಚ್ಚಿಸಲು ರಾಜ್ಯಗಳು ಆಮದಿನತ್ತ ಹೆಚ್ಚು ಗಮನ ಹರಿಸಬೇಕು. ನೀರಿನ ಸಮಗ್ರ ಯೋಜನೆಯನ್ನು ಜಲ್ ಶಕ್ತಿ ಸಚಿವರು ನೋಡಿಕೊಳ್ತಾರೆ ಎಂದಿದೆ. ದೇಶದ ಹಲವಾರು ರಾಜ್ಯಗಳಲ್ಲಿ ನೀರಿನ ಸಮಸ್ಯೆ ಬಗ್ಗೆ ಹಾಗೂ ಮಳೆ ನೀರಿನ ಕೊಯ್ಲು ಸೇರಿದಂತೆ ಮತ್ತಿತರ ಪರಿಹಾರೋಪಾಯಗಳ ಬಗ್ಗೆ ಪ್ರಸ್ತಾಪ ಮಾಡಿದೆ.

ಪಂಜಾಬ್ ಸರ್ಕಾರವು ಸಹ ತನ್ನ ರಾಜ್ಯದಲ್ಲಿ ಬತ್ತಿಹೋದ ಜಲಮೂಲಗಳನ್ನು ಪುನಶ್ಚೇತನಗೊಳಿಸುವ ಸಂಬಂಧ ಕೇಂದ್ರದ ನೆರವು ಬೇಡಿದೆ. ಆಂಧ್ರಪ್ರದೇಶ ಹಾಗೂ ಬಿಹಾರ ರಾಜ್ಯಗಳು ವಿಶೇಷ ಸ್ಥಾನಮಾನದ ಕುರಿತಾಗಿ ಮಾತನಾಡುವ ಸಾಧ್ಯತೆಯಿದೆ. ಈಗಾಗಲೇ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ, ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿಯಾಗಿ ಈ ಸಂಬಂಧ ಬೇಡಿಕೆ ಇಟ್ಟಿದ್ದಾರೆ.

ಎಡಪಂಥೀಯ ತೀವ್ರವಾದಿಗಳಿಂದ ಬಳಲುತ್ತಿರುವ ಜಿಲ್ಲೆಗಳಲ್ಲಿ ಭದ್ರತೆ ಬಗ್ಗೆ ಚರ್ಚೆ ನಡೆಸಲಾಗಿದೆ. ಅಂತೆಯೆ, ಕಾಂಗ್ರೆಸ್​ ಆಡಳಿತವಿರುವ ರಾಜ್ಯಗಳು ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿವೆ. ಈ ಬಗ್ಗೆ ಮಧ್ಯಪ್ರದೇಶ ಸಿಎಂ ಕಮಲ್​ ನಾಥ್ ಅವರು ಔತಣಕೂಡದ ಜತೆ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Last Updated : Jun 15, 2019, 5:01 PM IST

For All Latest Updates

TAGGED:

ABOUT THE AUTHOR

...view details