ಕರ್ನಾಟಕ

karnataka

ETV Bharat / bharat

ಲಡಾಖ್​​ಗೆ ಪಿಎಂ ಮೋದಿ, ಬಿಪಿನ್​ ರಾವತ್ ಅಚ್ಚರಿ ಭೇಟಿ - ಸೇನಾ ಸನ್ನದ್ಧತೆಯ ಪರಿಶೀಲನೆ

https://aajtak.intoday.in/story/pm-narendra-modi-in-leh-ladakh-indian-army-china-border-clash-updates-1-1206615.html

pm
ಲೇಹ್

By

Published : Jul 3, 2020, 10:30 AM IST

Updated : Jul 3, 2020, 1:44 PM IST

13:08 July 03

ಸೈನಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ

ಸೈನಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ

ಲೇಹ್​ ಪ್ರದೇಶದಲ್ಲಿ ಸೈನಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. 

11:53 July 03

ಲೇಹ್​ ಪ್ರದೇಶಕ್ಕೆ ಬಂದಿಳಿದ ಪ್ರಧಾನಿ ಮೋದಿಗೆ ಸೇನಾಧಿಕಾರಿಗಳಿಂದ ಮಾಹಿತಿ

ಭಾರತ - ಚೀನಾ ಗಡಿಯಲ್ಲಿರುವ ಲಡಾಖ್​ನ ಲೇಹ್​ ಪ್ರದೇಶಕ್ಕೆ ಬಂದಿಳಿದ ಪ್ರಧಾನಿ ಮೋದಿಗೆ ಹಿರಿಯ ಸೇನಾಧಿಕಾರಿಗಳು ಪೂರ್ವ ಲಡಾಖ್​​ ವಲಯದಲ್ಲಿನ ಸದ್ಯದ ಪರಿಸ್ಥಿತಿ ಕುರಿತು ಮಾಹಿತಿ ನೀಡಿದರು.  

11:11 July 03

ಭೂ ಸೇನೆ, ವಾಯುಪಡೆ ಮತ್ತು ಐಟಿಬಿಪಿ ಸಿಬ್ಬಂದಿಯೊಂದಿಗೆ ಮೋದಿ ಚರ್ಚೆ

ಭೂ ಸೇನೆ, ವಾಯುಪಡೆ ಮತ್ತು ಐಟಿಬಿಪಿ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದ ಪ್ರಧಾನಿ ಮೋದಿ

ಸಿಂಧೂ ನದಿ ತೀರದಲ್ಲಿರುವ ಲೇಹ್​ ಪ್ರದೇಶವು ಜನ್ಸ್ಕರ್ ಶ್ರೇಣಿಯಿಂದ ಆವೃತವಾಗಿದ್ದು, 11,000 ಅಡಿ ಎತ್ತರದಲ್ಲಿದೆ. ಇಲ್ಲಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಭೂ ಸೇನೆ, ವಾಯುಪಡೆ ಮತ್ತು ಐಟಿಬಿಪಿ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದ್ದಾರೆ.  

10:29 July 03

ಭಾರತ-ಚೀನಾ ಗಡಿಯ ಮುಂಚೂಣಿ ನೆಲೆ ನಿಮು​ ಪ್ರದೇಶಕ್ಕೆ ಪಿಎಂ ಮೋದಿ, ಬಿಪಿನ್​ ರಾವತ್ ಭೇಟಿ

ಲೇಹ್​ನಲ್ಲಿ ಪಿಎಂ ಮೋದಿ, ಬಿಪಿನ್​ ರಾವತ್

ನವದೆಹಲಿ:ಭಾರತ - ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯಿರುವ ವೇಳೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಲಡಾಖ್​​ಗೆ ದಿಢೀರ್​ ಭೇಟಿ ನೀಡಿದ್ದಾರೆ. ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್​) ಜನರಲ್​ ಬಿಪಿನ್​ ರಾವತ್​ ಅವರು ಕೂಡ ಪ್ರಧಾನಿ ಮೋದಿ ಜೊತೆ ತೆರಳಿದ್ದಾರೆ. ಪೂರ್ವ ಲಡಾಖ್​​ ವಲಯದಲ್ಲಿನ ಸದ್ಯದ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. 

ಹಿರಿಯ ಸೇನಾಧಿಕಾರಿಗಳು ಸದ್ಯದ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಮತ್ತು ಬಿಪಿನ್​ ರಾವತ್​​ ಅವರಿಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಲಡಾಖ್​ ಭೇಟಿಯನ್ನು ಮುಂದೂಡಿದ್ದರು. ಹೀಗಾಗಿ ರಾವತ್​​ ಅವರ ಇಂದಿನ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ.

ಚೀನಾ ಜೊತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಸೇನೆಯ ಸನ್ನದ್ಧತೆಯನ್ನು ಪರಿಶೀಲಿಸಲು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಇಂದು ಲಡಾಖ್​​ಗೆ ಭೇಟಿ ನೀಡಬೇಕಿತ್ತು.  

ಜೂನ್​ 15ರಂದು ಗಡಿಯಲ್ಲಿ ಚೀನಾ ಯೋಧರು ನಡೆಸಿದ ಘರ್ಷಣೆಯಲ್ಲಿ ಭಾರತದ 22 ಮಂದಿ ಯೋಧರು ಹುತಾತ್ಮರಾಗಿದ್ದರು. ಚೀನಾ ಕಡೆಯಲ್ಲೂ ಭಾರಿ ಸಾವು ನೋವು ಸಂಭವಿಸಿತ್ತು. ಅಂದಿನಿಂದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ.

Last Updated : Jul 3, 2020, 1:44 PM IST

ABOUT THE AUTHOR

...view details