ಕರ್ನಾಟಕ

karnataka

ETV Bharat / bharat

ಪ್ರಧಾನಿ ಮೋದಿ ಟರ್ಕಿ ಪ್ರವಾಸ ರದ್ದು! ವಿಶ್ವಸಂಸ್ಥೆಯ ಭಾಷಣದ ಎಫೆಕ್ಟ್​...? - ಮೋದಿ ಅಂಕಾರ ಪ್ರವಾಸ ರದ್ದು

ಟರ್ಕಿಯ ಅಂಕಾರಾದಲ್ಲಿ ಇದೇ 27 ಹಾಗೂ 28ರಂದು ನಡೆಯಲಿರುವ ಹೂಡಿಕೆಯ ಮಹಾಸಮ್ಮೇಳನಕ್ಕೆ ತೆರಳಬೇಕಿದ್ದ ಪ್ರಧಾನಿ ಮೋದಿ ಈ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರಧಾನಿ ಮೋದಿ ಟರ್ಕಿ ಪ್ರವಾಸ ರದ್ದು

By

Published : Oct 20, 2019, 2:09 PM IST

ನವದೆಹಲಿ: ಪ್ರಧಾನಿ ಮೋದಿಯ ಪೂರ್ವನಿಯೋಜಿತ ಟರ್ಕಿ ಪ್ರವಾಸವನ್ನು ದಿಢೀರ್ ಬೆಳವಣಿಗೆಯಲ್ಲಿ ರದ್ದುಗೊಳಿಸಲಾಗಿದೆ.

ಕಳೆದ ತಿಂಗಳು ನ್ಯೂಯಾರ್ಕ್​ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಮಾತನಾಡಿದ್ದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೆಗಾನ್, ಮೋದಿಯ ನಡೆಯನ್ನು ಟೀಕಿಸಿ, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೆಗಾನ್

ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದ ಟರ್ಕಿ ಅಧ್ಯಕ್ಷ, ಈ ವೇಳೆ ಪಾಕಿಸ್ತಾನವನ್ನು ಬೆಂಬಲಿಸಿ ಮಾತನಾಡಿದ್ದರು. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯಿಂದ 80 ಲಕ್ಷ ಮಂದಿಗೆ ಸಮಸ್ಯೆಯಾಗಿದೆ. ಈ ವಿಚಾರವನ್ನು ಜಾಗತಿಕ ರಾಷ್ಟ್ರಗಳು ಗಂಭೀರವಾಗಿ ಪರಿಗಣಸಲಿಲ್ಲ ಎಂದು ಟರ್ಕಿ ಅಧ್ಯಕ್ಷ ಟೀಕಿಸಿದ್ದರು. ಈ ಭಾಷಣ ಟರ್ಕಿ-ಭಾರತದ ದ್ವಿಪಕ್ಷೀಯ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಮೋದಿ ಪ್ರವಾಸ ಮೊಟಕುಗೊಳಿಸಲಾಗಿದೆ.

ಟ್ರಂಪ್ ಪತ್ರ ಹರಿದೆಸೆದ ಟರ್ಕಿ ಅಧ್ಯಕ್ಷ.. ಅಮೆರಿಕ ಅಧ್ಯಕ್ಷರ ಮಾತಿಗೆ ಬೆಲೆಯೇ ಇಲ್ಲ!

ಅ.27 ಹಾಗೂ 28ರಂದು ಟರ್ಕಿ ದೇಶದ ಭೇಟಿಯ ವೇಳೆ ಪ್ರಧಾನಿ ಮೋದಿ, ಅಂಕಾರಾದಲ್ಲಿ ಹೂಡಿಕೆಯ ಮಹಾಸಮ್ಮೇಳನದಲ್ಲಿ ಭಾಗಿಯಾಗಬೇಕಿತ್ತು.

ಪ್ರಧಾನಿ ಮೋದಿ ಹಾಗೂ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೆಗಾನ್

2015ರಲ್ಲಿ G-20 ಸಮ್ಮೇಳನದಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ಟರ್ಕಿ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಉಭಯ ದೇಶಗಳ ನಾಯಕರು ಮಾತುಕತೆ ನಡೆಸಿದ್ದರು. ಈ ತಿಂಗಳ ಜುಲೈನಲ್ಲಿ ಎರ್ಡೋಗನ್‌ ಭಾರತಕ್ಕೆ ಎರಡು ದಿನಗಳ ಭೇಟಿ ನೀಡಿದ್ದರು.

ABOUT THE AUTHOR

...view details