ನವದೆಹಲಿ: ಕೊರೊನಾ ವೈರಸ್ ಕಾರ್ಯಾಚರಣೆಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಜನತಾ ಪಕ್ಷದ ಹಿರಿಯ ಸಹೋದ್ಯೋಗಿಗಳ, ಹಿರಿಯರ ಆರೋಗ್ಯವನ್ನು ತಿಳಿದುಕೊಳ್ಳುವಲ್ಲಿ ವಿಶೇಷ ಆಸಕ್ತಿ ತೋರುತ್ತಿದ್ದಾರೆ.
ಪಕ್ಷದ ಹಿರಿಯ ನಾಯಕರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ - ರಾಷ್ಟ್ರವ್ಯಾಪಿ ಲಾಕ್ ಡೌನ್
ಪ್ರಧಾನಿ ಅವರು ತಮ್ಮ ಹಲವಾರು ಹಿರಿಯ ಸಹೋದ್ಯೋಗಿಗಳಿಗೆ ದೂರವಾಣಿ ಕರೆ ಮಾಡಿ ಲಾಕ್ಡೌನ್ನಿಂದ ಏನಾದರೂ ತೊಂದರೆಯಾಗಿದೆಯೇ ಎಂಬ ಮಾಹಿತಿ ಪಡೆಯುವುದರ ಜೊತೆಗೆ ಅವರು ಹಾಗೂ ಅವರ ಕುಟುಂಬದವರು ಯೋಗಕ್ಷೇಮ ವಿಚಾರಿಸಿದ್ದರು.
ಪ್ರಧಾನಿ ತಮ್ಮ ಹಲವಾರು ಹಿರಿಯ ಸಹೋದ್ಯೋಗಿಗಳಿಗೆ ಕರೆ ಮಾಡಿ ಲಾಕ್ ಡೌನ್ ನಿಂದಾಗಿ ಏನಾದರೂ ತೊಂದರೆಯಾಗಿದೆಯೇ ಎಂಬುದರ ಜೊತೆಗೆ ಅವರ ಹಾಗೂ ಅವರ ಕುಟುಂಬದವರ ಯೋಗಕ್ಷೇಮ ವಿಚಾರಿಸಿದ್ದಾರೆ. ಇಂದು ಬೆಳಗ್ಗೆ ಪ್ರಧಾನಿ ಅವರು ಮಾಜಿ ಶಾಸಕ ಒ. ಪಿ. ಬಬ್ಬರ್ ಅವರನ್ನು ನೆನಪಿಸಿಕೊಂಡು ಕರೆ ಮಾಡಿದ್ದರು.
ಕೊರೊನಾದಿಂದ ದೇಶವನ್ನು ರಕ್ಷಿಸುವಲ್ಲಿ ನಿರತರಾಗಿರುವ ಪ್ರಧಾನ ಮಂತ್ರಿಗಳು ಇಂತ ಸಮಯದಲ್ಲಿ ನನ್ನನ್ನು ನೆನಪಿಸಿಕೊಂಡು ಕರೆ ಮಾಡಿದ್ದನ್ನು ನೋಡಿ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಸಂತೋಷವೂ ಆಯಿತು. ಕರೆ ಮಾಡಿದ ಅವರು ನನ್ನ ಮತ್ತು ನನ್ನ ಕುಟುಂಬದ ಆರೋಗ್ಯ ಪರಿಸ್ಥಿತಿ ವಿಚಾರಿಸಿದರು. ತಾವು ಈ ಸ್ಥಾನಕ್ಕೆ ತಲುಪಲು ಕಾರಣರಾದ ಪ್ರತೀ ವ್ಯಕ್ತಿಗೂ ಗೌರವ ಸಲ್ಲಿಸುತ್ತೇನೆ ಎಂದರು. ಆ ದಿನಗಳ ನಮ್ಮ ಹಿಂದಿನ ಪಯಣವನ್ನು ಮೆಲುಕು ಹಾಕಿದರು ಎಂದು ಬಬ್ಬರ್ ಹೇಳಿದರು.