ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು ಡಿಸೆಂಬರ್ನಲ್ಲಿ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಬಾಂಗ್ಲಾ ಮಾಧ್ಯಮ ವರದಿ ಮಾಡಿದೆ.
ಬಾಂಗ್ಲಾ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೆಮನ್ ಅವರು ಢಾಕಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ. ಆದ್ರೆ ಇದು ನೇರವಾಗಿ ಅಥವಾ ವಿಡಿಯೋ ಕಾನ್ಫರನ್ಸ್ ಮೂಲಕ ನಡೆಯಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದರು.
ಕೋವಿಡ್-19 ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ, ಈ ಸಭೆ ವರ್ಚುವಲ್ ಆಗಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇನ್ನು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಬಾಂಗ್ಲಾ ವಿದೇಶಾಂಗ ಸಚಿವರ ಮಧ್ಯೆ ಉಭಯ ದೇಶಗಳ ಜಂಟಿ ಕನ್ಸಲ್ಟೇಟಿವ್ ಕಮಿಷನ್ ಸಭೆ ಇಂದು ನಡೆಯಲಿದೆ. ಈ ವೇಳೆ ಇಬ್ಬರೂ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಲಿದ್ದಾರೆ.
ಭಾರತವು ಬಾಂಗ್ಲಾದ ಬೆಸ್ಟ್ ಫ್ರೆಂಡ್, ಉಭಯ ದೇಶಗಳ ಮಧ್ಯೆ ಚರ್ಚಿಸಲು ಹಲವು ವಿಷಯಗಳಿವೆ. ರೋಹಿಂಗ್ಯಾ ವಿವಾದ, ನದಿ ನೀರು ಹಂಚಿಕೆ ವಿವಾದ, ದ್ವಿಪಕ್ಷೀಯ ವ್ಯಾಪಾರ, ಗಡಿ ಸಮಸ್ಯೆ ಸೇರಿ ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಬಾಂಗ್ಲಾ ಸಚಿವರು ತಿಳಿಸಿದ್ದಾರೆ.