ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುಎಇನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಆರ್ಡರ್ ಆಫ್ ಜಾಯೆದ್' ಪುರಸ್ಕಾರವನ್ನು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಪ್ರದಾನ ಮಾಡಿದರು. ಈ ಪ್ರಶಸ್ತಿಗೆ ಪ್ರತಿಯಾಗಿ ಪಾಕ್ ಪ್ರಧಾನಿ ಇಮ್ರಾನ್ ಅವರನ್ನು ಡ್ರೈವರ್ಗೆ ಹೊಲಿಕೆ ಮಾಡಿ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಮೋದಿಗೆ UAEನ ಅತ್ಯುನ್ನತ ಪ್ರಶಸ್ತಿ: ಇಮ್ರಾನ್ ಖಾನ್ಗೆ 'ಬೆಸ್ಟ್ ಡ್ರೈವರ್' ಪಟ್ಟ ಕೊಟ್ಟ ಪಾಕ್ ನೆಟ್ಟಿಗರು - ಪಾಕ್ ಪ್ರಧಾನಿ ಇಮ್ರಾನ್
ಸೌದಿ ರಾಜಕುಮಾರ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಇಮ್ರಾನ್ ಖಾನ್ ರಾಜಾತಿಥ್ಯವನ್ನು ನೀಡಿದ್ದಾರೆ. ಸೌದಿ ರಾಜನನ್ನು ಆತ್ಮೀಯವಾಗಿ ಬರಮಾಡಿಕೊಂಡ ಇಮ್ರಾನ್ ಶಿಷ್ಟಾಚಾರ ಉಲ್ಲಂಘಿಸಿ, ತಾವೇ ಸ್ವತಃ ಕಾರು ಚಾಲನೆ ಮಾಡುವ ಮೂಲಕ ಸೌದಿ ರಾಜನಿಗೆ ಡ್ರೈವರ್ ಆಗಿದ್ದರು. ಇದೇ ಚಿತ್ರವನ್ನು ಇರಿಸಿಕೊಂಡ ನೆಟ್ಟಿಗರು 'ಅತ್ಯುತ್ತಮ ಚಾಲಕ' ಎಂಬ ಬಿರುದು ಕೊಟ್ಟು ಕಿಚಾಯಿಸುತ್ತಿದ್ದಾರೆ.

ಪಾಕಿಸ್ತಾನದ ಸಂಸದರು ಇಮ್ರಾನ್ ಖಾನ್ ಅವರ ಕಾರು ಚಾಲನೆಯನ್ನು ಸಂಸತ್ತಿನಲ್ಲಿ ಪ್ರಶ್ನಿಸಿದ್ದರು. ಇದರ ದೃಶ್ಯಾವಳಿಗಳನ್ನು ಇರಿಸಿಕೊಂಡ ನೆಟ್ಟಿಗರು, 'ಇಮ್ರಾನ್ ಖಾನ್ ಅವರು ಉಬರ್ ಕಂಪನಿಯ ಕಾರು ಚಾಲಕರಾಗಿದ್ದಾರೆ. ಪ್ರತಿ ಸವಾರಿಯ ಬಳಿಕ ಫೈವ್ ಸ್ಟಾರ್ ನೀಡುವಂತೆ ಕೇಳುತ್ತಿದ್ದಾರೆ' ಎಂಬ ಧಾಟಿಯಲ್ಲಿ ವ್ಯಂಗ್ಯವಾಡಿ ಫೋಟೋಗಳನ್ನು ಹರಿಬಿಟ್ಟಿದ್ದಾರೆ.