ನವದೆಹಲಿ:ವಿಶ್ವದ ಅತಿದೊಡ್ಡ ಆರ್ಥಿಕತೆ ದೇಶಗಳ ಸಂಘಟಿತ ಪ್ರಯತ್ನದಿಂದ ನಾವು ಕೊರೊನಾ ಸೋಂಕಿನಿಂದ ಬೇಗ ಚೇತರಿಸಿಕೊಳ್ಳಬಹುದು ಎಂದು ಪ್ರಧಾನಿ ಮೋದಿ 15ನೇ ಜಿ -20 ಶೃಂಗಸಭೆಯಲ್ಲಿ ಹೇಳಿದ್ದಾರೆ.
ಸಂಘಟಿತ ಪ್ರಯತ್ನದಿಂದ ಕೊರೊನಾ ಹಿಮ್ಮೆಟ್ಟಿಸೋಣ: ಜಿ-20 ಶೃಂಗಸಭೆಯಲ್ಲಿ ಮೋದಿ ಕರೆ
ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾರತದ ಐಟಿ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದು, ಕೋವಿಡ್ ಬಳಿಕದ ಸನ್ನಿವೇಶವು ವರ್ಕ್ ಫ್ರಮ್ ಎನಿವೇರ್ ಎಂಬ ಪರಿಕಲ್ಪನೆಯನ್ನು ಸರಳಗೊಳಿಸಿದೆ ಎಂದಿದ್ದಾರೆ. ಸಂಘಟಿತ ಪ್ರಯತ್ನದಿಂದ ಕೊರೊನಾ ಹಿಮ್ಮೆಟ್ಟಿಸೋಣವೆಂದು ಅವರು ಕರೆ ನೀಡಿದ್ದಾರೆ.
ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾರತದ ಐಟಿ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದು, ಕೋವಿಡ್ ಬಳಿಕದ ಸನ್ನಿವೇಶವು ವರ್ಕ್ ಫ್ರಮ್ ಎನಿವೇರ್ ಎಂಬ ಪರಿಕಲ್ಪನೆಯನ್ನು ಸರಳಗೊಳಿಸಿದೆ. ಜಿ-20 ಸಮರ್ಥ ಕಾರ್ಯನಿರ್ವಹಣೆಗೆ ಡಿಜಿಟಲ್ ಸೌಲಭ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನಾವು ಭಾರತದ ಐಟಿ ಶಕ್ತಿಯನ್ನು ನೀಡಿದ್ದೇವೆ ಎಂದು ಮೋದಿ ಹೇಳಿದರು.
ತಂತ್ರಜ್ಞಾನ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಆಧರಿಸಿ ಹೊಸ ಜಾಗತಿಕ ಸೂಚ್ಯಂಕ ಅಭಿವೃದ್ಧಿಪಡಿಸುವ ಅಗತ್ಯತೆ ಇದೆ. ಪ್ರತಿಭೆಗಳನ್ನು ಸೃಷ್ಟಿಸಲು ಬಹುಕೌಶಲ್ಯ ಮತ್ತು ಮರು-ಕೌಶಲ್ಯವು ಅಗತ್ಯ. ಇದರಿಂದ ಕಾರ್ಮಿಕರ ಘನತೆ ಮತ್ತು ಸ್ಥಿತಿಸ್ಥಾಪಕತ್ವವು ಹೆಚ್ಚುತ್ತದೆ. ಹೊಸ ತಂತ್ರಜ್ಞಾನಗಳು ಮಾನವೀಯತೆಗೆ ಎಷ್ಟರಮಟ್ಟಿಗೆ ಉಪಯುಕ್ತವಾಗಿವೆ ಎಂಬುದರ ಮೇಲೆ ಅದರ ಮೌಲ್ಯ ತಿಳಿಯಬಹುದು ಎಂದು ಮೋದಿ ಹೇಳಿದ್ದಾರೆ.