ಕರ್ನಾಟಕ

karnataka

ETV Bharat / bharat

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ರಿಂಗಣಿಸಲಿದೆ ಕಾಶ್ಮೀರ ಸಮಸ್ಯೆ... ಮೋದಿ, ಇಮ್ರಾನ್​​ ಖಾನ್​ ಭಾಷಣವೇ ಹೈಲೈಟ್​..! - ಪಾಕ್​ ಪ್ರಧಾನಿ ಇಮ್ರಾನ್​ ಖಾನ್​​

ಸದ್ಯದ ಮಾಹಿತಿ ಆಧಾರದಲ್ಲಿ ಪ್ರಧಾನಿ ಮೋದಿ ಸೆಪ್ಟೆಂಬರ್​ 27ರ ರಾತ್ರಿ 7.30ರಿಂದ 8 ಗಂಟೆಯ ಅವಧಿಯಲ್ಲಿ ಭಾಷಣ ಮಾಡಲಿದ್ದಾರೆ. ಮೋದಿ ಭಾಷಣದಲ್ಲಿ ನಂತರದಲ್ಲಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​​ ಸೇರಿದಂತೆ ಉಳಿದ ಪ್ರಮುಖ ವಿಶ್ವ ನಾಯಕರು ವಿವಿಧ ವಿಷಯದ ಕುರಿತು ಮಾತನಾಡಲಿದ್ದಾರೆ. ಈ ವಿಷಯವೀಗ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆ

By

Published : Aug 20, 2019, 1:28 PM IST

ನವದೆಹಲಿ:ಎರಡನೇ ಅವಧಿಯಲ್ಲಿ ಈಗಾಗಲೇ ಕೆಲವು ದೇಶಗಳನ್ನು ಸುತ್ತಿ ಬಂದಿರುವ ಪ್ರಧಾನಿ ಮೋದಿ ಮುಂದಿನ ತಿಂಗಳಾಂತ್ಯದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಸ್ತುತ ನವದೆಹಲಿ ಹಾಗೂ ನ್ಯೂಯಾರ್ಕ್​ನಲ್ಲಿರುವ ವಿಶ್ವಸಂಸ್ಥೆಯ ರಾಜತಾಂತ್ರಿಕ ಅಧಿಕಾರಿಗಳು ಸೆಪ್ಟೆಂಬರ್​ 27ರಂದು ನ್ಯೂಯಾರ್ಕ್​ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕರಡು ಪ್ರತಿಯನ್ನು ಸಿದ್ಧಪಡಿಸಿದ್ದಾರೆ. ಆದರೆ ಮೋದಿ ಈ ಪ್ರವಾಸದಲ್ಲಿ ಟ್ರಂಪ್​ ಜೊತೆಗೆ ಯಾವುದೇ ಮಾತುಕತೆಯೂ ನಿಗದಿಯಾಗಿಲ್ಲ.

ಸದ್ಯದ ಪ್ರತಿಯ ಆಧಾರದಲ್ಲಿ ಪ್ರಧಾನಿ ಮೋದಿ ಸೆಪ್ಟೆಂಬರ್​ 27ರ ರಾತ್ರಿ 7.30ರಿಂದ 8 ಗಂಟೆಯ ಅವಧಿಯಲ್ಲಿ ಭಾಷಣ ಮಾಡಲಿದ್ದಾರೆ. ಮೋದಿ ಭಾಷಣದಲ್ಲಿ ನಂತರದಲ್ಲಿ ಪಾಕ್​ ಪ್ರಧಾನಿ ಇಮ್ರಾನ್​ ಕಾನ್​​ ಸೇರಿದಂತೆ ಉಳಿದ ಪ್ರಮುಖ ವಿಶ್ವ ನಾಯಕರು ವಿವಿಧ ವಿಷಯದ ಕುರಿತು ಮಾತನಾಡಲಿದ್ದಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​ ಭಾಷಣಕ್ಕೆ 20 ನಿಮಿಷ ನಿಗದಿಪಡಿಸಲಾಗಿದ್ದು, ಕಾಶ್ಮೀರದ ಮಾನವ ಹಕ್ಕು ಉಲ್ಲಂಘನೆ, ಹವಾಮಾನ ಬದಲಾವಣೆ ಸೇರಿದಂತೆ ಕೆಲ ಪ್ರಮುಖ ವಿಷಯದ ಬಗ್ಗೆ ಮಾತನಾಡಲಿದ್ದಾರೆ ಎನ್ನಲಾಗಿದೆ.

ಕಾಶ್ಮೀರದ ವಿಚಾರವನ್ನು ಚರ್ಚಿಸಲು ಜಿನೇವಾದಲ್ಲಿ ಸೆಪ್ಟೆಂಬರ್​ 9ರಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಸಭೆ ನಡೆಯಲಿದ್ದು, ಇದಕ್ಕಾಗಿ ಪಾಕಿಸ್ತಾನ ತನ್ನ ಮಿತ್ರರಾಷ್ಟ್ರಗಳಾದ ಅಮೆರಿಕ ಹಾಗೂ ಚೀನಾದ ಸಹಾಯ ಕೋರಿದೆ.

ABOUT THE AUTHOR

...view details