ಕರ್ನಾಟಕ

karnataka

ETV Bharat / bharat

ವೈದ್ಯ- ಚಾರ್ಟರ್ಡ್ ಅಕೌಂಟೆಂಟ್ಸ್ ದಿನಕ್ಕೆ ಶುಭಕೋರಿದ ಪ್ರಧಾನಿ ಮೋದಿ - ಚಾರ್ಟರ್ಡ್ ಅಕೌಂಟೆಂಟ್ಸ್ ದಿನಾಚರಣೆ 2020

ಇಂದು ವೈದ್ಯ ಮತ್ತು ಚಾರ್ಟರ್ಡ್ ಅಕೌಂಟೆಂಟ್ಸ್ ದಿನದ ಹಿನ್ನೆಲೆ ಎರಡೂ ಕ್ಷೇತ್ರದವರಿಗೂ ಟ್ವೀಟ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ.

PM Modi applauds role of doctors, chartered accountants
ವೈದ್ಯ ದಿನಾಚರಣೆಗೆ ಶುಭಕೋರಿದ ಪ್ರಧಾನಿ ಮೋದಿ

By

Published : Jul 1, 2020, 12:46 PM IST

ನವದೆಹಲಿ :ಕೋವಿಡ್ ವಿರುದ್ಧದ ಹೋರಾಟದಲ್ಲಿ ವೈದ್ಯರ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಭಾರತವು ನಮ್ಮ ವೈದ್ಯರಿಗೆ ನಮಿಸುತ್ತದೆ. ವೈದ್ಯರು ಕೋವಿಡ್​ ವಿರುದ್ಧದ ಉತ್ಸಾಹಭರಿತ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಅಸಾಧಾರಣ ವ್ಯಕ್ತಿಗಳು ಎಂದು ವೈದ್ಯರ ದಿನಾಚರಣೆಗೆ ಶುಭಕೋರಿ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ. ಅಲ್ಲದೇ, ತಾಯಿಯು ಜನ್ಮ ನೀಡುತ್ತಾಳೆ, ವೈದ್ಯರು ನಮಗೆ ಪುನರ್ಜನ್ಮ ನೀಡುತ್ತಾರೆ ಎಂದು ಹೇಳುವ ಭಾಷಣದ ತುಣುಕೊಂದನ್ನು ಹಂಚಿಕೊಂಡಿದ್ದಾರೆ.

ಡಾ.ಬಿ.ಸಿ ರಾಯ್ ಅವರ ಜನ್ಮ ದಿನವನ್ನ ವೈದ್ಯರ ದಿನ ಎಂದು ಆಚರಿಸಲಾಗುತ್ತದೆ. ಅಲ್ಲದೇ ಜುಲೈ-1 ಅನ್ನು ಚಾರ್ಟರ್ಡ್​ ​ ಅಕೌಂಟೆಂಟ್ಸ್ ಡೇ ಎಂದು ಸಹ ಆಚರಿಸಲಾಗುತ್ತದೆ.

ಆರೋಗ್ಯಕರ ಮತ್ತು ಪಾರದರ್ಶಕ ಆರ್ಥಿಕತೆ ಖಾತರಿಪಡಿಸುವಲ್ಲಿ ನಮ್ಮ ಶ್ರಮಶೀಲ ಸಿಎ ಸಮುದಾಯದ ಪ್ರಮುಖ ಪಾತ್ರವಿದೆ. ರಾಷ್ಟ್ರಕ್ಕೆ ಅವರ ಸೇವೆಗಳು ಬಹಳ ಮೌಲ್ಯಯುತವಾಗಿವೆ. ಚಾರ್ಟರ್ಡ್ ಅಕೌಂಟೆಂಟ್ಸ್ ದಿನದ ಶುಭಾಶಯಗಳು ಎಂದು ಪ್ರಧಾನಿ ಹೇಳಿದ್ದಾರೆ.

ABOUT THE AUTHOR

...view details