ನವದೆಹಲಿ:ಕೋವಿಡ್ -19 ವಿರುದ್ಧದ ಹೋರಾಟಕ್ಕಾಗಿ ಆಸಿಯಾನ್ ನಿಧಿಗೆ 1 ಮಿಲಿಯನ್ ಡಾಲರ್ ಹಣ ನೀಡುವುದಾಗಿ 17ನೇ ಆಸಿಯಾನ್ - ಇಂಡಿಯಾ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.
10 ಆಸಿಯಾನ್ ರಾಷ್ಟ್ರಗಳ ನಾಯಕರನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಪ್ರತಿಕ್ರಿಯೆ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ವ್ಯಾಪಕವಾದ ಬೆಂಬಲವನ್ನು ವ್ಯಕ್ತಪಡಿಸಿದರು ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕೈಗೊಂಡ ಒಕ್ಕೂಟ ಕೆಲ ನಿರ್ಣಯಗಳನ್ನು ಸ್ವಾಗತಿಸಿದರು.
ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, "ಕೋವಿಡ್ -19 ಸಾಂಕ್ರಾಮಿಕ ಹರಡುವುದನ್ನು ತಡೆಯಲು ಭಾರತದ ಪ್ರಯತ್ನ ಮತ್ತು ಅಂತಾರಾಷ್ಟ್ರೀಯ ಸಮುದಾಯ ವ್ಯಾಪಕವಾದ ಬೆಂಬಲವನ್ನು ತೋರಿಸಿದ್ದಾರೆ. ಅಲ್ಲದೆ ಕೋವಿಡ್ ಹರಡುವುದನ್ನು ತಡೆಯಲು ಆಸಿಯಾನ್ ಒಕ್ಕೂಟ ಕೈಗೊಂಡ ನಿರ್ಣಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೋವಿಡ್ -19 ವಿರುದ್ಧದ ಹೋರಾಟಕ್ಕಾಗಿ ಆಸಿಯಾನ್ ನಿಧಿಗೆ 1 ಮಿಲಿಯನ್ ಡಾಲರ್ ಹಣ ನೀಡುವುದಾಗಿ ಘೋಷಿಸಿದ್ದಾರೆ. ಆಸಿಯಾನ್ ಮತ್ತು ಭಾರತದ ನಡುವೆ ಹೆಚ್ಚಿನ ಭೌತಿಕ ಮತ್ತು ಡಿಜಿಟಲ್ ಸಂಪರ್ಕದ ಮಹತ್ವವನ್ನು ಒತ್ತಿಹೇಳಿದ್ದಾರೆ ಮತ್ತು ಆಸಿಯಾನ್ ಸಂಪರ್ಕವನ್ನು ಬೆಂಬಲಿಸಲು ಭಾರತವು ಒಂದು ಬಿಲಿಯನ್ ಸಾಲವನ್ನು ನೀಡುವ ಬಗ್ಗೆ ಪುನರುಚ್ಚರಿಸಿದ್ದಾರೆ" ಎಂದು ಮಾಹಿತಿ ನೀಡಿದೆ.
ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್) ಈ ಪ್ರದೇಶದ ಅತ್ಯಂತ ಪ್ರಭಾವಶಾಲಿ ಗುಂಪುಗಳಲ್ಲಿ ಒಂದೆಂದು ಪರಿಗಣಿಸಲಾಗಿದ್ದು, ಭಾರತ, ಯುಎಸ್, ಚೀನಾ, ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವಾರು ದೇಶಗಳು ಇದರ ಪಾಲುದಾರರಾಗಿದ್ದಾರೆ. ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಸಿಂಗಪುರ್, ಥೈಲ್ಯಾಂಡ್, ಬ್ರೂನಿ, ವಿಯೆಟ್ನಾಂ, ಲಾವೋಸ್, ಮ್ಯಾನ್ಮಾರ್ ಮತ್ತು ಕಾಂಬೋಡಿಯಾ ಇದರ ಇತರ ಸದಸ್ಯ ರಾಷ್ಟ್ರಗಳು.