ಕರ್ನಾಟಕ

karnataka

ETV Bharat / bharat

ಠಾಕ್ರೆ ಪ್ರಮಾಣ ವಚನದಲ್ಲಿ ಮೋದಿ, ಅಮಿತ್ ಶಾ ಭಾಗಿ..? ಸೇನೆ ಹೇಳಿದ್ದಿಷ್ಟು..! - ಠಾಕ್ರೆ ಪ್ರಮಾಣ ವಚನದಲ್ಲಿ ಮೋದಿ ಹಾಗೂ ಅಮಿತ್ ಶಾ ಭಾಗಿ

ಉದ್ಧವ್ ಠಾಕ್ರೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸುತ್ತೇವೆ ಎಂದಿದೆ.

Uddhav Thackerays Oath
ಠಾಕ್ರೆ ಪ್ರಮಾಣ ವಚನ

By

Published : Nov 27, 2019, 7:33 AM IST

ನವದೆಹಲಿ: ಬಹುಮತ ಸಾಬೀತಿಗೂ ಮುನ್ನವೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಪತನವಾಗಿದೆ. ಹೀಗಾಗಿ ಮಹಾಮೈತ್ರಿಕೂಟದ ಸರ್ಕಾರ ನಾಳೆ ಅಸ್ತಿತ್ವಕ್ಕೆ ಬರುವುದು ನಿಶ್ಚಿತವಾಗಿದೆ.

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ನೂತನ ಸಿಎಂ ಆಗಿ ನಾಳೆ ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕ್​ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದ್ದು, ವಿವಿಧ ಪಕ್ಷದ ಮುಖಂಡರು ಭಾಗಿಯಾಗಲಿದ್ದಾರೆ.

ಕೇವಲ 80 ಗಂಟೆ! ಭಾರತೀಯ ರಾಜಕೀಯ ಇತಿಹಾಸದಲ್ಲೇ ಫಡ್ನವೀಸ್​ ವಿಭಿನ್ನ ದಾಖಲೆ

ಬಿಜೆಪಿಗೆ ಸೆಡ್ಡು ಹೊಡೆದು ಕೊನೆಗೂ ಸರ್ಕಾರ ರಚಿಸುತ್ತಿರುವ ಶಿವಸೇನೆ, ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸುತ್ತೇವೆ ಎಂದಿದೆ. ಈ ಬಗ್ಗೆ ಶಿವಸೇನೆ ವಕ್ತಾರ ಸಂಜಯ್ ರಾವುತ್ ಹೇಳಿಕೆ ನೀಡಿದ್ದಾರೆ.

ಫಡ್ನವೀಸ್ ಸರ್ಕಾರ ಪತನವಾಗುತ್ತಿದ್ದಂತೆ, ಠಾಕ್ರೆ ಸರ್ಕಾರ ಡಿ.1ರಂದು ಅಸ್ತಿತ್ವಕ್ಕೆ ಬರಲಿದೆ ಎಂದು ಎನ್​​ಸಿಪಿ ನಾಯಕ ನವಾಬ್ ಮಲಿಕ್ ಘೋಷಣೆ ಮಾಡಿದ್ದರು. ಆದರೆ ಕೆಲವೇ ಗಂಟೆಯಲ್ಲಿ ದಿನಾಂಕವನ್ನು ನ.28ಕ್ಕೆ ಎಂದು ಬದಲಾವಣೆ ಮಾಡಲಾಗಿದೆ.

5 ವರ್ಷಗಳ ಕಾಲ ಉದ್ಧವ್ ಠಾಕ್ರೆ 'ಮಹಾ' ಮುಖ್ಯಮಂತ್ರಿ.. ಸಂಜಯ್​ ರಾವತ್

ABOUT THE AUTHOR

...view details