ನವದೆಹಲಿ: ಬಿಹಾರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಚುರುಕು ಪಡೆದುಕೊಳ್ಳುತ್ತಿದ್ದು, ಈಗಾಗಲೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಭರದ ಪ್ರಚಾರ ನಡೆಸಿ, ಮತದಾರರ ಮನಗೆಲ್ಲುವ ಕೆಲಸ ಮಾಡ್ತಿದ್ದಾರೆ.
ಬಿಹಾರ ಚುನಾವಣೆ: ಮೋದಿ, ಅಮಿತ್ ಶಾ, ಯೋಗಿ ಸೇರಿ 30 ಜನ ಸ್ಟಾರ್ ಕ್ಯಾಂಪೆನರ್! - ಬಿಜೆಪಿಯಿಂದ 30 ಸ್ಟಾರ್ ಕ್ಯಾಂಪೆನರ್
2020ರ ಬಿಹಾರ ವಿಧಾನಸಭೆ ಚುನಾವಣೆಗಾಗಿ ಭಾರತೀಯ ಜನತಾ ಪಾರ್ಟಿ 30 ಸ್ಟಾರ್ ಕ್ಯಾಂಪೆನರ್ ಲಿಸ್ಟ್ ರಿಲೀಸ್ ಮಾಡಿದೆ.
ಇದರ ಮಧ್ಯೆ ಭಾರತೀಯ ಜನತಾ ಪಾರ್ಟಿ ಮೊದಲ ಹಂತದ ಚುನಾವಣೆಗಾಗಿ ಪ್ರಚಾರ ನಡೆಸಲು 30 ಜನ ಸ್ಟಾರ್ ಕ್ಯಾಂಪೇನರ್ ಲಿಸ್ಟ್ ರಿಲೀಸ್ ಮಾಡಿದೆ. ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಿಸ್ಟ್ನಲ್ಲಿದ್ದು, ಬಿಹಾರ ಚುನಾವಣೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಭಾಗಿಯಾಗಲಿದ್ದಾರೆ.
243 ಕ್ಷೇತ್ರಗಳ ಬಿಹಾರ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದೆ. ಮೊದನೇ ಹಂತ ಅಕ್ಟೋಬರ್ 28, ಎರಡನೇ ಹಂತ ನವೆಂಬರ್ 3 ಹಾಗೂ ಮೂರನೇ ಹಂತ ನವೆಂಬರ್ 7ರಂದು ನಡೆಯಲಿದ್ದು, ಫಲಿತಾಂಶ ನವೆಂಬರ್ 10ರಂದು ಹೊರಬೀಳಲಿದೆ. ಆರ್ಜೆಡಿ-ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಕಾರಣ ಉಭಯ ಪಕ್ಷಗಳು ಕ್ರಮವಾಗಿ 122 ಹಾಗೂ 121 ಕ್ಷೇತ್ರಗಳಲ್ಲಿ ಭಾಗಿಯಾಗಲಿವೆ. ಪ್ರಚಾರಕ್ಕಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸೇರಿ ಕಾಂಗ್ರೆಸ್ ಕೂಡ ಸ್ಟಾರ್ ಕ್ಯಾಂಪೆನರ್ ಲಿಸ್ಟ್ ರಿಲೀಸ್ ಮಾಡಿದೆ.