- ನಾವು ಸಾಮಾಜಿಕ ಅಂತರ ಹೆಚ್ಚಿಸಿ, ಭಾವನಾತ್ಮಕ ಅಂತರ ಕಡಿಮೆ ಮಾಡಬೇಕು
- ಅನಾವಶ್ಯಕವಾಗಿ ಓಡಾಡಬೇಡಿ, ನಿಮ್ಮನ್ನ ನೀವು ರಕ್ಷಿಸಿಕೊಳ್ಳಿ
- ನಿಸ್ವಾರ್ಥದಿಂದ ಕೆಲಸ ಮಾಡುವವರು ಉತ್ತಮ ವೈದ್ಯ
- ಈ ಬಗ್ಗೆ ಆ ಕಾಲದಲ್ಲಿ ಚರಕ ಉಲ್ಲೇಖಿಸಿದ್ದಾರೆ
- 2020ರ ವರ್ಷವನ್ನು ವಿಶ್ವ ದಾದಿಯರ ವರ್ಷವನ್ನಾಗಿ ಜಗತ್ತು ಆಚರಿಸುತ್ತಿದೆ
ಸಾಮಾಜಿಕ ಅಂತರ ಹೆಚ್ಚಿಸಿ, ಭಾವನಾತ್ಮಕ ಅಂತರ ಕಡಿಮೆ ಮಾಡಿ: ಮನ್ ಕಿ ಬಾತ್ನಲ್ಲಿ ಮೋದಿ ಸಲಹೆ - ಕೋವಿಡ್-19
11:39 March 29
ಸಾಮಾಜಿಕ ಅಂತರ ಹೆಚ್ಚಿಸಿ, ಭಾವನಾತ್ಮಕ ಅಂತರ ಕಡಿಮೆ ಮಾಡಿ: ಮೋದಿ
11:35 March 29
ಲಾಕ್ಡೌನ್ ಉಲ್ಲಂಘನೆ ಮಾಡುವವರು ಕೊರೊನಾದಿಂದ ಬಚಾವ್ ಆಗಲ್ಲ: ಮೋದಿ
- ಲಾಕ್ ಡೌನ್ ಉಲ್ಲಂಘನೆ ಮಾಡುವವರು ಸೋಂಕಿನಿಂದ ಬಚಾವ್ ಆಗಲ್ಲ
- ಜಗತ್ತಿನಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ
- ಹೋಮ್ ಕ್ವಾರಂಟೈನ್ನಲ್ಲಿರುವವರು ದುರ್ವರ್ತನೆ ತೋರುತ್ತಿರುವುದು ಕೇಳಿಬರುತ್ತಿದೆ
- ಪರಿಸ್ಥಿತಿಯನ್ನು ನಾವು ಅರ್ಥಮಾಡಿಕೊಳ್ಳಬೇಕು, ಗ್ರಾಹಿಗಳಾಗಬೇಕು
11:31 March 29
ಲಾಕ್ಡೌನ್ ಪಾಲಿಸದಿದ್ದರೆ ನಮ್ಮ ರಕ್ಷಣೆ ಕಷ್ಟ: ಪ್ರಧಾನಿ
- ಕೊರೊನಾ ವಿರುದ್ಧ ಹೋರಾಡುವ ಹಲವು ಸೈನಿಕರು ನಮ್ಮಲ್ಲಿದ್ದಾರೆ
- ಎಲ್ಲರಿಗೂ ಲಾಕ್ ಡೌನ್ ನಿಯಮ ಉಲ್ಲಂಘಿಸುವ ಇಚ್ಛೆಯಿಲ್ಲ
- ಆದರೆ ಕೆಲವರು ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ
- ಲಾಕ್ಡೌನ್ ನಿಯಮ ಪಾಲಿಸದಿದ್ದರೆ ನಮ್ಮನ್ನ ನಾವು ರಕ್ಷಿಸಿಕೊಳ್ಳುವುದು ಕಷ್ಟ
11:28 March 29
ಲಕ್ಷ್ಮಣ ರೇಖೆ ದಾಟಿದರೆ ಆಪತ್ತು ಖಂಡಿತ: ಮೋದಿ
- ಎಲ್ಲರೂ ಒಂದಾಗಿ ಕೊರೊನಾ ವಿರುದ್ಧ ಸಂಕಲ್ಪ ಕೈಗೊಳ್ಳಬೇಕು
- ಇನ್ನೂ ಕೆಲವರು ಕೊರೊನಾ ಸೋಂಕನ್ನು ಗಂಭೀರವಾಗಿ ಪರಿಗಣಿಸಿಲ್ಲ
- ನಿಷೇಧಾಜ್ಞೆಯ ಲಕ್ಷ್ಮಣ ರೇಖೆ ದಾಟಿದರೆ ಆಪತ್ತು ಖಂಡಿತ
- ಎಲ್ಲಾ ಸುಖಗಳ ಮೂಲ ಆರೋಗ್ಯವಾಗಿದ್ದು, ಅದನ್ನು ಕಾಪಾಡಿಕೊಳ್ಳಬೇಕಿದೆ
11:21 March 29
ಲಾಕ್ಡೌನ್ ನಿಮ್ಮ ರಕ್ಷಣೆಗೆ ಜಾರಿ : ಮೋದಿ
- ಕೊರೊನಾದಿಂದ ಚೇತರಿಸಿಕೊಂಡವರೊಂದಿಗೆ ನಾನು ಮಾತನಾಡಿದ್ದೇನೆ
- ವೈದ್ಯರು ಹಾಗೂ ನರ್ಸ್ಗಳೊಂದಿಗೆ ಕೂಡಾ ಮಾತನಾಡಿದ್ದೇನೆ
- ಈ ಲಾಕ್ಡೌನ್ ನಿಮ್ಮ ರಕ್ಷಣೆಗೆ ಜಾರಿ ತರಲಾಗಿದೆ
- ಆರೋಗ್ಯಕ್ಕಿಂತ ಮತ್ತೊಂದು ಭಾಗ್ಯ ಜೀವನದಲ್ಲಿ ಯಾವುದೂ ಇಲ್ಲ
- ಅದಕ್ಕೆ ನಾವು ಪ್ರಾಧಾನ್ಯತೆ ಕೊಡಬೇಕು
- ಇಂತಹ ಸಂದಿಗ್ಧ ಸಂದರ್ಭದಲ್ಲಿ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿಯೊಂದಿಗೆ ನಾವಿರಬೇಕು
10:42 March 29
ಕೊರೊನಾ ಕುರಿತು ಮೋದಿ ಮನ್ ಕಿ ಬಾತ್: ಲೈವ್ ಅಪ್ಡೇಟ್
ನವದೆಹಲಿ: ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಈಗ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾರೆ. ಈ ಬಾರಿ ಕೊರೊನಾ ಮಹಾಮಾರಿಯ ನಿರ್ಮೂಲನೆಗಾಗಿ ತೆಗೆದುಕೊಂಡಿರುವ ಕ್ರಮಗಳು ಹಾಗೂ ಅದರಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಬಗ್ಗೆ ಸಾಕಷ್ಟು ವಿಚಾರಗಳು ಅವರ ಭಾಷಣದ ಹೈಲೈಟ್ಸ್.
- ನಿಮ್ಮ ಕುಟುಂಬದ ರಕ್ಷಣೆಗೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ
- ಕೊರೊನಾ ವಿರುದ್ಧ ಹೋರಾಡುವವರಿಗೆ ಧನ್ಯವಾದ ಅರ್ಪಿಸೋಣ
- ಜಗತ್ತಿನಲ್ಲಿ ಕೊರೊನಾ ಸೋಂಕು ಹರಡುತ್ತಿದೆ
- ಹೀಗಾಗಿ ಕಟ್ಟೆಚ್ಚರ ವಹಿಸಲೇಬೇಕಿದೆ
- ಎಲ್ಲರೂ ಒಂದಾಗಿ ಕೊರೊನಾ ವಿರುದ್ಧ ಹೋರಾಡಲು ಕಟಿಬದ್ಧರಾಗಬೇಕು
- ಈ ಮಾರಣಾಂತಿಕ ವೈರಸ್ ವಿರುದ್ಧ ಮನೆಯಲ್ಲಿಯೇ ಇದ್ದು ಹೋರಾಡೋಣ
- ಕೊರೊನಾ ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿಗೆ ಸಹಕರಿಸೋಣ
- ಲಾಕ್ ಡೌನ್ ಆದೇಶದಿಂದಾಗಿ ಹಲವರಿಗೆ ನನ್ನ ಮೇಲೆ ಕೋಪವಿರಬಹುದು
- ದೇಶವಾಸಿಗಳ ರಕ್ಷಣೆಗೆ ಈ ಕ್ರಮಗಳು ಅವಶ್ಯ