ಕರ್ನಾಟಕ

karnataka

ETV Bharat / bharat

ವಿಶ್ವದ ಅತಿದೊಡ್ಡ ಸ್ಟಾರ್ಟ್​​ ಅಪ್​​ಗಳಲ್ಲಿ ಭಾರತ ಮುಂಚೂಣಿ: ಪ್ರಧಾನಿ ಮೋದಿ - ಸ್ಟಾರ್ಟ್ ಅಪ್ ಇಂಡಿಯಾದಲ್ಲಿ ನಮೋ ಭಾಷಣ

ಸ್ಟಾರ್ಟ್​ ಅಪ್​ ಇಂಡಿಯಾ ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

PM modi
PM modi

By

Published : Jan 16, 2021, 7:08 PM IST

ನವದೆಹಲಿ:ದೇಶದಲ್ಲಿ ಹೊಸ ಸ್ಟಾರ್ಟ್​ ಅಪ್​ಗಳು ಬೆಳೆಯಲು ಕೇಂದ್ರ ಸರ್ಕಾರ ಸಹಾಯ ಮಾಡುತ್ತಿದ್ದು, ಅದಕ್ಕಾಗಿ 1,000 ಕೋಟಿ ರೂ. ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಯುವ ಜನರಿಂದ, ಯುವಕರಿಗೆ ಎಂಬ ಮಂತ್ರದ ಮೂಲಕ ಈ ವ್ಯವಸ್ಥೆ ರಚಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಸ್ಟಾರ್ಟ್​ ಅಪ್​ ಇಂಡಿಯಾ ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದ್ದು,ಇಡೀ ದೇಶ ಇಂದು ಡಿಜಿಟಿಲ್​ ಪಾವತಿ ಮಾಡ್ತಿದ್ದು, ಎಲ್ಲ ವಲಯಗಳಲ್ಲೂ ಇದು ಮುಂದುವರೆಯಬೇಕು ಎಂದು ತಿಳಿಸಿದರು. ಇದೇ ವೇಳೆ ಡಿಜಿಟಲ್ ಇಂಡಿಯಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಭಾರತದಲ್ಲಿ 41,000 ಕ್ಕೂ ಹೆಚ್ಚು ಸ್ಟಾರ್ಟ್​ ಅಪ್​ಗಳಿದ್ದು, ಐಟಿ ಕ್ಷೇತ್ರದಲ್ಲಿ ಸುಮಾರಿ 5,700, ಆರೋಗ್ಯ ಕ್ಷೇತ್ರದಲ್ಲಿ 3,600 ಹಾಗೂ ಕೃಷಿ ಕ್ಷೇತ್ರದಲ್ಲಿ 1,700 ಸ್ಟಾರ್ಟ್​ ಅಪ್​ ಪ್ರಾರಂಭಗೊಂಡಿವೆ ಎಂದು ತಿಳಿಸಿದರು.

ABOUT THE AUTHOR

...view details