ನವದೆಹಲಿ/ಮೈಸೂರು:ಶತಮಾನೋತ್ಸವ ಸಂಭ್ರಮ ಪೂರೈಸುವ ಮೂಲಕ ದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ಮೈಸೂರು ವಿಶ್ವವಿದ್ಯಾಲಯವು ಇಂದು 100ನೇ ಘಟಿಕೋತ್ಸವ ಸಮಾರಂಭವನ್ನು ಆಯೋಜಿಸಿದೆ. ಕಾರ್ಯಕ್ರಮಮವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ.
ಮೈಸೂರು ವಿವಿ ಘಟಿಕೋತ್ಸವವನ್ನುದ್ದೇಶಿಸಿ ಮೋದಿ ಮಾ ಕನ್ನಡದಲ್ಲೇ ದಸರಾ ಹಬ್ಬದ ಶುಭ ಕೋರಿದ ಪಿಎಂ
100ನೇ ಘಟಿಕೋತ್ಸವ ಸಂಭ್ರಮದಲ್ಲಿರುವ ವಿಶ್ವವಿದ್ಯಾಲಯದ ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಹಾಗೂ ಮೈಸೂರು ಜನತೆಗೆ ಕನ್ನಡದಲ್ಲೇ ದಸರಾ ಹಬ್ಬದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ಕೋವಿಡ್ ಕಾರಣದಿಂದಾಗಿ ವಿಜೃಂಭಣೆಯಿಂದ ಕಾರ್ಯಕ್ರಮ ಆಚರಿಸಲು ನಿರ್ಬಂಧಗಳು ಇರಬಹುದು. ಅದರಲ್ಲೂ ಮಳೆ ಕೂಡ ಸ್ವಲ್ಪ ನಿರ್ಬಂಧ ಹೇರಿದೆ. ಆದರೆ ಆಚರಣೆಯ ಉತ್ಸಾಹ ಮಾತ್ರ ಕುಂದಿಲ್ಲ. ಪ್ರವಾಹ ಪೀಡಿತ ಕುಟುಂಬಗಳಿಗೆ ಸಾಂತ್ವನ ತಿಳಿಸುತ್ತೇನೆ. ರಾಜ್ಯಕ್ಕೆ ಕೇಂದ್ರದಿಂದ ಸಾಧ್ಯವಾದಷ್ಟು ನೆರವು ನೀಡುತ್ತೇವೆ ಎಂದರು.
ಮೈಸೂರು ವಿವಿ ಘಟಿಕೋತ್ಸವವನ್ನುದ್ದೇಶಿಸಿ ಮೋದಿ ಮಾ ರಾಷ್ಟ್ರೀಯ ಶಿಕ್ಷಣ ನೀತಿ ಮಹತ್ವ ತಿಳಿಸಿದ ಪ್ರಧಾನಿ
ಶಿಕ್ಷಣದ ಮೂಲಭೂತ ವ್ಯವಸ್ಥೆಯ ಬದಲಾವಣೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಮೊದಲ ಹೆಜ್ಜೆಯಾಗಿದೆ. ನಮ್ಮ ದೇಶದಲ್ಲಿ ಈಗ ಆಗುತ್ತಿರುವ ಸುಧಾರಣೆಗಳು ಈ ಹಿಂದೆ ಆಗಿಲ್ಲ. ಕಳೆದ 6 ವರ್ಷಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಎಲ್ಕೆಜಿಯಿಂದ ಉನ್ನತ ಶಿಕ್ಷಣದವರೆಗೂ ಸಾಕಷ್ಟು ಬದಲಾವಣೆ ತರಲಿದೆ. ಮೈಸೂರು ವಿಶ್ವವಿದ್ಯಾಲಯವು ಶೀಘ್ರದಲ್ಲೇ ಇದನ್ನು ಅಳವಡಿಸಿಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಪಿಎಂ ಮೋದಿ ಹೇಳಿದರು.
ಮೈಸೂರು ವಿವಿ ಘಟಿಕೋತ್ಸವವನ್ನುದ್ದೇಶಿಸಿ ಮೋದಿ ಮಾ ಗೋರೂರು ರಾಮಸ್ವಾಮಿ ಅಯ್ಯಂಗಾರ್ರ ಮಾತು ನೆನೆದ ಮೋದಿ
ಇಂದು ನಿಮಗೆ ಬಹಳ ಮಹತ್ತರವಾದ ದಿನವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಅಪಾರ. ಪ್ರಾಚೀನ ಭಾರತದ ಶಿಕ್ಷಣದ ಮಹತ್ವದ ಸ್ಥಳ ಮೈಸೂರು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯನವರ ಕನಸು ಮೈಸೂರು. 'ಶಿಕ್ಷಣ ಜೀವನದ ಬೆಳಕಾಗಿದೆ' ಎಂದು ಕನ್ನಡದ ಮಹಾನ್ ಲೇಖಕ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಹೇಳಿದ್ದರು. ವಿವಿಯ ಪದವಿ ಪಡೆದು ನಿಜ ಜೀವನಕ್ಕೆ ಕಾಲಿಡುತ್ತೀದ್ದೀರಿ. ಪದವಿ ಜೊತೆ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಮೋದಿ ಹೇಳಿದರು.
ದೇಶಕ್ಕೆ ಹೆಣ್ಣು ಮಕ್ಕಳ ಕೊಡುಗೆ ಅಪಾರವಿದೆ. ನಿಮ್ಮ ಸಾಮರ್ಥ್ಯದ ಆಧಾರದ ಮೇಲೆ ಸಾಧನೆಗಳನ್ನು ಮಾಡಿ. ನಿಮ್ಮ ಪ್ರತಿಭೆಯ ಮೂಲಕ ದೇಶಕ್ಕೆ ಕೊಡುಗೆ ನೀಡಿ ಎಂದ ಪ್ರಧಾನಿ, ಉಜ್ವಲ ಭವಿಷ್ಯ ನಿಮ್ಮದಾಗಿರಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.