ಕರ್ನಾಟಕ

karnataka

ETV Bharat / bharat

ಶಿಕ್ಷಣ, ಕೃಷಿ, ಉತ್ಪಾದನಾ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ: ಕೆನಡಾ ಉದ್ಯಮಿಗಳಿಗೆ ನಮೋ ಆಹ್ವಾನ! - ಕೆನಡಾ ಉದ್ಯಮಿಗಳಿಗೆ ನಮೋ ಆಹ್ವಾನ

ಖಾಸಗಿ ವಲಯ ಭಾಗಿಯಾಗುವ ಉದ್ದೇಶದಿಂದ ಶಿಕ್ಷಣ, ಕೃಷಿ ಮತ್ತು ಕಾರ್ಮಿಕ ಕ್ಷೇತ್ರಗಳಲ್ಲಿ ಮಹತ್ವದ ಸುಧಾರಣೆ ತರಲಾಗಿದೆ ಎಂದು ತಿಳಿಸಿದ ನಮೋ, ಭಾರತದಲ್ಲಿ ಹೂಡಿಕೆ ಮಾಡುವಂತೆ ಕೆನಡಾಗೆ ಆಹ್ವಾನ ನೀಡಿದರು.

PM invites Canadian businesses
PM invites Canadian businesses

By

Published : Oct 8, 2020, 10:19 PM IST

ನವದೆಹಲಿ:ಭಾರತ ಈಗಾಗಲೇ ಸಾಕಷ್ಟು ಬಲಿಷ್ಠವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಬಲವಾಗಲಿದೆ ಎಂದು ನಮೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ವೆಸ್ಟ್​ ಇಂಡಿಯಾ ವಿಡಿಯೋ ಕಾನ್ಪರೆನ್ಸ್​​ನಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಕೆನಡಾದಲ್ಲಿ ನಡೆದ ಇನ್ವೆಸ್ಟ್​ ಇಂಡಿಯಾ ವಾರ್ಷಿಕ ವಿಡಿಯೋ ಕಾನ್ಫರೆನ್ಸ್​​ನಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಶಿಕ್ಷಣ, ಕೃಷಿ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವಂತೆ ಕೆನಡಾ ಉದ್ಯಮಿಗಳಿಗೆ ಮುಕ್ತ ಆಹ್ವಾನ ನೀಡಿದರು.

ಕೆನಡಾ ಉದ್ಯಮಿಗಳಿಗೆ ನಮೋ ಆಹ್ವಾನ

ಕೊರೊನಾ ಮಹಾಮಾರಿ ಸಂದರ್ಭದಲ್ಲೂ ಭಾರತ ಔಷಧ ಉತ್ಪನ್ನ ಮಾಡಿ ಜಗತ್ತಿಗೆ ರಫ್ತು ಮಾಡಿದ್ದು, ಪ್ರಪಂಚದ 150 ದೇಶಗಳಿಗೆ ಔಷಧ ಪೂರೈಕೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು. ಮಹಾಮಾರಿ ಕೊರೊನಾ ವೈರಸ್​ ಕಾಣಿಸಿಕೊಳ್ಳುವುದಕ್ಕೂ ಮೊದಲು ಭಾರತದಲ್ಲಿ ಪಿಪಿಇ ಕಿಟ್​ ಉತ್ಪಾದನೆ ಇರಲಿಲ್ಲ. ಆದರೆ, ಇದೀಗ ಹೆಚ್ಚಿನ ಪ್ರಮಾಣದಲ್ಲಿ ಅದರ ಉತ್ಪಾದನೆ ಮಾಡಲಾಗುತ್ತಿದ್ದು, ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಅತಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದಿದ್ದಾರೆ.

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕಾರ್ಮಿಕ ಮತ್ತು ಕೃಷಿ ಸುಧಾರಣೆಗಳತ್ತ ಪ್ರಧಾನಿ ಮೋದಿ ಒತ್ತಿ ಹೇಳಿದ್ದು, ರೈತರಿಗೆ ಮಾರುಕಟ್ಟೆ ಆಯ್ಕೆ ಮಾಡಿಕೊಳ್ಳುವ ಹಕ್ಕು ನೀಡಲಾಗಿದೆ ಎಂದಿದ್ದಾರೆ. ಭಾರತ - ಕೆನಡಾ ನಡುವಿನ ವ್ಯಾಪಾರ ಸಂಬಂಧ ಮತ್ತಷ್ಟು ಬಲಪಡಿಸುವ ಬಗ್ಗೆ ಗಮನ ಹರಿಸಲು ಈ ಸಮ್ಮೇಳನ ಆಯೋಜನ ಮಾಡಲಾಗಿದೆ ಎಂದರು.

ಖಾಸಗಿ ವಲಯ ಭಾಗಿಯಾಗುವ ಉದ್ದೇಶದಿಂದ ಶಿಕ್ಷಣ, ಕೃಷಿ ಮತ್ತು ಕಾರ್ಮಿಕ ಕ್ಷೇತ್ರಗಳಲ್ಲಿ ಮಹತ್ವದ ಸುಧಾರಣೆ ತರಲಾಗಿದೆ ಎಂದು ತಿಳಿಸಿದ ನಮೋ, ಭಾರತದಲ್ಲಿ ಉತ್ಪಾದನೆ ಮಾಡಲು ಕೆನಡಾಗೆ ಮುಕ್ತ ಆಹ್ವಾನ ನೀಡಿದರು.

ABOUT THE AUTHOR

...view details