ನವದೆಹಲಿ: ರಾಷ್ಟ್ರೀಯ ವಿಜ್ಞಾನ ದಿನವಾದ ಇಂದು ಭಾರತೀಯ ವಿಜ್ಞಾನಿಗಳ ಪ್ರತಿಭೆ ಮತ್ತು ಸ್ಥಿರತೆಗೆ ಪ್ರಧಾನಿ ನರೇಂದ್ರ ಮೋದಿ ವಂದಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, 'ರಾಷ್ಟ್ರೀಯ ವಿಜ್ಞಾನ ದಿನ ನಮ್ಮ ವಿಜ್ಞಾನಿಗಳ ಪ್ರತಿಭೆ ಮತ್ತು ಸ್ಥಿರತೆಗೆ ನಮಸ್ಕರಿಸುವ ಸಂದರ್ಭವಾಗಿದೆ. ಅವರ ನವೀನ ಉತ್ಸಾಹ ಮತ್ತು ಸಂಶೋಧನೆಯು ಭಾರತ ಮತ್ತು ಜಗತ್ತಿಗೆ ಸಹಾಯ ಮಾಡಿದೆ ಎಂದಿದ್ದಾರೆ.
ಅಲ್ಲದೆ ಭಾರತೀಯ ವಿಜ್ಞಾನವು ಪ್ರವರ್ಧಮಾನಕ್ಕೆ ಬರಲಿ ಮತ್ತು ನಮ್ಮ ಯುವ ಮನಸ್ಸುಗಳು ವಿಜ್ಞಾನದ ಬಗ್ಗೆ ಇನ್ನೂ ಹೆಚ್ಚಿನ ಕುತೂಹಲವನ್ನು ಬೆಳೆಸಿಕೊಳ್ಳಲಿ ಎಂದು ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.
1928 ರಲ್ಲಿ ಈ ದಿನದಂದು ಭಾರತೀಯ ಭೌತಶಾಸ್ತ್ರಜ್ಞ ಸರ್.ಸಿ.ವಿ.ರಾಮನ್ ಅವರು ರಾಮನ್ ಪರಿಣಾಮವನ್ನು ಕಂಡುಹಿಡಿದಿದ್ದರು. ಅದರ ಸವಿನೆನಪಿಗಾಗಿ ಫೆಬ್ರವರಿ 28ರ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿವಾಗಿ ಆಚರಿಸಲಾಗುತ್ತಿದೆ.