ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಕೋಸ್ಟ್ ಗಾರ್ಡ್ ದಿನಕ್ಕೆ ಶುಭಾಶಯ ಕೋರಿದ್ದಾರೆ.
ಭಾರತೀಯ ಕೋಸ್ಟ್ ಗಾರ್ಡ್ ದಿನದ ಶುಭಕೋರಿದ ಪಿಎಂ - ರಕ್ಷಣಾ ಸಚಿವ ರಾಜನಾಥ್ ಸಿಂಗ್
ಕೋಸ್ಟ್ ಗಾರ್ಡ್ 1977 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಫೆ. 1 ನ್ನು ಕೋಸ್ಟ್ ಗಾರ್ಡ್ ದಿನವೆಂದು ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ.
ಕೋಸ್ಟ್ ಗಾರ್ಡ್ ಸಿಬ್ಬಂದಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದಿರುವ ಅವರು, ಕೋಸ್ಟ್ ಗಾರ್ಡ್ 1977 ರಲ್ಲಿ ಅಸ್ತಿತ್ವಕ್ಕೆ ಬಂತು. ದೇಶದ ಕರಾವಳಿ ತೀರವನ್ನು ಸುರಕ್ಷಿತವಾಗಿಡಲು ಸಿಬ್ಬಂದಿ ಮಾಡುತ್ತಿರುವ ಅದ್ಭುತ ಪ್ರಯತ್ನದಿಂದ ಕೋಸ್ಟ್ ಗಾರ್ಡ್ ಛಾಪು ಮೂಡಿಸಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಸಮುದ್ರದ ಪರಿಸರ ಕಾಳಜಿ ಬಗ್ಗೆಯೂ ಅವರು ಮಾಡುತ್ತಿರುವ ಕಾರ್ಯ ಗಮನಾರ್ಹವಾದುದು ಎಂದಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಶುಭಾಶಯ ಕೋರಿದ್ದಾರೆ. ಕೋಸ್ಟ್ ಗಾರ್ಡ್ ಸಿಬ್ಬಂದಿ ಹಾಗೂ ಅವರ ಮನೆಯವರಿಗೆ ಶುಭಾಶಯ ಎಂದಿರುವ ಅವರು, ಸಿಬ್ಬಂದಿ ಕಾರ್ಯಕ್ಕೆ ಸೆಲ್ಯೂಟ್ ಎಂದು ಟ್ವೀಟ್ ಮಾಡಿದ್ದಾರೆ.