ಕರ್ನಾಟಕ

karnataka

ETV Bharat / bharat

ಪಿಎಂ ಇ-ವಿದ್ಯಾ: ಆನ್‌ಲೈನ್ ಶಿಕ್ಷಣ ಉತ್ತೇಜಿಸಲು ಮಲ್ಟಿ-ಮೋಡ್ ಕಾರ್ಯಕ್ರಮ

ಡಿಜಿಟಲ್/ಆನ್‌ಲೈನ್ ಶಿಕ್ಷಣಕ್ಕೆ ಮಲ್ಟಿ-ಮೋಡ್ ಕಾರ್ಯಕ್ರಮವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಕಟಿಸಿದರು.

v
ಪಿಎಂ ಇ-ವಿದ್ಯಾ

By

Published : May 17, 2020, 8:49 PM IST

ಹೈದರಾಬಾದ್: ಡಿಜಿಟಲ್/ಆನ್‌ಲೈನ್ ಶಿಕ್ಷಣಕ್ಕೆ ತಂತ್ರಜ್ಞಾನ-ಚಾಲಿತ ಶಿಕ್ಷಣವು ಕೇಂದ್ರಬಿಂದುವಾಗಿದೆ. ಮಲ್ಟಿ-ಮೋಡ್ ಪಿಎಂ ಇ-ವಿದ್ಯಾ ಕಾರ್ಯಕ್ರಮವನ್ನು ತಕ್ಷಣ ಪ್ರಾರಂಭಿಸಲಾಗುವುದು. 2020 ರ ಮೇ 30 ರೊಳಗೆ ಆನ್‌ಲೈನ್ ಕೋರ್ಸ್‌ಗಳನ್ನು ಸ್ವಯಂಚಾಲಿತವಾಗಿ ಪ್ರಾರಂಭಿಸಲು ಟಾಪ್ 100 ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಮನೋದರ್ಪಣ್​, ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕುಟುಂಬಗಳ ಮಾನಸಿಕ ಹಾಗೂ ಸಾಮಾಜಿಕ ಬೆಂಬಲಕ್ಕಾಗಿ ಪ್ರಾರಂಭಿಸಲಾದ ಉಪಕ್ರಮವಾಗಿದೆ ಎಂದು ಅವರು ಹೇಳಿದರು.

ಶಾಲೆಗಾಗಿ ಹೊಸ ರಾಷ್ಟ್ರೀಯ ಪಠ್ಯಕ್ರಮ ಮತ್ತು ಶಿಕ್ಷಣ ಚೌಕಟ್ಟನ್ನು ಸಹ ಪ್ರಾರಂಭಿಸಲಾಗುವುದು. ಅಂತರ್ಜಾಲದ ಲಭ್ಯತೆ ಇಲ್ಲದ ಕಡೆ ಸ್ವಯಂ ಪ್ರಭಾ ಡಿಟಿಹೆಚ್ ಚಾನೆಲ್‌ಗಳು ಕಾರ್ಯನಿರ್ವಹಿಸಲಿವೆ. ಶಾಲಾ ಶಿಕ್ಷಣಕ್ಕಾಗಿ ಮೂರು ಚಾನೆಲ್‌ಗಳನ್ನು ನಿಗದಿಪಡಿಸಲಾಗಿದೆ. ಈಗ ಮತ್ತೆ 12 ಚಾನೆಲ್‌ಗಳನ್ನು ಸೇರಿಸಲಾಗುವುದು ಎಂದರು.

ದೀಕ್ಷಾ(DIKSHA) ಪ್ಲಾಟ್‌ಫಾರ್ಮ್ ಮಾರ್ಚ್ 24 ರಿಂದ 61 ಕೋಟಿ ಹಿಟ್ ಗಳಿಸಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್​ ಮಾಹಿತಿ ನೀಡಿದ್ರು.

ABOUT THE AUTHOR

...view details