ನವದೆಹಲಿ:ಕೊರೊನಾ ವಿರುದ್ಧದ ಹೋರಾಟದಲ್ಲಿ ಟೊಂಕ ಕಟ್ಟಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಅದರ ವಿರುದ್ಧ ಸಮರ ಸಾರಿದ್ದಾರೆ. ಪ್ರತಿದಿನ ಎಲ್ಲ ರಾಜ್ಯದೊಂದಿಗೆ ನಿಕಟ ಸಂಪರ್ಕ ಸಾಧಿಸಿ ಮಾಹಿತಿ ಕಲೆ ಹಾಕುತ್ತಿದ್ದು, ಜನಸಾಮಾನ್ಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.
ಇಂದು ಕೂಡ ವಿವಿಧ ಪಕ್ಷದ ಮುಖಂಡರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿರುವ ನಮೋ ಮಹತ್ವದ ಮಾಹಿತಿ ಪಡೆದುಕೊಂಡರು. ಇದೇ ವೇಳೆ, ದೇಶದಲ್ಲಿ ಲಾಕ್ಡೌನ್ ವಿಸ್ತರಣೆ ಕುರಿತು ಚರ್ಚೆ ನಡೆಸಿದ್ರು. ಇದರ ಮಧ್ಯೆ ಅವರನ್ನ ಗೌರವಿಸುವ ಉದ್ದೇಶದಿಂದ ದೇಶದ ಜನರು ಐದು ನಿಮಿಷಗಳ ಕಾಲ ಎದ್ದು ನಿಲ್ಲುವ ಅಭಿಯಾನ ನಡೆಸಲಾಗುವುದು ಎಂಬ ಮಾಹಿತಿ ಅವರ ಗಮನಕ್ಕೆ ಬಂದಿದೆ.