ಕರ್ನಾಟಕ

karnataka

ಮೊದಲ ಹಂತದ ಲಸಿಕೆ ವಿತರಣೆಗೆ ಪಿಎಂ ಕೇರ್ಸ್​ ಫಂಡ್​ನಿಂದ 2,200 ಕೋಟಿ ರೂ. ಬಳಕೆ

By

Published : Feb 3, 2021, 3:23 PM IST

ಕಾರ್ಪೊರೇಟ್ ಮತ್ತು ವ್ಯಕ್ತಿಗಳ ಸ್ವಯಂಪ್ರೇರಿತವಾಗಿ ದೇಣಿಗೆ ಸಂಗ್ರಹಿಸಲು 2020ರ ಮಾರ್ಚ್​ನಲ್ಲಿ ಪಿಎಂ ಕೇರ್ಸ್​ ಫಂಡ್​ ಸ್ಥಾಪಿಸಲಾಗಿತ್ತು. ಈ ನಿಧಿಯ ಅಡಿ ನಿಖರವಾದ ಸಂಗ್ರಹದ ಮೊತ್ತ ತಿಳಿದು ಬಂದಿಲ್ಲ. ಆದರೆ, ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಬಳಲುತ್ತಿರುವ ಕ್ಷೇತ್ರಗಳಿಗೆ ಮೀಸಲು ನೆರವು ನೀಡುತ್ತಿದೆ.

PM CARES
PM CARES

ನವದಹಲಿ:ಮುಂಚೂಣಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಚುಚ್ಚುಮದ್ದು ಗುರಿ ಹೊಂದಿರುವ ರಾಷ್ಟ್ರವ್ಯಾಪಿ ಕೋವಿಡ್​-19 ವ್ಯಾಕ್ಸಿನೇಷನ್ ಡ್ರೈವ್‌ನ ಮೊದಲ ಹಂತಕ್ಕೆ ಪಿಎಂ - ಕೇರ್ಸ್​ ನಿಧಿಯಿಂದ 2,200 ಕೋಟಿ ರೂ. ಬಳಸಿಕೊಳ್ಳಲಾಗಿದೆ.

ಕಾರ್ಪೊರೇಟ್ ಮತ್ತು ವ್ಯಕ್ತಿಗಳ ಸ್ವಯಂಪ್ರೇರಿತವಾಗಿ ದೇಣಿಗೆ ಸಂಗ್ರಹಿಸಲು 2020ರ ಮಾರ್ಚ್​ನಲ್ಲಿ ಪಿಎಂ ಕೇರ್ಸ್​ ಫಂಡ್​ ಸ್ಥಾಪಿಸಲಾಗಿತ್ತು. ಈ ನಿಧಿಯ ಅಡಿ ನಿಖರವಾದ ಸಂಗ್ರಹದ ಮೊತ್ತ ತಿಳಿದು ಬಂದಿಲ್ಲ. ಆದರೆ, ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಬಳಲುತ್ತಿರುವ ಕ್ಷೇತ್ರಗಳಿಗೆ ಮೀಸಲು ನೆರವು ನೀಡುತ್ತಿದೆ.

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ತಮ್ಮ 2021ರ ಬಜೆಟ್ ಭಾಷಣದಲ್ಲಿ ವ್ಯಾಕ್ಸಿನೇಷನ್​ಗಾಗಿ 35,000 ಕೋಟಿ ರೂ. ಮೀಸಲಿಡಲಾಗಿದೆ ಎಂದರು. ಜನವರಿಯಿಂದ ಮಾರ್ಚ್​ವರೆಗೆ ವ್ಯಾಕ್ಸಿನೇಷನ್ ವೆಚ್ಚದ ಶೇ 82ಕ್ಕಿಂತ ಹೆಚ್ಚು ಹಣ ಪಿಎಂ-ಕೇರ್ಸ್ ಫಂಡ್ ಭರಿಸುತ್ತಿದೆ.

ಇದನ್ನೂ ಓದಿ: ಪ್ರವಾಸೋದ್ಯಮ ಪ್ರಚಾರಕ್ಕಾಗಿ ಮಾಧ್ಯಮಗಳಲ್ಲಿ 124 ಕೋಟಿ ರೂ. ಖರ್ಚು: ಕೇಂದ್ರ

ಕೇಂದ್ರ ಖರ್ಚು ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಸುದ್ದಿ ಸಂಸ್ಥೆ ಜತೆ ಮಾತನಾಡಿ, ಜನವರಿ-ಮಾರ್ಚ್ ವರೆಗೆ ವ್ಯಾಕ್ಸಿನೇಷನ್ ವೆಚ್ಚವು ಸುಮಾರು 2,700 ಕೋಟಿ ರೂ.ಆಗಿದೆ. ಅದರ ಒಂದು ಭಾಗವು ಆರೋಗ್ಯ ಸಚಿವಾಲಯದಿಂದ ಬರುತ್ತಿದೆ. ಕೆಲವು ಭಾಗವನ್ನು ಪಿಎಂ ಕೇರ್ಸ್​ ನಿಧಿಯಿಂದ ನೀಡಲಾಗುತ್ತದೆ. ಲಸಿಕೆಯ ಮೊದಲ ಸುತ್ತಿನಲ್ಲಿ 3 ಕೋಟಿ ಮುಂಚೂಣಿ ಮತ್ತು ಆರೋಗ್ಯ ಕಾರ್ಯಕರ್ತರ ಇದ್ದಾರೆ ಎಂದರು.

ಮೊದಲ ಹಂತದ ಸಂಪೂರ್ಣ ವೆಚ್ಚವನ್ನು ಕೇಂದ್ರವು ಭರಿಸಲಿದೆ. ವ್ಯಾಕ್ಸಿನೇಷನ್‌ಗೆ ಪ್ರಾಸಂಗಿಕ ವೆಚ್ಚಗಳಿಗಾಗಿ ನಾವು ಆರೋಗ್ಯ ಸಚಿವಾಲಯಕ್ಕೆ ಹೆಚ್ಚುವರಿ ಹಣ ಒದಗಿಸಿದ್ದೇವೆ. ವ್ಯಾಕ್ಸಿನೇಷನ್‌ನ 3 ಕೋಟಿ ಬ್ಯಾಚ್‌ಗೆ ಹೆಚ್ಚುವರಿಯಾಗಿ 480 ಕೋಟಿ ರೂ. ಒದಗಿಸಲಾಗಿದೆ ಎಂದು ಹೇಳಿದರು.

ABOUT THE AUTHOR

...view details