ನವದೆಹಲಿ: ಭಾರತೀಯ ಜನತಾ ಪಾರ್ಟಿ 2024ರ ಲೋಕಸಭಾ ಚುನಾವಣೆಗೆ ಸಿದ್ಧವಾಗುತ್ತಿದ್ದು, ಈ ನಿಟ್ಟಿನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಪಕ್ಷದ ಸಂಸದರಿಗೆ ಕಿವಿಮಾತು ಹೇಳಿದ್ದಾರೆ.
2024ರ ಲೋಕ ಸಮರಕ್ಕೆ ಬಿಜೆಪಿ ರಣತಂತ್ರ... ಜನಪರ ಕಾರ್ಯಗಳೇ ಕೀಲಿಕೈ ಎಂದ ಪ್ರಧಾನಿ ಮೋದಿ - ಸಂಸದರಿಗೆ ಪ್ರಧಾನಿ ಮೋದಿ ಕಿವಿಮಾತು
ಎರಡು ದಿನಗಳ ಕಾಲ ನಡೆದ ಸಂಸದರ ತರಬೇತಿ ಕಾರ್ಯಾಗಾರ 'ಅಭ್ಯಾಸ ವರ್ಗ'ದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ವೋಟ್ ಮಾಡದವರ ಮನ ಗೆಲ್ಲುವತ್ತ ಗಮನ ಹರಿಸಿ ಎಂದಿದ್ದಾರೆ.
![2024ರ ಲೋಕ ಸಮರಕ್ಕೆ ಬಿಜೆಪಿ ರಣತಂತ್ರ... ಜನಪರ ಕಾರ್ಯಗಳೇ ಕೀಲಿಕೈ ಎಂದ ಪ್ರಧಾನಿ ಮೋದಿ](https://etvbharatimages.akamaized.net/etvbharat/prod-images/768-512-4043308-thumbnail-3x2-ks.jpg)
ಸಂಸದರ ಕಾರ್ಯಾಗಾರ
ಎರಡು ದಿನಗಳ ಕಾಲ ನಡೆದ ಸಂಸದರ ತರಬೇತಿ ಕಾರ್ಯಾಗಾರ 'ಅಭ್ಯಾಸ ವರ್ಗ'ದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ವೋಟ್ ಮಾಡದವರ ಮನ ಗೆಲ್ಲುವತ್ತ ಗಮನ ಹರಿಸಿ ಎಂದಿದ್ದಾರೆ.
ಎಲ್ಲ ಸಂಸದರು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಆಸ್ಥೆ ವಹಿಸಬೇಕು. ನಿಮ್ಮ ಜನಪರ ಕೆಲಸಗಳಿಂದ ಬಿಜೆಪಿ ಬಗ್ಗೆ ಜನತೆಯಲ್ಲಿರುವ ಋಣಾತ್ಮಕ ಭಾವನೆಯನ್ನು ಹೋಗಲಾಡಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.