ಕರ್ನಾಟಕ

karnataka

ETV Bharat / bharat

'ಮನ್​ ಕಿ ಬಾತ್​'ನಲ್ಲಿ ವರಕವಿ 'ಬೇಂದ್ರೆ' ಕವನ ವಾಚಿಸಿದ ಪ್ರಧಾನಿ ಮೋದಿ

ಎರಡನೇ ಅವಧಿಗೆ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾತನಾಡಿದರು. ತಮ್ಮ ಮಾತುಗಳ ಮಧ್ಯೆ, ಬೇಂದ್ರೆ ಅವರ ಶ್ರಾವಣ ಕುರಿತ ಕವಿತೆಯನ್ನು ಬಳಸಿಕೊಂಡು ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಶ್ರಾವಣ ಮಾಸದ ಸೌಂದರ್ಯ, ಅದು ಹೊತ್ತು ತರಲಿರುವ ಸಂತಸ, ಸಂಭ್ರಮವನ್ನು ನೆನಪಿಸಿದರು.

ಸಾಂದರ್ಭಿಕ ಚಿತ್ರ

By

Published : Jul 28, 2019, 2:13 PM IST

Updated : Jul 28, 2019, 3:17 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ತಮ್ಮ ಜನಪ್ರಿಯ ಮನ್ ಕಿ ಬಾತ್​ (ಮನದ ಮಾತು) ರೆಡಿಯೋ ಕಾರ್ಯಕ್ರಮದಲ್ಲಿ ಕನ್ನಡ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಶ್ರಾವಣ ಕುರಿತ ಕವಿತೆ ವಾಚನ ಮಾಡಿದರು.

ಎರಡನೇ ಅವಧಿಗೆ ಪ್ರಧಾನಿ ಹುದ್ದೆಗೆ ಏರಿದ ಬಳಿಕ 2ನೇ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾತನಾಡಿದರು. ತಮ್ಮ ಮಾತುಗಳ ಮಧ್ಯೆ ಬೇಂದ್ರೆ ಅವರ ಶ್ರಾವಣ ಕುರಿತ ಕವಿತೆಯನ್ನು ಬಳಸಿಕೊಂಡು ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಶ್ರಾವಣ ಮಾಸದ ಸೌಂದರ್ಯ, ಅದು ಹೊತ್ತು ತರಲಿರುವ ಸಂತಸ, ಸಂಭ್ರಮವನ್ನು ಕೊಂಡಾಡಿದರು.

ನನ್ನ ಪ್ರೀತಿಯ ದೇಶವಾಸಿಗಳೇ, ಜ್ಞಾನ ಪೀಠ ಪ್ರಶಸ್ತಿ ವಿಜೇತ ದತ್ತಾತ್ರೇಯ ರಾಮಚಂದ್ರ ಬೆಂದ್ರೆ ಅವರು ಶ್ರಾವಣ ತಿಂಗಳ ಮಹತ್ವವನ್ನು ಈ ರೀತಿ ವಿವರಿಸಿದರು...

ಹೊಳಿಗೆ ಮತ್ತೆ ಮಳಿಗೆ
ಆಗ್ಯೇದ ಲಗ್ನI ಅದರಾಗ ಭೂಮಿ ಮಗ್ನI

(होडिगे मडिगे आग्येद लग्ना | अदराग भूमि मग्ना )
ಚಿಮುಕಿಸುವ ಮಳೆ ಮತ್ತು ನೀರಿನ ಹರಿವಿನ ನಡುವಿನ ಸಂಬಂಧವು ಅದ್ಭುತವಾಗಿದೆ ಮತ್ತು ಅಂತಹ ಚಮತ್ಕಾರದಿಂದ ಭೂಮಿಯು ಬೆರಗುಗೊಳಿಸುತ್ತದೆ ಎಂದು ವರ್ಣಿಸಿದ್ದಾರೆ.

ಇದೇ ವೇಳೆ ಇತ್ತೀಚೆಗೆ ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದ ಚಂದ್ರಯಾನ-2 ಉಲ್ಲೇಖಿಸಿದ ಪ್ರಧಾನಿ, ಉಡಾವಣೆಯಿಂದ ನಮಗೆ ದೊರತ ಬಹುದೊಡ್ಡ ಬೋಧನೆಗಳು ನಂಬಿಕೆ ಮತ್ತು ನಿರ್ಭಯತೆ ಎಂದು ಚಂದ್ರಯಾನದ ವಿಶೇಷತೆಗಳನ್ನು ಜನತೆಯ ಮುಂದಿಟ್ಟರು.

ವಾರದ ಆರಂಭದಲ್ಲಿ ಎರಡನೇ ಪ್ರಯತ್ನದಲ್ಲಿ ಚಂದ್ರಯನ- 2ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದೇವೆ. ಕೆಲವೊಮ್ಮೆ ನಾವು ನಮ್ಮ ಜೀವನದಲ್ಲಿ ತಾತ್ಕಾಲಿಕ ಹಿನ್ನೆಡೆಗಳನ್ನು ಎದುರಿಸುತ್ತೇವೆ. ಆದರೆ, ಅದನ್ನು ನಿವಾರಿಸುವ ಸಾಮರ್ಥ್ಯವು ನಮ್ಮೊಳಗಿದೆ ಎಂಬುದನ್ನು ಯಾವಾಗಲೂ ನೆನಪಿಡಬೇಕು ಎಂದು ಚಂದ್ರಯಾನ ಉಡಾವಣೆಗೆ ಎದುರಾದ ತಾಂತ್ರಿಕ ದೋಷವನ್ನು ರೂಪಕವಾಗಿ ಬಳಿಸಿಕೊಂಡು ಸಂದೇಶ ನೀಡಿದರು.

ಸಣ್ಣ ವಯಸ್ಸಿನಲ್ಲಿ ಕ್ಯಾನ್ಸರ್​ಗೆ ತುತ್ತಾಗಿ, ಅದರ ವಿರುದ್ಧ ಹೋರಾಡಿ ಗೆದ್ದ ಭಾರತದ 10 ಮಕ್ಕಳನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ರಷ್ಯಾದ ಮಾಸ್ಕೋದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕಕ್ಕೆ ಕೊರಳೊಡಿದ್ದ ಪುಟಾಣಿಗಳು ರಾಷ್ಟ್ರದ ಕೀರ್ತಿಪತಾಕೆಯನ್ನು ಹೆಚ್ಚಿಸಿದ್ದಾರೆ ಎಂದು ಪ್ರಶಂಸಿದರು.

Last Updated : Jul 28, 2019, 3:17 PM IST

ABOUT THE AUTHOR

...view details