ಕರ್ನಾಟಕ

karnataka

ETV Bharat / bharat

ವಿದೇಶದಲ್ಲಿ ಸೆರೆಯಾದ ಮಗನನ್ನು ಭಾರತಕ್ಕೆ ಕರೆತನ್ನಿ: ISIS ಉಗ್ರನ ತಂದೆಯ ಅಳಲು - undefined

ಕಾಶ್ಮೀರ ನಿವಾಸಿ ಫಯಾಸ್​ ಅಹ್ಮದ್, ಐಎಸ್​ಐಎಸ್​ ಉಗ್ರ ಸಂಘಟನೆ ಸೇರಿ, ಇದೀಗ ಸಿರಿಯಾದಲ್ಲಿ ಬಂಧಿತನಾಗಿರುವ ತನ್ನ ಮಗ ಆದಿಲ್​ ಅಹ್ಮದ್​ನನ್ನು ಭಾರತಕ್ಕೆ ವಾಪಸ್​ ಕರೆತನ್ನಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕಾಶ್ಮೀರ

By

Published : Jun 2, 2019, 10:32 PM IST

ಶ್ರೀನಗರ: ಐಎಸ್​ಐಎಸ್​ ಉಗ್ರ ಸಂಘಟನೆ ಸೇರಿ, ಇದೀಗ ಸಿರಿಯಾದಲ್ಲಿ ಬಂಧಿತನಾಗಿರುವ ಮಗನನ್ನು ಭಾರತಕ್ಕೆ ವಾಪಸ್​ ಕರೆತನ್ನಿ ಎಂದು ಕಾಶ್ಮೀರದ ವ್ಯಕ್ತಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕಾಶ್ಮೀರ ನಿವಾಸಿಯ ಫಯಾಸ್​ ಅಹ್ಮದ್​ ಎಂಬುವರ ಈ ಮನವಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಕೇಂದ್ರ ಸರ್ಕಾರಕ್ಕೆ ತಲುಪಿಸಿದ್ದಾರೆ. ತನ್ನ ಮಗ ಆದಿಲ್​ ಸಿರಿಯಾದಲ್ಲಿ ಅಮೆರಿಕ ನೇತೃತ್ವದ ಪಡೆಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಭಾರತಕ್ಕೆ ಕರೆತನ್ನಿ ಎಂದು ಫಯಾಸ್ ಮನವಿ ಮಾಡಿದ್ದಾರೆ.

ಇವರ ಮಗ ಆದಿಲ್​ ಅಹ್ಮದ್​ ಆಸ್ಟ್ರೇಲಿಯಾದ ಕ್ವೀನ್ಸ್​​ಲ್ಯಾಂಡ್​ನಲ್ಲಿ ಎಂಬಿಎ ಪೂರೈಸಿ, ಆನಂತರ ಐಎಸ್​ಐಎಸ್​ ಉಗ್ರ ಸಂಘಟನೆ ಸೇರಿದ್ದನು. ಅಮೆರಿಕಾ ನೇತೃತ್ವದ ಸಿರಿಯಾ ಪಡೆ ಐಎಸ್​ಐಎಸ್​ ಉಗ್ರರೊಂದಿಗೆ ಈತನನ್ನೂ ಬಂಧಿಸಿ, ವಶದಲ್ಲಿರಿಸಿಕೊಂಡಿದೆ ಎಂದು ತಿಳಿದುಬಂದಿದೆ.

2013ರಲ್ಲಿ ಸಿರಿಯಾಗೆ ತೆರಳಿದ್ದ ಆದಿಲ್​, ಎನ್​ಜಿಒದಲ್ಲಿ ಕೆಲಸ ಮಾಡುತ್ತಿದ್ದಾಗಿ ಹೇಳಿಕೊಂಡಿದ್ದ. ಆದರೆ, ಉಗ್ರ ಸಂಘಟನೆ ಸೇರಿದ್ದಾನೆಂದು ನಂಬಲೂ ಸಾಧ್ಯವಾಗುತ್ತಿಲ್ಲ. ಕುಟುಂಬಕ್ಕೆ ಆಧಾರವಾಗಿರುವ ಈತನನ್ನು ಕೇಂದ್ರ ಸರ್ಕಾರ ವಾಪಸ್​ ಕರೆತಂದು, ನಮಗೆ ಒಪ್ಪಿಸಬೇಕು ಎಂದು ಕಂಟ್ರಾಕ್ಟರ್​ ಕೆಲಸ ಮಾಡುತ್ತಿರುವ ಫಯಾಸ್​ ಗೋಗರೆದಿದ್ದಾರೆ. ಹೊಸ ಸರ್ಕಾರ ಖಂಡಿತ ಈ ಕೆಲಸ ಮಾಡುತ್ತೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.

ಫಯಾಸ್​ ಸಲ್ಲಿಸಿರುವ ಅರ್ಜಿಯನ್ನು ಪೊಲೀಸರು ಕೇಂದ್ರದ ಭದ್ರತಾ ಏಜೆನ್ಸಿಗೆ ರವಾನೆ ಮಾಡಿ, ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಒಂದು ವೇಳೆ ಆದಿಲ್​ನನ್ನು ಕರೆತಂದಿದ್ದೇ ಆದರೆ ಆತನನ್ನು ಸಂಪೂರ್ಣವಾಗಿ ತನಿಖೆಗೆೊಳಪಡಿಸಲು ನಮ್ಮ ಸುಪರ್ದಿಗೆ ನೀಡಬೇಕು ಎಂದೂ ಕೇಳಿಕೊಂಡಿದ್ದಾರೆ.

ಭಾರತೀಯ ಪಾಸ್​ಪೋರ್ಟ್​ ಮೂಲಕ ಟರ್ಕಿಗೆ ಹೋಗಿದ್ದ ಆದಿಲ್​ ಉಗ್ರ ಸಂಘಟನೆಯೊಂದಿಗೆ ಸಂಪರ್ಕಕ್ಕೆ ಬಂದಿದ್ದ. ಆನಂತರ ಐಎಸ್​ಐಎಸ್​ ನಿಯಂತ್ರಿತ ಸಿರಿಯಾಗೆ ತೆರಳಿ, ತಾನು ಮಡುವೆಯಾದ ಡಚ್ ಮಹಿಳೆಯೊಂದಿಗೆ ಉಗ್ರ ಸಂಘಟನೆ ಸೇರಿದ್ದ. ಯುಎಸ್​ ನೇತೃತ್ವದ ಪಡೆಗೆ ಶರಣಾದ ನೂರಾರು ಉಗ್ರರಲ್ಲಿ ಆದಿಲ್ ಸಹ ಇದ್ದಾನೆ ಎಂದು ಆತನ ಪತ್ನಿ ಸಂದೇಶ ಕಳುಹಿಸಿದ್ದಾಳೆ ಎಂದು ತಿಳಿದುಬಂದಿದೆ.

For All Latest Updates

TAGGED:

ABOUT THE AUTHOR

...view details