ನವದೆಹಲಿ:ದೇಶದ ಕೆಲ ರಾಜ್ಯಗಳಲ್ಲಿ ಹಿಂದೂಗಳು, ಯಹೂದಿಗಳು ಹಾಗೂ ಬಹಾಯಿಸಂ ಅನುಯಾಯಿಗಳನ್ನು ಅಲ್ಪಸಂಖ್ಯಾತರಾಗಿ ಘೋಷಿಸುವಂತೆ ಕೋರಿ ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಹಿಂದೂ, ಯಹೂದಿ - ಬಹಾಯಿಸಂ ಅನುಯಾಯಿಗಳನ್ನು ಅಲ್ಪಸಂಖ್ಯಾತರಾಗಿ ಘೋಷಿಸಿ: ಸುಪ್ರೀಂಗೆ ಅರ್ಜಿ - ಯಹೂದಿ
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಪಂಜಾಬ್, ಮಣಿಪುರ, ಲಕ್ಷದ್ವೀಪ, ಕಾಶ್ಮೀರ ಹಾಗೂ ಲಡಾಖ್ನಲ್ಲಿ ಹಿಂದೂ, ಯಹೂದಿ ಹಾಗೂ ಬಹಾಯಿಸಂ ಅನುಯಾಯಿಗಳನ್ನು ಅಲ್ಪಸಂಖ್ಯಾತರಾಗಿ ಘೋಷಿಸುವಂತೆ ಅರ್ಜಿಯೊಂದು ಸುಪ್ರೀಂ ಮೆಟ್ಟಿಲೇರಿದೆ.

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಪಂಜಾಬ್, ಮಣಿಪುರ, ಲಕ್ಷದ್ವೀಪ, ಕಾಶ್ಮೀರ ಹಾಗೂ ಲಡಾಖ್ನಲ್ಲಿ ಈ ಘೋಷಣೆ ಮಾಡಬೇಕು ಎಂದು ಅವರು ಅರ್ಜಿ ಸಲ್ಲಿಸಿದ್ದಾರೆ.
ಉಲ್ಲೇಖಿತ ರಾಜ್ಯಗಳಲ್ಲಿ ಈ 3 ಧರ್ಮಗಳ ಜನಸಂಖ್ಯೆಯ ದತ್ತಾಂಶವನ್ನು ಉಲ್ಲೇಖಿಸಿರುವ ಅವರು, ಈ ಮೂರು ಧರ್ಮಗಳ ಜನರನ್ನು ಅಲ್ಪಸಂಖ್ಯಾತರನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಇವರು ಈ ರಾಜ್ಯಗಳಲ್ಲಿ ನಿಜವಾದ ಅಲ್ಪಸಂಖ್ಯಾತರು. ಆದರೆ, ರಾಜ್ಯ ಮಟ್ಟದಲ್ಲಿ ಅವರು ಅಲ್ಪಸಂಖ್ಯಾತರಾಗಿ ಗುರುತಿಸದ ಕಾರಣ, ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ಅದನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.