ನವದೆಹಲಿ: ಕೋವಿಡ್19 ವೈರಸ್ ತಡೆಯಲು ಮೇ 3 ರವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ದೇಶದ ಜನರಿಗೆ ಮೊಬೈಲ್‌ನ ಅನಿಯಮಿತ ಉಚಿತ ಕರೆ ಮತ್ತು ಡೇಟಾ ಕೊಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಇಂದು ಅರ್ಜಿ ಸಲ್ಲಿಕೆಯಾಗಿದೆ.
ಲಾಕ್‌ಡೌನ್ ವೇಳೆ ಉಚಿತ ಕರೆ, ಮೊಬೈಲ್ ಡೇಟಾ ಕೊಡಿಸಿ: ಸುಪ್ರೀಂಕೋರ್ಟ್‌ಗೆ ಅರ್ಜಿ - ಸಾರ್ವಜನಿಕ ಹಿತಾಸಕ್ತಿ ಅರ್ಜಿ
ಲಾಕ್‌ಡೌನ್ ಅವಧಿಯಲ್ಲಿ ದೇಶದ ಜನರಿಗೆ ಮೊಬೈಲ್‌ನ ಅನಿಯಮಿತ ಉಚಿತ ಕರೆ ಮತ್ತು ಡೇಟಾ ಕೊಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್
ಹೀಗೆಂದು ವಕೀಲರಾದ ಮನೋಹರ್ ಪ್ರತಾಪ್ ಎಂಬುವವರು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಮೊಬೈಲ್ ಸೇವೆಗಳ ಜೊತೆಗೆ ಅಮೆಜಾನ್, ನೆಟ್‌ಫ್ಲಿಕ್ಸ್‌ನಂತಹ ಮನರಂಜನಾ ವೆಬ್ಸೈಟ್ಗಳ ಸೇವೆಯನ್ನೂ ಉಚಿತವಾಗಿ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಲಾಕ್‌ಡೌನ್ ಮುಗಿಯುವ ವರೆಗೆ ಈ ಉಚಿತ ಸೇವೆಗಳನ್ನು ನೀಡುವಂತೆ ಆಯಾ ಸಂಸ್ಥೆಗಳಿಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
Last Updated : Apr 16, 2020, 5:40 PM IST