ಕರ್ನಾಟಕ

karnataka

By

Published : Dec 4, 2020, 11:56 AM IST

ETV Bharat / bharat

ಯುಪಿ, ಉತ್ತರಾಖಂಡ್​ ಲವ್ ಜಿಹಾದ್ ಸುಗ್ರೀವಾಜ್ಞೆಗಳ ವಿರುದ್ಧ ಸುಪ್ರೀಂಗೆ ಮನವಿ

ಉತ್ತರ ಪ್ರದೇಶ ಮತ್ತು ಉತ್ತರಾಖಂಡ್​ನಲ್ಲಿ ಲವ್ ಜಿಹಾದ್​​ಗೆ ಅನುಮೋದನೆ ದೊರೆತಿರುವುದನ್ನು ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಮೂಲಕ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಪ್ರಶ್ನಿಸಿ ಸುಪ್ರೀಂಕೋರ್ಟ್​​ನಲ್ಲಿ ಮನವಿ ಸಲ್ಲಿಸಲಾಗಿದೆ.

Uttar pradesh love jihad
ಸುಪ್ರೀಂಗೆ ಮನವಿ

ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡ್​ನಲ್ಲಿ ಲವ್ ಜಿಹಾದ್​​ಗೆ ಸುಗ್ರೀವಾಜ್ಞೆ ಹೊರಡಿಸಿ ಅನುಮೋದನೆ ನೀಡಿರುವುದು ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಯತ್ನ ಎಂದು ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಕೆಯಾಗಿದೆ.

ಉತ್ತರಪ್ರದೇಶದ ಕಾನೂನುಬಾಹಿರ ಮತಾಂತರ ನಿಷೇಧ- 2020 ಕಾನೂನು ಮತ್ತು ವಿಧಿ ವಿರುಧ್ ಧರ್ಮಾಂತರನ್-2020' ವಿರುದ್ಧ ಇಬ್ಬರು ವಕೀಲರು ಮತ್ತು ಕಾನೂನು ಸಂಶೋಧಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಯುಪಿ ಸರ್ಕಾರ ಹೊರಡಿಸಿರುವ ಈ ಸುಗ್ರೀವಾಜ್ಞೆಯು ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಮೂಲಕ ಸಂವಿಧಾನಕ್ಕೆ ವಿರುದ್ಧವಾದ ನಡೆಯಾಗಿದೆ. "ಲವ್ ಜಿಹಾದ್" ಹೆಸರಿನಲ್ಲಿ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳಬಹುದು ಮತ್ತು ವಿಶೇಷ ವಿವಾಹ ಕಾಯ್ದೆ 1954 ಗೆ ಇದು ವಿರುದ್ಧವಾಗಿದೆ ಎಂದು ಅರ್ಜಿದಾರರು ಉಲ್ಲೇಖಿಸಿದ್ದಾರೆ. "ಸುಗ್ರೀವಾಜ್ಞೆ ಅಂಗೀಕಾರವಾದ ಕಾರಣ, ಯಾವುದೇ ತಪ್ಪು ಮಾಡದ ವ್ಯಕ್ತಿಗಳು / ನಾಗರಿಕರಿಗೆ ಅನ್ಯಾಯವಾಗಲಿದೆ ಎಂಬುದು ಅರ್ಜಿದಾರರ ವಾದವಾಗಿದೆ.

ಇದನ್ನೂ ಓದಿ:ಯೋಗಿ ಸರ್ಕಾರದಿಂದ ಲವ್ ಜಿಹಾದ್ ವಿರುದ್ಧ 'ವಿಧಿ ವಿರುಧ್ ಧರ್ಮಾಂತರನ್' ಸುಗ್ರೀವಾಜ್ಞೆ

ಈ ಸುಗ್ರೀವಾಜ್ಞೆಯು ಲವ್​ ಜಿಹಾದ್​ ಪ್ರಕರಣಗಳಲ್ಲಿ ಅನ್ಯಾಯವಾಗುವ ರೀತಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳಲು ಕೆಲವು ಜನರ ಕೈಗೆ ಅಸ್ತ್ರವಾಗಲಿದೆ ಎಂದಿರುವ ಅರ್ಜಿದಾರರು, ಇದರಿಂದ ನಾಗರಿಕರಿಗೆ ಅನ್ಯಾಯವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಆರ್ಟಿಕಲ್ 32 ರ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ ವಕೀಲರು ಸಂವಿಧಾನದ ಯಾವುದೇ ನಿಬಂಧನೆಯನ್ನು ಉಲ್ಲಂಘಿಸಿದರೆ ಕಾನೂನನ್ನು ಅಮಾನ್ಯವೆಂದು ಘೋಷಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇದೆ. ಆಕ್ಷೇಪಾರ್ಹ ನಿಬಂಧನೆಗಳು/ಸುಗ್ರೀವಾಜ್ಞೆಗೆ ಪರಿಣಾಮ ಬೀರದಂತೆ ನಿರ್ದೇಶಿಸಿ ಮತ್ತು ಅದನ್ನು ಹಿಂತೆಗೆದುಕೊಳ್ಳಿ ಅಥವಾ ಪರ್ಯಾಯವಾಗಿ ನ್ಯಾಯಾಲಯವು ಸೂಕ್ತವೆಂದು ಭಾವಿಸಿದಂತೆ ಮಾರ್ಪಡಿಸಿ" ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಅರ್ಜಿದಾರರು ಗೋಲಾಖ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್ ಪ್ರಕರಣವನ್ನು ಉಲ್ಲೇಖಿಸಿ, ಸಂಸತ್ತಿನ ನಿರಂಕುಶಾಧಿಕಾರವನ್ನು ಹತ್ತಿಕ್ಕುವ ಪರಿಣಾಮವನ್ನು ಹೊಂದಿರುವ ಕಾನೂನನ್ನು ಜಾರಿಗೆ ತರುವ ಮೂಲಕ ನಾಗರಿಕರ ಮೂಲಭೂತ ಹಕ್ಕುಗಳಿಗೆ ಚ್ಯುತಿ ತರುತ್ತಿದೆ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ 'ವಿಧಿ ವಿರುಧ್ ಧರ್ಮಾಂತರನ್-2020' ಎಂಬ ಹೆಸರಿನಲ್ಲಿ ಉತ್ತರಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದ್ದು, ಲವ್ ಜಿಹಾದ್ ಅನ್ನು ಕಾನೂನು ಬಾಹಿರ ಮತಾಂತರ ಎಂದು ಘೋಷಿಸಲಾಗಿದೆ. ಈ ಸುಗ್ರೀವಾಜ್ಞೆ ಪ್ರಕಾರ ಬಲವಂತದ ಮತದಾನ ಹಾಗೂ ಲವ್ ಜಿಹಾದ್​, ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡವರಿಗೆ ಸುಮಾರು 5 ರಿಂದ 10 ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದಾಗಿದೆ.

ABOUT THE AUTHOR

...view details