ಕರ್ನಾಟಕ

karnataka

ETV Bharat / bharat

ಸಾಮಾನ್ಯ ಕೇಸ್​ಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್​ ಬಳಸಲು ದೆಹಲಿ ಹೈಕೋರ್ಟ್​ಗೆ ಮನವಿ - ನ್ಯಾಯಾಂಗ ಕಾರ್ಯಗಳು

ವಕೀಲ ಎಸ್. ಬಿ. ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯಲ್ಲಿ ಇ-ಫೈಲಿಂಗ್ ಮತ್ತು ವಿಡಿಯೋ ಕಾನ್ಫರೆನ್ಸ್​ ಮೂಲಕ ಸಾಮಾನ್ಯ ವಿಚಾರಣೆಗಳನ್ನು ಪುನರಾರಂಭಿಸಲು ಆದೇಶ ಹೊರಡಿಸುವಂತೆ ಹೈಕೋರ್ಟ್​ಗೆ ಕೋರಿದರು.

Delhi HC
ದೆಹಲಿ ಹೈಕೋರ್ಟ್​

By

Published : Jun 7, 2020, 12:56 AM IST

ನವದೆಹಲಿ: ವಿಡಿಯೋ ಕಾನ್ಫರೆನ್ಸ್​ ಮತ್ತು ಇ ಫೈಲಿಂಗ್ ಮೂಲಕ ರಾಷ್ಟ್ರ ರಾಜಧಾನಿಯ ಎಲ್ಲ ನ್ಯಾಯಾಲಯಗಳಲ್ಲಿ ಸಾಮಾನ್ಯ ಪ್ರಕರಣಗಳ ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ ಅರ್ಜಿ ಸಲ್ಲಿಕೆ ಮಾಡಿದೆ.

ಮೇ 29ರಂದು ಹೊರಡಿಸಲಾದ ಆಡಳಿತಾತ್ಮಕ ಆದೇಶದಲ್ಲಿ ಕೋವಿಡ್​-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಜೂನ್ 14ರವರೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತುರ್ತು ವಿಚಾರಣೆ ನಡೆಸುವಂತೆ ಹೈಕೋರ್ಟ್ ಸೂಚಿಸಿದೆ. ಈ ಆದೇಶವು ನಗರದ ಎಲ್ಲ ಜಿಲ್ಲಾ ನ್ಯಾಯಾಲಯಗಳಿಗೂ ಅನ್ವಯಿಸುತ್ತದೆ.

ಎಲ್ಲ ಬೆಂಚ್​ಗಳು ಈಗ ಸ್ಥಗಿತವಾಗಿವೆ. ಇ-ಫೈಲಿಂಗ್ ಮೂಲಕ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಅಷ್ಟೊಂದು ತುರ್ತು ಅಲ್ಲದ ಬಾಕಿ ಉಳಿದ ಮತ್ತು ಹೊಸ ವಿಚಾರಣೆಗೆ ಯಾವುದೇ ಅಡ್ಡಿಯಿಲ್ಲ ಎಂದು ಮನವಿಯಲ್ಲಿ ವಾದಿಸಲಾಯಿತು.

ನಿಯಮಿತವಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ತುರ್ತುರಹಿತ ವಿಚಾರಣೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ನ್ಯಾಯಾಲಯಗಳ ಕಾರ್ಯನಿರ್ವಹಣೆ ನಿರ್ಬಂಧಿಸಿರುವುದರಿಂದ ಪ್ರಕರಣಗಳ ಬಾಕಿ ಉಳಿಯಲಿವೆ ಮತ್ತು ವಕೀಲರು ಆರ್ಥಿಕವಾಗಿ ಕಷ್ಟಕ್ಕೆ ಈಡಾಗುತ್ತಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ABOUT THE AUTHOR

...view details