ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಗಂಭೀರಗೊಂಡ ಕೋವಿಡ್-19 ರೋಗಿಗಳ ಪ್ರಾಣ ಉಳಿಸಲು 'ಪ್ಲಾಸ್ಮಾ ಬ್ಯಾಂಕ್' ಸ್ಥಾಪಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಜ್ರಿವಾಲ್, ಮುಂದಿನ ಎರಡು ದಿನಗಳಲ್ಲಿ ಈ ಪ್ಲಾಸ್ಮಾ ಬ್ಯಾಂಕ್ ಕೆಲಸ ಮಾಡಲು ಪ್ರಾರಂಭಿಸಲಿದೆ ಎಂದಿದ್ದಾರೆ. ಅಲ್ಲದೆ ಕೋವಿಡ್ -19 ನಿಂದ ಚೇತರಿಸಿಕೊಂಡವರಿಗೆ ತಮ್ಮ ಪ್ಲಾಸ್ಮಾ ದಾನ ಮಾಡಲು ಎಎಪಿ ಸರ್ಕಾರ ಉತ್ತೇಜನ ನೀಡುತ್ತದೆ ಎಂದು ಹೇಳಿದರು.
ಅರವಿಂದ್ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ ಪ್ಲಾಸ್ಮಾ ದಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸರ್ಕಾರವು ಸಹಾಯವಾಣಿ ಸ್ಥಾಪಿಸಲಾಗುವುದು. ನಮ್ಮ ಸರ್ಕಾರವು ಈವರೆಗೆ 29 ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆಯ ಕ್ಲಿನಿಕಲ್ ಪ್ರಯೋಗವನ್ನು ನಡೆಸಿದೆ ಮತ್ತು ಇದರ ಫಲಿತಾಂಶವು ಉತ್ತೇಜನಕಾರಿಯಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಇನ್ನು ಕೋವಿಡ್ -19 ನಿಂದ ಮೃತಪಟ್ಟ ಎಲ್‌ಎನ್‌ಜೆಪಿ ಆಸ್ಪತ್ರೆ ವೈದ್ಯ ಡಾ.ಅಸೀಮ್ ಗುಪ್ತಾ ಅವರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.