ಕರ್ನಾಟಕ

karnataka

ETV Bharat / bharat

ಅಕ್ಟೋಬರ್ 13ರಂದು ಭೂಮಿಯ ಸಮೀಪ ಬರಲಿದೆ ಮಂಗಳ ಗ್ರಹ - ಭೂಮಿಯ ಸಮೀಪ ಬರಲಿರುವ ಮಂಗಳ ಗ್ರಹ

ಅಕ್ಟೋಬರ್ 13ರಂದು ಮಂಗಳ ಗ್ರಹ ಭೂಮಿಗೆ ಅತ್ಯಂತ ಸಮೀಪ ಬರಲಿದೆ. ಭೂಮಿಗೆ 6.2 ಕೋಟಿ ಕಿಲೋ ಮೀಟರ್ ದೂರದಷ್ಟು ಸಮೀಪಿಸಿ ಮಂಗಳ ಗ್ರಹ ದೊಡ್ಡದಾಗಿ, ಕೆಂಪಾಗಿ ಹಾಗೂ ಸುಂದರವಾಗಿ ಕಾಣಲಿದೆ.

mars
mars

By

Published : Oct 8, 2020, 3:51 PM IST

ವಾಷಿಂಗ್ಟನ್:ಅಕ್ಟೋಬರ್ 13ರಂದು ಮಂಗಳ ಗ್ರಹ ಭೂಮಿಗೆ ಅತ್ಯಂತ ಸಮೀಪ ಬರಲಿದೆ. ಈ ಸಂದರ್ಭದಲ್ಲಿ ಮಂಗಳ ಗ್ರಹ ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಹಾಗೂ ಸೂರ್ಯನಿಗೂ ಸಮೀಪದಲ್ಲಿ ಇರಲಿದೆ.

ಸುಮಾರು 24 ಕೋಟಿ ಕಿಲೋ ಮೀಟರ್ ದೂರದಲ್ಲಿ ಸೂರ್ಯನಿಗೆ ಸುತ್ತು ಬರಲು ಮಂಗಳ ಗ್ರಹಕ್ಕೆ ಸುಮಾರು 687 ದಿನಗಳು ಬೇಕು.

ಭೂಮಿ ಸುಮಾರು 15 ಕೋಟಿ ಕಿಲೋ ಮೀಟರ್ ದೂರದಲ್ಲಿ ಸೂರ್ಯನನ್ನು ಸುತ್ತುವುದರಿಂದ ಭೂಮಿ ಹಾಗೂ ಮಂಗಳ ಗ್ರಹಗಳು 2 ವರ್ಷಗಳಿಗೊಮ್ಮೆ ಸಮೀಪಿಸುತ್ತವೆ.

ಅಕ್ಟೋಬರ್ 13ರಂದು ಭೂಮಿಗೆ 6.2 ಕೋಟಿ ಕಿಲೋ ಮೀಟರ್ ದೂರದಷ್ಟು ಸಮೀಪಿಸಿ ಮಂಗಳ ಗ್ರಹ ದೊಡ್ಡದಾಗಿ, ಕೆಂಪಾಗಿ ಹಾಗೂ ಸುಂದರವಾಗಿ ಕಾಣಲಿದೆ.

ಮಂಗಳ ಗ್ರಹವು ಚಂದ್ರನಿಗಿಂತ 160 ಪಟ್ಟು ಹೆಚ್ಚು ದೊಡ್ಡದಾಗಿದೆ. ಅಕ್ಟೋಬರ್ 13 ಕಳೆದರೆ ಇನ್ನು ಮುಂದಕ್ಕೆ 2035ರ ತನಕ ಮಂಗಳ ಗ್ರಹ ಭೂಮಿಗೆ ಇಷ್ಟೊಂದು ಸಮೀಪ ಬರುವುದಿಲ್ಲ.

ABOUT THE AUTHOR

...view details