ಕರ್ನಾಟಕ

karnataka

ETV Bharat / bharat

ಗಾಲ್ವಾನ್​​​ ಗಡಿ ಸಂಬಂಧ ಭಾರತದೊಂದಿಗೆ ಮಾತುಕತೆ ಮುಂದುವರಿಯಲಿದೆ ಎಂದ ಚೀನಾ

ಲಡಾಖ್​​​​ನ ಗಾಲ್ವಾನ್​​ ಕಣಿವೆಯಿಂದ ಚೀನಾ ತನ್ನ ಸೇನೆಯನ್ನ ಹಿಂದಕ್ಕೆ ಕರೆಸಿಕೊಂಡಿದೆ. ಅಲ್ಲದೆ ಬೀಜಿಂಗ್​ ಹಾಗೂ ದೆಹಲಿ ನಡುವೆ ಮಿಲಿಟರಿ ಹಾಗೂ ರಾಜತಾಂತ್ರಿಕತೆ ಮೂಲಕ ಮಾತುಕತೆ ಮುಂದುವರಿಯಲಿದೆ ಎಂದು ಚೀನಾ ತಿಳಿಸಿದೆ.

PLA, Indian troops took 'effective measures' to disengage: China
ಗಾಲ್ವಾನ್​​​ ಗಡಿ ಸಂಬಂಧ ಭಾರತದೊಂದಿಗೆ ಮಾತುಕತೆ ಮುಂದುವರಿಯಲಿದೆ ಎಂದ ಚೀನಾ

By

Published : Jul 9, 2020, 5:17 PM IST

ಬೀಜಿಂಗ್​ (ಚೀನಾ): ಪೂರ್ವ ಲಡಾಖ್​​​​​​ನ ಗಡಿರೇಖೆಯಿಂದ ಸದ್ಯ ವಾಪಸ್​ ತೆರಳಿರುವ ಚೀನಾ ಸೇನೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಬಗ್ಗೆ ಮಾತನಾಡುತ್ತಿದೆ. ಅಲ್ಲದೆ ಗಾಲ್ವಾನ್​ ಕಣಿವೆ ಹಾಗೂ ಲಡಾಖ್​​​ನ ವಾಸ್ತವಿಕ ನಿಯಂತ್ರಣ ರೇಖೆ (ಎಲ್​​​ಎಸಿ) ಪರಿಸ್ಥಿತಿ ಸುಧಾರಿಸುತ್ತಿದೆ. ಈ ರೇಖೆಯಿಂದ ಚೀನಾ ಹಾಗೂ ಭಾರತೀಯ ಸೇನೆಯನ್ನು ಮುಕ್ತವಾಗಿಸಲು ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಚೀನಾ ತಿಳಿಸಿದೆ.

ಚೀನಾದ ಮಿಲಿಟರಿಯ ಎಲ್ಲಾ ತಾತ್ಕಾಲಿಕ ಬೇಸ್​ಗಳು ಮತ್ತು ಪೂರ್ವ ಲಡಾಖ್​​ನಲ್ಲಿದ್ದ ಸೇನಾ ವಲಯವನ್ನು ತೆರವುಗೊಳಿಸಿದ್ದು, ಭಾರತ-ಚೀನಾ ಸೈನಿಕರು ಮುಖಾಮುಖಿಯಾಗಿದ್ದ ಸ್ಥಳದಿಂದ ಸೇನೆಯನ್ನು ಸಂಪೂರ್ಣ ಹಿಂದಕ್ಕೆ ಕರೆಸಿಕೊಂಡಿರುವುದರ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್​ ತಿಳಿಸಿದ್ದರು.

ಅಲ್ಲದೆ ಭಾರತ-ಚೀನಾ ನಡುವಿನ ಘರ್ಷಣೆ ಸಂಬಂಧ ಕಮಾಂಡರ್ ಮಟ್ಟದ ಮಾತುಕತೆ ಮುಂದುವರಿದಿದೆ. ಗಾಲ್ವಾನ್ ಕಣಿವೆಯಲ್ಲಿ ಸೈನ್ಯ ಕಾರ್ಯಾಚರಣೆ ಹಿಂತೆಗೆಯಲು ಉಭಯ ದೇಶಗಳು ಪರಿಣಾಮಕಾರಿ ಕ್ರಮ ಕೈಗೊಂಡಿವೆ ಎಂದಿದ್ದಾರೆ. ಸದ್ಯ ಗಡಿಯಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ಯಥಾಸ್ಥಿತಿ ಮುಂದುವರಿಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉಭಯ ದೇಶಗಳ ನಡುವಿನ ಮಾತುಕತೆಯ ಬಗ್ಗೆ ವಿವರಿಸಿದ ಝಾವೋ, ಎರಡು ದೇಶಗಳ ನಡುವೆ ಮಿಲಿಟರಿ ಹಾಗೂ ರಾಜತಾಂತ್ರಿಕ ಮಟ್ಟದ ಮಾತುಕತೆ ಮುಂದುವರಿಯಲಿದೆ. ಗಡಿ ವ್ಯವಹಾರಗಳ ಕುರಿತ ಮಾತುಕತೆಯ ವೇಳೆ ವರ್ಕಿಂಗ್​ ಮೆಕ್ಯಾನಿಸಮ್​​​​ ಕುರಿತಂತೆಯೂ ಸಮಾಲೋಚನೆ ನಡೆಯಲಿದೆ ಎಂದಿದ್ದಾರೆ.

ಭಾನುವಾರದಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​​​ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್​​​​​​ ಯಿ ನಡುವೆ ನಡೆದ ದೂರವಾಣಿ ಮಾತುಕತೆಯ ಬಳಿಕ ಉಭಯ ದೇಶಗಳ ಸೇನಾ ಹಿಂಪಡೆಯುವ ಕಾರ್ಯ ಆರಂಭವಾಗಿತ್ತು. ಗಡಿಯಲ್ಲಿ ಶಾಂತಿಯನ್ನು ಮರಳಿ ತರುವ ಉದ್ದೇಶದಿಂದ ಎರಡು ದೇಶಗಳು ಸೇನೆ ಕರೆಸಿಕೊಳ್ಳಲು ನಿರ್ಧರಿಸಿದ್ದವು.

ABOUT THE AUTHOR

...view details